ಕನ್ನಡ ವಿಕಿಪೀಡಿಯಕ್ಕೆ ೯ರ ಸಂಭ್ರಮ

ಸ್ವತಂತ್ರವಾಗಿ ಜ್ಞಾನವನ್ನು ಹಂಚಿಕೊಳಲು ಇರುವ ವಿಶ್ವಕೋಶ ವಿಕಿಪೀಡಿಯ(https://wikipedia.org). ನಿಮಗೆ ಈ ಮೊದಲೇ ತಿಳಿಯದಿದ್ದರೆ, ಕನ್ನಡದಲ್ಲೂ ಇದರ ಆವೃತ್ತಿ ಲಭ್ಯವಿದೆ. ೧೨ ಸಾವಿರದಷ್ಟು ಲೇಖನಗಳು ನನ್ನ ಹಾಗೂ ನಿಮ್ಮಂತಹವರ ಶ್ರಮದಿಂದ ಕನ್ನಡ ವಿಕಿಪೀಡಿಯದಲ್ಲಿ ಲಭ್ಯವಿದೆ. ಸಮುದಾಯದ ಹಾಗು ಮಾನವನ ಒಳಿತಿಗೆ ಜಿಮ್ಮಿ ವೇಲ್ಸ್ ಸೃಷ್ಟಿಸಿದ ಈ ವೇದಿಕೆ ೨೦೦ ಕ್ಕೂ ಹೆಚ್ಚು ಭಾಷೆಗಳಲ್ಲಿ ವಿಶ್ವದ ಜನರಿಗೆ ಜ್ಞಾನದ ಹರಿವನ್ನು ಹಂಚುತ್ತಿದೆ. ಕನ್ನಡ ವಿಕಿಪೀಡಿಯ ಜೂನ್ ೧೨ ರಂದು ೯ ವರ್ಷಗಳನ್ನು ಪೂರೈಸಿತು. ಈ ಸಂದರ್ಭವನ್ನು ಅನೇಕ ಕನ್ನಡಿಗರು, ತಮ್ಮ ಗೆಳೆಯರು ಹಾಗೂ ಸಹೋದ್ಯೋಗಿಗಳ ಜೊತೆ ವಿಕಿಪೀಡಿಯದ ಮಾಹಿತಿಯನ್ನು ಹಂಚಿಕೊಂಡು, ಮತ್ತಷ್ಟು ಜನರನ್ನು ತಮ್ಮ ಜ್ಞಾನವನ್ನು ಇತರರೊಡನೆಯೂ ಹಂಚಿಕೊಳ್ಳುವುದಕ್ಕೆ ಪ್ರೇರೇಪಿಸಿದರು.
ನೀವೂ ಕೂಡ ಈ ಕೆಲಸದಲ್ಲಿ ಭಾಗಿಯಾಗಬಹುದು. ವರ್ಷಾಚರಣೆಯ ಮಾಹಿತಿ ಹಾಗೂ ಹಮ್ಮಿಕೊಂಡಿರುವ ಕಾರ್ಯಕ್ರಮಗಳು ನಿಮಗೆ ಈ ಕೊಂಡಿಯಲ್ಲಿ ಲಭ್ಯ.

ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ವಿಜೇತ ಶ್ರೀ ಯು.‌ಆರ್ ಅನಂತಮೂರ್ತಿಯವರನ್ನು ಕನ್ನಡ ವಿಕಿಪೀಡಿಯ ಬಗ್ಗೆ ಅವರ ಅಭಿಪ್ರಾಯವನ್ನು ಕೇಳಿದಾಗ ಸಂಗ್ರಹಿಸಿದ ವಿಡಿಯೋ ಇಲ್ಲಿದೆ.

httpv://www.youtube.com/watch?v=22mBe-3XGTE

ಬೆಂಗಳೂರಿನ ಕನ್ನಡ ವಿಕಿಪೀಡಿಯನ್ನರು ಜೂನ್ ೧೭ ರಂದು ದೊಮ್ಮಲೂರಿನ ಸೆಂಟರ್ ಫಾರ್ ಇಂಟರ್ನೆಟ್ & ಸೊಸೈಟಿಯಲ್ಲಿ ಸೇರಲಿದ್ದಾರೆ. ಮೇಲಿನ ಕೊಂಡಿಯಲ್ಲಿ ನಿಮ್ಮ ಹೆಸರನ್ನು ನೊಂದಾಯಿಸಲು ಮರೆಯದಿರಿ. ನೀವೂ ಲಾಗಿನ್ ಆಗಿ ಕನ್ನಡ ವಿಕಿಪೀಡಿಯ ಪುಟಗಳನ್ನು ಸಂಪಾದಿಸಲು ಮರೆಯದಿರಿ.

ವಿಕಿಪೀಡಿಯದ ಹಿಂದೆ ಇರುವ ಎಲ್ಲ ಕೈಗಳಿಗೆ ಶುಭಾಷಯಗಳು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This