ಉಬುಂಟು ಇನ್ನು ಮೊಬೈಲ್ ಫೋನುಗಳಿಗೆ ಕೂಡ ಲಭ್ಯ

ಉಬುಂಟುವನ್ನು ಕಂಪ್ಯೂಟರ್, ಲ್ಯಾಪ್‌ಟಾಪ್, ನೆಟ್‌ಬುಕ್, ಜೊತೆಗೆ ಆಂಡ್ರಾಯ್ಡ್ ಮೇಲೆ ಕೂಡ ಉಪಯೋಗಿಸುವುದನ್ನು ಹಿಂದೆ ಓದಿದ್ದಿರಿ. ಈಗ ಉಬುಂಟು ನೇರವಾಗಿ ಮೊಬೈಲ್‌ನಲ್ಲೂ ಕೆಲಸ ಮಾಡಲಿದೆ. ಕೆನಾನಿಕ ಇದರ ಬಗ್ಗೆ ತನ್ನ ತಾಣದಲ್ಲಿ ಪ್ರಕಟಿಸಿದೆ. ಹೆಚ್ಚಿನ ವಿವರಗಳಿಗೆ ಈ ಕೊಂಡಿ ನೋಡಿ – https://www.ubuntu.com/devices/phone

ಉಬುಂಟು ಹೇಗೆ ಮೊಬೈಲ್ ಮೇಲೆ ಕೆಲಸ ಮಾಡಬಹುದು ಎಂದು ಕುತೂಹಲವೇ? ಈ ಕೆಳಗಿನ ವಿಡಿಯೋ ನಿಮಗೆ ಉತ್ತರಿಸಲಿದೆ:

httpv://www.youtube.com/watch?v=LoXpLUr5WB4

ಉಬುಂಟು ಹೊತ್ತ ಮೊದಲ ಮೊಬೈಲ್ ೨೦೧೪ರ ವೇಳೆಗೆ ನಿಮ್ಮ ಕೈ ಸೇರಬಹುದು.

ಅನೇಕರು ಕುತೂಹಲದಿಂದ ಈ ಬೆಳವಣಿಗೆಯನ್ನು ನೋಡುತ್ತಿದ್ದರೆ, ಇತ್ತೀಚೆಗೆ ಉಬುಂಟು ಬೆನ್ನೆಲುಬಾಗಿರುವ ಕೆನಾನಿಕಲ್ ತನ್ನ ತಂತ್ರಾಂಶ ಬಳಕೆದಾರನ ಮತ್ತು ತಂತ್ರಜ್ಞರ ಸ್ತಾತಂತ್ರ್ಯಕ್ಕೆ ಮತ್ತು ದನಿಗೆ ಎಷ್ಟು ಬೆಲೆ ಕೊಡುತ್ತದೆ ಎಂಬ ಪ್ರಶ್ನೆ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ ಸಮುದಾಯಗಳಲ್ಲಿ ಎದ್ದಿದೆ. ಮುಂದಿನ ದಿನಗಳೇ ಇದಕ್ಕೆ ಉತ್ತರ ನೀಡಬಲ್ಲವು.

No Responses to “ಉಬುಂಟು ಇನ್ನು ಮೊಬೈಲ್ ಫೋನುಗಳಿಗೆ ಕೂಡ ಲಭ್ಯ”

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This