ಗೂಗಲ್ ನೆಕ್ಸಸ್ ೭ – ಜೆಲ್ಲಿ ಬೀನ್ ನಲ್ಲಿ ಕನ್ನಡ

ತಂತ್ರಾಂಶಗಳು, ನಿಮಗಿದು ತಿಳಿದಿದೆಯೇ?, ವಿಶೇಷ, ಸುದ್ದಿ | 0 comments

Written By Omshivaprakash H L

September 5, 2012

ಕನ್ನಡವನ್ನು ಮೊಬೈಲ್‌ಗಳಲ್ಲಿ, ಟ್ಯಾಬ್‌ಲೆಟ್‌ಗಳಲ್ಲಿ ನೋಡಬೇಕು ಎಂದು ಹಾತೊರೆಯುವವರಿಗೆ, ಆಂಡ್ರಾಯ್ಡ್ ಜಿಲ್ಲಿ ಬೀನ್ ಕೊನೆಗು ಉತ್ತರ ನೀಡಿದೆ. ಆಂಡ್ರಾಯ್ಡ್ ಆವೃತ್ತಿ ೪.೧ ನಲ್ಲಿ ಕನ್ನಡ ಸೇರಿದಂತೆ ಇತರೆ ಭಾರತೀಯ ಭಾಷೆಗಳಿಗೆ ಬೆಂಬಲವಿದೆ. ಮೊನ್ನೆ ತಾನೇ ಮನೆ ಸೇರಿದ ಗೂಗಲ್‌ ನೆಕ್ಸಸ್ ೭ ಜಿಲ್ಲಿ ಬೀನ್ ಅನ್ನು ತಮ್ಮ ಮಡಿಲಿಗೇರಿಸಿಕೊಂಡ ಮೊದಲ ಹಾರ್ಡ್ವೇರ್. ಅದರಲ್ಲಿ ಲಿನಕ್ಸಾಯಣ ಮೂಡಿರುವುದನ್ನು ನೀವು ಕೆಳಗಿನ ಚಿತ್ರದಲ್ಲಿ ಕಾಣಬಹುದು.

ಭಾರತದ್ದೇ ಕಂಪೆನಿಯಾದ ಕಾರ್ಬನ್ ಕೂಡ ತನ್ನ ಕಾರ್ಬನ್ ಟ್ಯಾಬ್ ೨ ನಲ್ಲಿ ಜಿಲ್ಲಿ ಬೀನ್ ತಂತ್ರಾಂಶವನ್ನು ಸೇರಿಸಿದೆ. ೬೯೯೯ ರೂಪಾಯಿಯ ಈ ಟ್ಯಾಬ್ ನಲ್ಲಿಯೂ ಕನ್ನಡದಲ್ಲಿ ವ್ಯವಹರಿಸಬಹುದು.

ಆದಾಗ್ಯೂ ಕೆಲವೊಂದು ತಂತ್ರಾಂಶಗಳಿನ್ನೂ ಕನ್ನಡವನ್ನು ಸ್ವಚ್ಚವಾಗಿ ತೋರಿಸುವುದಿಲ್ಲ. ಸ್ಯಾಮ್‌ಸಂಗ್ ಮೊಬೈಲು, ಟ್ಯಾಬ್ಲೆಟ್ಟುಗಳನ್ನು ಕೊಂಡರೆ ಮಾತ್ರ ಕನ್ನಡ ಓದಲು ಸಾಧ್ಯ ಎನ್ನುವ ಕಾಲ ಈಗ ಮುಗಿದಿದೆ. ಮತ್ತಷ್ಟು ಮೊಬೈಲ್‌ಗಳು, ಸ್ಮಾರ್ಟ್ ಫೋನುಗಳು, ಟ್ಯಾಬ್‌ಗಳು ಜಿಲ್ಲಿ ಬೀನ್ ಜೊತೆ ಹೊರಬಂದು, ಎಲ್ಲರ ಕೈಗೆಟುಕಲು ಸಾಧ್ಯವಾದರೆ ಕನ್ನಡದಲ್ಲಿ ವ್ಯವಹರಿಸುವವರ ಸಂಖ್ಯೆ ಹೆಚ್ಚಬಹುದು. .

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಹಂಚಿಕೆಯ ಬಗ್ಗೆ

ಇತಿಹಾಸದ ಪುಟಗಳಿಂದ