ಹಂಬಲ್ ಬಂಡಲ್ – ಉಬುಂಟುವಿನಲ್ಲಿ

ಕೆನಾನಿಕಲ್ ಕಂಪೆನಿ ಹಂಬಲ್ ಬಂಡಲ್ ವಿ ಆಟಗಳನ್ನು ಉಬುಂಟು ಸಾಫ್ಟ್‌ವೇರ್ ಸೆಂಟರಿನಲ್ಲಿ ಲಭ್ಯವಾಗುವಂತೆ ಮಾಡಿದೆ. ಉಬುಂಟು ಬಳಕೆದಾರರು ಕಂಪ್ಯೂಟರ್ ಆಟಗಳನ್ನು Humble Bundle ನಿಂದ ಕೊಂಡಲ್ಲಿ, ಸುಲಭವಾಗಿ ಹಾಗೂ ಸುರಕ್ಷಿತವಾಗಿ ಅದನ್ನು ತಮ್ಮ ಉಬುಂಟು ಸಿಸ್ಟಂ‌ನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಬಹುದು.
ಹಂಬಲ್ ಬಂಡಲ್ ನಲ್ಲಿನ ಆಟಗಳ ಬೆಲೆ ಗ್ರಾಹಕನೇ ನಿರ್ಧರಿಸಿದ್ದು. ಆದ್ದರಿಂದ ನಿಮಗೆ ಬೇಕೆನಿಸಿದಷ್ಟು ಬೆಲೆಯನ್ನು ಇವಕ್ಕೆ ತೆರಬಹುದು. ಇಲ್ಲಿ ನೀವು ನೀಡಿದ ಹಣ ಆಟವನ್ನು ಅಭಿವೃದ್ದಿಪಡಿಸುವ ಡೆವೆಲಪರ್‌ಗಳು, ಸ್ವಯಂಸೇವಕ ಸಂಸ್ಥೆಗಳು ಮತ್ತು ಹಂಬಲ್ ಬಂಡಲ್‌ಗೆ ಸೇರುತ್ತದೆ. ಇಲ್ಲಿನ ಗೇಮ್ ಸೆಟ್ ನಲ್ಲಿರುವ ಕೆಲವು ಆಟಗಳು Amnesia: The Dark DescentLIMBOPsychonauts, and Superbrothers. Sword ಮತ್ತು  Sworcery EP.Bastion ನೀವು ಸರಾಸರಿ ಬೆಲೆಗಿಂತ ಹೆಚ್ಚು ಹಣ ನೀಡಿದಲ್ಲಿ ಅನ್‌ಲಾಕ್ ಆಗುತ್ತದೆ.
ಇದರ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಕೆನಾನಿಕಲ್ ಬ್ಲಾಗ್‌ನ  announcement ನಲ್ಲಿ ನೋಡಬಹುದು.

One Response to “ಹಂಬಲ್ ಬಂಡಲ್ – ಉಬುಂಟುವಿನಲ್ಲಿ”

  1. nagaraj says:

    Nimma mahitienda namage muktha tanthramshada bage tiluvalike sikkide dhanyavadagalu.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This