ಉಬುಂಟು ೩ಡಿ(3D)ಗೆ ಬೆಂಬಲ ನೀಡುತ್ತಿದೆಯೇ ಪರೀಕ್ಷಿಸಿ

ನಿಮ್ಮ ಉಬುಂಟು ೩ಡಿ ಡಿಸ್ಪ್ಲೇಗೆ ಬೆಂಬಲ ನೀಡುತ್ತಿದೆಯೇ ಇಲ್ಲವೆ ಎಂಬುದನ್ನು ಸುಲಭವಾಗಿ ಟರ್ಮಿನಲ್‌ನಲ್ಲಿ (CTRL+ALT+T ಪ್ರೆಸ್ ಮಾಡಿ) ಈ ಕೆಳಕಂಡ ಆದೇಶ(command) ಅನ್ನು ಟೈಪಿಸುವುದರಿಂದ ತಿಳಿದುಕೊಳ್ಳಬಹುದು.

/usr/lib/nux/unity_support_test -p

ನನ್ನ ಲ್ಯಾಪ್‌ಟಾಪ್‌ನ ಉಬುಂಟುವಿನಲ್ಲಿ ಈ ಕಮ್ಯಾಂಡ್ ರನ್ ಮಾಡಿದಾಗ ಕಂಡ ಉತ್ತರ ಇಂತಿದೆ:

[email protected]:~$ /usr/lib/nux/unity_support_test -p
OpenGL vendor string: Intel Open Source Technology Center
OpenGL renderer string: Mesa DRI Intel(R) Sandybridge Mobile
OpenGL version string: 3.0 Mesa 9.1.1

Not software rendered: yes
Not blacklisted: yes
GLX fbconfig: yes
GLX texture from pixmap: yes
GL npot or rect textures: yes
GL vertex program: yes
GL fragment program: yes
GL vertex buffer object: yes
GL framebuffer object: yes
GL version is 1.4+: yes

Unity 3D supported: yes

ಯುನಿಟಿ ೩ಡಿ ಬೆಂಬಲಿಸುತ್ತಿರುವುದನ್ನು ಮೇಲಿನ ಫಲಿತಾಂಶ ತಿಳಿಸುತ್ತದೆ.

೩ಡಿ ಬೆಂಬಲ ಇಲ್ಲ ಎಂದಾದರೆ, ನೀವು ಹಳೆಯ ಹಾರ್ಡ್‌ವೇರ್ ಬಳಸುತ್ತಿದ್ದೀರಿ ಅಥವಾ ನಿಮ್ಮಲ್ಲಿರುವ ವಿಡಿಯೋ ಕಾರ್ಡ್‌ಗೆ ಬೇಕಿರುವ ಡ್ರೈವರ್ ತಂತ್ರಾಂಶ(Driver Software) ಇಲ್ಲ ಎಂದಾಯಿತು. ಕರ್ನೆಲ್‌ಗೆ ವಿಡಿಯೋಕಾರ್ಡ್ ಸಂಬಂಧಿತ ತಂತ್ರಾಂಶದ ನೆರವು ದೊರೆಯುವಂತೆ ಮಾಡಿ ೩ಡಿ ಬೆಂಬಲ ಪಡೆದುಕೊಳ್ಳಬಹುದು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This