ಎಂಬೆಡೆಡ್ ಲಿನಕ್ಸ್‌ಗೆ ಒಂದು ಪರಿಚಯ

ನಿಮಗಿದು ತಿಳಿದಿದೆಯೇ?, ವಿಡಿಯೋ | 0 comments

Written By Omshivaprakash H L

May 18, 2013

ಲಿನಕ್ಸ್ ಫೌಂಡೇಷನ್ ಲಿನಕ್ಸ್ ಕಲಿಕೆಯನ್ನು ಸುಲಭಗೊಳಿಸಲು ಅನೇಕ ವೆ‌ಬ್ಬಿನಾರ್ ‌(Webinar) ಅಂದರೆ ಆನ್ಲೈನ್ ವಿಡಿಯೋ ಸಮ್ಮಿಲನ/ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತದೆ. ಈ ವೆಬ್ಬಿನಾರ್‌ಗಳಲ್ಲಿ ಇತ್ತೀಚೆಗೆ ಎಂಬೆಡೆಡ್ ‌ಲಿನಕ್ಸ್ (Embedded Linux) ಬಗ್ಗೆ ಪರಿಚಯವನ್ನು ನೀಡಲಾಯಿತು. ನಮ್ಮ ದಿನನಿತ್ಯದ ಕೆಲಸಕಾರ್ಯಗಳಿಗೆ ಬಳಸುವ ಅದೆಷ್ಟೋ ಯಂತ್ರಗಳು ಈಗ ತಮ್ಮೊಳಗೇ ಪುಟ್ಟ ಕಂಪ್ಯೂಟರ್ ಚಿಪ್‌ಗಳನ್ನು ಹೊಂದಿದ್ದು ಲಿನಕ್ಸ್ ಆಪರೇಟಿಂಗ್ ಸಿಸ್ಟಂ ಅನ್ನು ಬಳಸುತ್ತವೆ. ನಾವು ನೆನಪಿನಲ್ಲಿಟ್ಟುಕೊಂಡು ಮಾಡಬೇಕಾದ ಅದೆಷ್ಟೋ ಕಾರ್ಯಗಳನ್ನು ಇವು ಮಾಡಬಲ್ಲವು. ಮೊಬೈಲ್, ವಾಚುಗಳು, ಕಾರಿನ ಆಟೋಮೊಬೈಲ್ ರಾಸೆಸರ್‌ಗಳು ಹೀಗೆ  ಹತ್ತಾರು ಯಂತ್ರಗಳನ್ನು ನಾವಿಲ್ಲಿ ಪಟ್ಟಿ ಮಾಡಬಹುದು.

೩೦ ನಿಮಿಷದ ಈ ವಿಡಿಯೋವನ್ನು ನೀವು ಈ ಕೊಂಡಿಯಲ್ಲಿ ಕಾಣಬಹುದು.  ಎಂಬೆಡೆಡ್ ‌ಲಿನಕ್ಸ್  ಏನು? ಕಲಿಯುವುದು ಹೇಗೆ? ಅದರ ಅಭಿವೃದ್ದಿಗೆ ಬೇಕಿರುವ ಅಗತ್ಯತೆಗಳು ಹೀಗೆ ಹತ್ತು ಹಲವು ವಿಷಯಗಳನ್ನು ೩೦ ನಿಮಿಷದ ಈ ವಿಡಿಯೋದಲ್ಲಿ ಲಿನಕ್ಸ್ ಫೌಂಡೇಷನ್ ಟ್ರೈನಿಂಗ್ ಮ್ಯಾನೇಜರ್ Jerry Cooperstein ನಿಮಗೆ ತಿಳಿಸಿಕೊಡುತ್ತಾರೆ. 

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಹಂಚಿಕೆಯ ಬಗ್ಗೆ

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಇತಿಹಾಸದ ಪುಟಗಳಿಂದ

Related Articles

Related

ಸ್ಟೇಟ್ ಆಫ್ ಮ್ಯಾಪ್ ಏಷ್ಯಾ ೨೦೧೮ – ಬೆಂಗಳೂರು

‍ಸ್ಟೇಟ್ ಆಫ್ ಮ್ಯಾಪ್ ಏಷ್ಯಾ ೨೦೧೮ - ಬೆಂಗಳೂರು, ಐ.‌ಐ.ಎಂ.ಬಿ ಕ್ಯಾಂಪಸ್‌ನಲ್ಲಿ ನವೆಂಬರ್ ೧೭-೧೮ರಂದು ನೆಡೆಯುತ್ತಿದೆ. ಇದು ಏಷ್ಯಾದ ಓಪನ್ ಸ್ಟ್ರೀಟ್ ಮ್ಯಾಪ್ ಸಮುದಾಯಗಳ ವಾರ್ಷಿಕ ಸಮ್ಮೇಳನವಾಗಿದ್ದು, ೨೦೧೫ರಲ್ಲಿ ಪ್ರಾರಂಭವಾಗಿತ್ತು. ‍ ಮೊದಲ ಸ್ಟೇಟ್ ಆಫ್ ಮ್ಯಾಪ್ ಏಷ್ಯಾ (SOTMA) ಅನ್ನು ಜಕಾರ್ತ,...

read more

ಮಲಯಾಲಂ ಸಮುದಾಯ ಶಾಲೆಗಳಲ್ಲಿ ವಿಕಿಸೋರ್ಸ್‌ ಹೇಗೆ ಬಳಸಿಕೊಳ್ಳುತ್ತದೆ? WCI2016

ಮಲಯಾಲಂ ಸಮುದಾಯ ಶಾಲೆಗಳಲ್ಲಿ ವಿಕಿಸೋರ್ಸ್‌ ಹೇಗೆ ಬಳಸಿಕೊಳ್ಳುತ್ತದೆ ಎನ್ನುವುದನ್ನು ವಿಕಿ ಕಾನ್ಫರೆನ್ಸ್ ಇಂಡಿಯಾ ೨೦೧೬ರ ಈ ವಿಡಿಯೋದಲ್ಲಿ ‍ಮಲಯಾಲಂ ವಿಕಿಪೀಡಿಯನ್ ಮನೋಜ್ ಮೂಲಕ ತಿಳಿಯಿರಿ ‍‍.‍‍‍‍...

read more