ಬರಲಿದೆ ಗಿಂಪ್ ಮ್ಯಾಗಜೀನ್ ಇದೇ ಸೆಪ್ಟೆಂಬರ್ ೫ ರಿಂದ

ಪುಸ್ತಕಗಳು, ವಿಶೇಷ, ಸುದ್ದಿ | 1 comment

Written By Omshivaprakash H L

August 30, 2012

ಲಿನಕ್ಸ್‌ನಲ್ಲಿ ಫೋಟೋ ಎಡಿಟ್ ಮಾಡಲು ಬಳಸುವ ಜಿಂಪ್/ಗಿಂಪ್ ಗೊತ್ತಲ್ವಾ? ಫೋಟೋಶಾಪ್‌ನಂತಹ ದುಬಾರಿ ತಂತ್ರಾಂಶ ಖರೀದಿಸಲು ಸಾಧ್ಯವಾಗದ ಸಮಯದಲ್ಲಿ, ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳು ನಮ್ಮ ಜೊತೆಗೆ ಎಂದೆಂದಿಗೂ ಇರುತ್ತವೆ. ಗಿಂಪ್‌ನ ೨.೮ರ ಆವೃತ್ತಿ ಬಹಳ ಸುಂದರವಾಗಿದ್ದು, ಸುಲಭವಾಗಿ ಫೋಟೋಶಾಪ್‌ನಂತೆಯೇ ಬಳಕೆಯ ಅನುಭವ ನೀಡುತ್ತದೆ.

ಈಗ ಬಳಕೆದಾರರಿಗೆ ಇದರ ಬಗ್ಗೆ ಮತ್ತಷ್ಟು ವಿಚಾರಗಳನ್ನು, ಜ್ಞಾನವನ್ನು ಹಂಚಿಕೊಳ್ಳಲು ಇದೇ ಸೆಪ್ಟೆಂಬರ್ ೫ ರಿಂದ ‘ಗಿಂಪ್ ಮ್ಯಾಗಜೀನ್’ ಬಿಡುಗಡೆಯಾಗಲಿದೆ. ಸಂಪೂರ್ಣ ಉಚಿತವಾಗಿ ಲಭ್ಯವಿರುವ ಈ ಮ್ಯಾಗಜೀನ್ ವರ್ಷದಲ್ಲಿ ೪ ಆವೃತ್ತಿಗಳನ್ನು ಕಾಣಲಿದೆ. ಗಿಂಪ್ ಮತ್ತು ಇತರೆ ಸ್ವತಂತ್ರ ತಂತ್ರಾಂಶಗಳನ್ನು ಬಳಸಿ ಸೃಷ್ಟಿಸಿದ ಅನೇಕ ಕ್ರಿಯಾತ್ಮಕ ಸೃಷ್ಟಿಗಳ ಬಗ್ಗೆ ಮಾಹಿತಿಯನ್ನು ಈ ಮ್ಯಾಗಜೀನ್ ಹಂಚಿಕೊಳ್ಳಲಿದೆ.

ಫೋಟೋಗ್ರಫಿ, ಗ್ರಾಫಿಕ್ ಆರ್ಟ್, ವೆಬ್ ಡಿಸೈನ್, ಪಠ್ಯ, ಸಹಾಯಕ್ಕೆ ಸಂಬಂಧಿಸಿದ ಪ್ರಶ್ನೆಗಳು, ತಂತ್ರಾಂಶಗಳ ವಿಮರ್ಶೆ ಹೀಗೆ ಹತ್ತು ಹಲವು ವಿಷಯಗಳು ನಿಮಗೆ ಈ ಮ್ಯಾಗಜೀನ್ ಮೂಲಕ ಲಭ್ಯವಿರಲಿವೆ.

https://gimpmagazine.org/ ಮೂಲಕ ನೀವು ಈ ಮ್ಯಾಗಜೀನ್ ಪಡೆದುಕೊಳ್ಳಬಹುದು. ಜೊತೆಗೆ ನೀವೂ ಕೂಡ ಈ ಮ್ಯಾಗಜೀನ್‌ಗೆ ನಿಮ್ಮಲ್ಲಿರುವ ಮಾಹಿತಿಯನ್ನು ಸೇರಿಸಬಹುದು.

ಚಿತ್ರ ಕೃಪೆ: https://gimpmagazine.org/

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಹಂಚಿಕೆಯ ಬಗ್ಗೆ

ಇತಿಹಾಸದ ಪುಟಗಳಿಂದ