ಬಾಹ್ಯ ಹಾರ್ಡ್‌ಡಿಸ್ಕ್‌ಗಳನ್ನು ಮೌಂಟ್ ಮಾಡುವಲ್ಲಿನ ಸಮಸ್ಯೆ

ತಂತ್ರಾಂಶಗಳು, ತೊಂದರೆ/ನಿವಾರಣೆ | 0 comments

Written By Omshivaprakash H L

September 25, 2012

ನಿಮ್ಮ ಯು.ಎಸ್.ಬಿ ಡ್ರೈವ್‌ಗಳನ್ನು ಉಬುಂಟು ಅಥವಾ ಇತರೆ ಗ್ನು/ಲಿನಕ್ಸ್ ಆವೃತ್ತಿಗಳಲ್ಲಿ ಬಳಸುವಾಗ ಈ ಕೆಳಕಂಡ ಎರರ್ ನಿಮ್ಮನ್ನು ಕಿರಿಕಿರಿಗೊಳಿಸಬಹುದು.

Error mounting: mount exited with exit code 13: $MFTMirr does not match $MFT (record 0).
Failed to mount ‘/dev/sdc1’: Input/output error
NTFS is either inconsistent, or there is a hardware fault, or it’s a
SoftRAID/FakeRAID hardware. In the first case run chkdsk /f on Windows
then reboot into Windows twice. The usage of the /f parameter is very
important! If the device is a SoftRAID/FakeRAID then first activate
it and mount a different device under the /dev/mapper/ directory, (e.g.
/dev/mapper/nvidia_eahaabcc1). Please see the ‘dmraid’ documentation
for more details

ntfsprogs ಪ್ಯಾಕೇಜಿನಲ್ಲಿ ಸಿಗುವ ntfsfix ಕಮ್ಯಾಂಡ್ ಬಳಸಿ ಈ ತೊಂದರೆಯನ್ನು ನಿವಾರಿಸಿಕೊಳ್ಳಬಹುದು.

ಈ ಪ್ಯಾಕೇಜನ್ನು ಇನ್ಸ್ಟಾಲ್ ಮಾಡಲು ಈ ಕೆಳಕಂಡ ಕಮ್ಯಾಂಡ್ ಬಳಸಿ.

sudo apt-get install ntfsprogs

ನಂತರ, ಮೇಲಿನ ಎರರ್‌ನಲ್ಲಿ ಕಂಡುಬಂದ ಹಾರ್ಡ್‌ಡಿಸ್ಕ್ ‘/dev/sdc1’ ಅನು ಸರಿ ಪಡಿಸಲು ntfsfix ಅನ್ನು ಹೀಗೆ ಬಳಸಬಹುದು.

sudo ntfsfix /dev/sda2

ಬಹಳಷ್ಟು ಬಾಹ್ಯ ಹಾರ್ಡ್‌ಡ್ರೈವ್‌ಗಳು ವಿಂಡೋಸ್ ಫೈಲ್‌ಸಿಸ್ಟಂ ಆದ ಎನ್.ಟಿ.ಎಫ್.ಎಸ್ ಬಳಸುವುದರಿಂದ ಈ ತೊಂದರೆ. ಇದರಿಂದ ಸಾಮಾನ್ಯವಾಗಿ ದೂರವಿರಲು, ನಿಮ್ಮ ಡ್ರೈವ್‌ಗಳನ್ನು ಅನ್‌ಮೌಂಟ್ ಮಾಡಿ ನಂತರ ಸರಿಯಾದ ರೀತಿಯಲ್ಲಿ ನಿಮ್ಮ ಕಂಪ್ಯೂಟರ್ ಸ್ವಿಚ್‌ಆಫ್ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ.

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಹಂಚಿಕೆಯ ಬಗ್ಗೆ

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಇತಿಹಾಸದ ಪುಟಗಳಿಂದ