ಉಬುಂಟುವಿನಲ್ಲಿ ಲಾಗಿನ್ ಆಗುವಾಗ, ನಿಮ್ಮ ಹೆಸರಿನ ಕೆಳಗೆ ’Guest’ ಎಂಬ ಹೆಸರಿನ ಬಳಕೆದಾರನನ್ನೂ ಕಾಣುತ್ತೀರಲ್ಲವೇ? ಅದನ್ನು ಎಂದಾದರು ಕ್ಲಿಕ್ ಮಾಡಿ ನೋಡಿದ್ದೀರಾ? ಕ್ಲಿಕ್ ಮಾಡಿದ್ದೇ ಆದಲ್ಲಿ, ಪಾಸ್‌ವರ್ಡ್ ಇಲ್ಲದೆಯೇ ಯಾರು ಬೇಕಾದರೂ ನಿಮ್ಮ ಕಂಪ್ಯೂಟರಿನಲ್ಲಿ ಇದರ ಮೂಲಕ ಕೆಲಸ ಮಾಡಬಹುದು.
ಸುರಕ್ಷೆಯ ವಿಚಾರವಾಗಿ ನಾವು ಈ Guest ಬಳಕೆದಾರನನ್ನು ನಿರ್ಬಂಧಿಸಬಹುದು.
ಮೊದಲಿಗೆ ಈ ಕೆಳಗಿನ ಕಮ್ಯಾಂಡ್ ಅನ್ನು ಟರ್ಮಿನಲ್ ನಲ್ಲೋ ಅಥವಾ Alt+F2 ಪ್ರೆಸ್ ಮಾಡಿದಾಗ ಬರುವ ಪ್ರಾಮ್ಟ್ ನಲ್ಲೋ ಟೈಪಿಸಿ.
sudo gedit /etc/lightdm/lightdm.conf
ನಿಮ್ಮ ಮುಂದೆ ಬರುವ ಕಡತದಲ್ಲಿ ಈ ಕೆಳಗಿನ ಸಾಲುಗಳನ್ನು ಕಾಣುತ್ತೀರಿ
[SeatDefaults]
greeter-session=unity-greeter
user-session=ubuntu
ಈ ಸಾಲುಗಳಿಗೆ ಕೆಳಗಿನ ಸಾಲೊಂದನ್ನು ಸೇರಿಸಿ, ಸೇವ್ ಮಾಡಿದರೆ ಆಯ್ತು.
allow-guest=false
Guest ಬಳಕೆದಾರ ನಿಮ್ಮ ಕಂಪ್ಯೂಟರ್ ರೀಸ್ಟಾರ್ಟ್ ಆದ ನಂತರದಿಂದ ಲಾಗಿನ್ ಆಗಲು ಸಾಧ್ಯವಾಗುವುದಿಲ್ಲ.
ಸೂಚನೆ: ಡೆಸ್ಕ್‌ಟಾಪ್‌ನ ಬಲ ಮೂಲೆಯಲ್ಲಿ ಕಾಣುವ ನಿಮ್ಮ ಪ್ರೊಫೈಲ್ ಮೆನು ಕೂಡ ಇದರಿಂದ ಕಾಣೆಯಾಗುತ್ತದೆ
ಇದನ್ನು ಮತ್ತೆ ಎನೇಬಲ್ ಮಾಡಲು, ಮೇಲೆ ಸೇರಿಸಿದ ಸಾಲನ್ನು ತೆಗೆದರೆ ಆಯ್ತು.
ನಿಮ್ಮ ಪ್ರತಿಕ್ರಿಯೆಗಳು