ಅರಿವಿನ ಅಲೆಗಳು ಮತ್ತೆ ಬರುತ್ತಿದೆ…

arivu2012-512_linuxaayanaಅರಿವಿನ ಅಲೆಗಳನ್ನು ೨೦೧೩ರಲ್ಲಿ ಗಣರಾಜ್ಯೋತ್ಸವ, ಸ್ವಾತಂತ್ರ್ಯದಿನೋತ್ಸವ, ಕನ್ನಡ ರಾಜ್ಯೋತ್ಸವದಂತಹ ಮಹತ್ವದ ದಿನಗಳಂದು ಹೊರತರಲು ಆಲೋಚಿಸಿದ್ದು, ಮೊದಲಿಗೆ ಜನವರಿ ೨೬ ರ ಗಣರಾಜ್ಯೋತ್ಸವದಿಂದಲೇ ಇದರ ಪ್ರಯತ್ನಕ್ಕೆ ನಮ್ಮೊಂದಿಗೆ ಕೈ ಜೋಡಿಸಲು ಈ ಮೂಲಕ ಕೋರುತ್ತೇವೆ.

ಕೇವಲ ಐ.ಟಿ ತಂತ್ರಜ್ಞಾನವೊಂದೇ ನಮ್ಮ ಅರಿವಿನ ಅಲೆಗಳ ಮೂಲಕ ಮೂಡಬೇಕೆ ಅಥವಾ ದಿನನಿತ್ಯ ಬಳಸುವ ವಿಜ್ಞಾನದೆಡೆಗೂ ಗಮನ ಹರಿಸಬೇಕೆ ಎಂಬಿತ್ಯಾದಿ ಚರ್ಚೆಗಳ ನಂತರ, ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಎರಡರ ಕಡೆಗೂ ಕನ್ನಡದಲ್ಲಿ ಬರವಣಿಗೆಯ ಮೂಲಕ ಹೊಸ ಪ್ರಯತ್ನಗಳು ಸಾಗಬೇಕೆಂಬುದು ಸಂಚಯದ ಆಶಯವಾಗಿದೆ.

‘ದೈನಂದಿನ ಬದುಕಿನ ವಿಜ್ಞಾನ ಮತ್ತು ತಂತ್ರಜ್ಞಾನ’ ಕುರಿತಾದ ಲೇಖನಗಳನ್ನು ನೀವು ಈ ಬಾರಿಯ ಸಂಚಿಕೆಯಲ್ಲಿ ಸೇರಿಸಬಹುದು. ನಿಮ್ಮ ಜ್ಞಾನದ ತಿಳಿವನ್ನು ಇತರೆ ಕನ್ನಡಿಗರೊಂದಿಗೆ ಹಂಚಿಕೊಳ್ಳಲು ಈ ಅವಕಾಶವನ್ನು ಬಳಸಿಕೊಳ್ಳಿ.

ಜನವರಿ ೨೦ರ ಒಳಗೆ ನಿಮ್ಮ ಅರಿವಿನ ಅಲೆಯನ್ನು, ಕೆಳಗೆ ಪಟ್ಟಿಮಾಡಿರುವ ಮಾಹಿತಿಯೊಂದಿಗೆ [email protected]ಗೆ ಕಳುಹಿಸಿಕೊಡಿ.

೧. ನಿಮ್ಮ ಸಂಪೂರ್ಣ ಹೆಸರು
೨. ನಿಮ್ಮ ಉದ್ಯೋಗ ಹಾಗೂ ಹವ್ಯಾಸದ ಸಂಕ್ಷಿಪ್ತ ವಿವರಣೆ
೩. ಲೇಖನದ ಬಗ್ಗೆ ಸಂಕ್ಷಿಪ್ತ ವಿವರಣೆ (ಯಾವ ವಿಚಾರದ ಬಗ್ಗೆ ಬರೆದಿರುವುದು ಎನ್ನುವ ಬಗ್ಗೆ)
೪. ಸವಿಸ್ತಾರ ಲೇಖನ (ಅಂದಾಜು ೬೦೦-೯೦೦ ಪದಗಳೊಳಗೆ ಇದ್ದರೆ ಉತ್ತಮ)

ಸಂಚಯ ತಂಡ

ಸೂಚನೆ: ಅರಿವಿನ ಅಲೆಗಳು ಮುಕ್ತವಾಗಿದ್ದು, ಪ್ರಕಟಗೊಳ್ಳುವ ಎಲ್ಲ ಲೇಖನಗಳು ಕ್ರಿಯೇಟೀವ್ ಕಾಮನ್ಸ್‌ನಡಿ ಲಭ್ಯವಿರುತ್ತವೆ. ಈ ಹಿಂದಿನ ಸಂಚಿಕೆಗಳ ಲೇಖನಗಳು, ಇ-ಪುಸ್ತಕ, ಆಂಡ್ರಾಯ್ಡ್ ಅಪ್ಲಿಕೇಷನ್ ಇತ್ಯಾದಿಯ ಬಗ್ಗೆ ಹೆಚ್ಚಿನ ಮಾಹಿತಿ https://arivu.sanchaya.net ನಲ್ಲಿ ಸಿಗುತ್ತದೆ.

ಸುದ್ದಿ ಮೂಲ: ಸಂಚಯ.ನೆಟ್

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This