ನಿಮ್ಮ ಪ್ರಾಸೆಸ್ಸರ್, ಫ್ಯಾನ್ ಇತ್ಯಾದಿಗಳ ಉಷ್ಣತೆ ತಿಳಿಯಬೇಕೆ?

ಕಂಪ್ಯೂಟರಿನ ಸಿ.ಪಿ.ಯು, ಫ್ಯಾನ್, ವಿದ್ಯುತ್ ಸಂಪರ್ಕದ ಬಗ್ಗೆ ವಿವರಗಳನ್ನು ಪಡೆಯಲು ಉಬುಂಟು ನಿಮಗೆ ಅನೇಕ ಟೂಲ್‌ಗಳನ್ನು ಕೊಟ್ಟಿರಬಹುದು. ಆದರೆ ಗ್ನು/ಲಿನಕ್ಸ್‌ನಲ್ಲಿ lm_sensors ತಂತ್ರಾಂಶದ ಪ್ಯಾಕೇಜ್ ಇನ್ಸ್ಟಾಲ್ ಆಗಿದ್ದಲ್ಲಿ ಅವೆಲ್ಲವನ್ನು ಸುಲಭವಾಗಿ ಟರ್ಮಿನಲ್ ಮೂಲಕ ನೋಡಬಹುದು. sensors ಎನ್ನುವ ಆದೇಶದ ಫಲಿತಾಂಶವನ್ನು ಈ ಕೆಳಗೆ ನೋಡುತ್ತಿರುವಿರಿ.

$ sensors
acpitz-virtual-0
Adapter: Virtual device
temp1: +29.8°C (crit = +100.0°C)

thinkpad-isa-0000
Adapter: ISA adapter
fan1: 0 RPM

coretemp-isa-0000
Adapter: ISA adapter
Physical id 0: +55.0°C (high = +86.0°C, crit = +100.0°C)
Core 0: +50.0°C (high = +86.0°C, crit = +100.0°C)
Core 1: +54.0°C (high = +86.0°C, crit = +100.0°C)

ನಿಮ್ಮಲ್ಲಿ ಡೆಲ್(DELL) ಲ್ಯಾಪ್ಟಾಪ್ ಇದ್ದಲ್ಲಿ ಅದಕ್ಕೆ i8kutils ಎಂಬ ಪ್ಯಾಕೇಜ್ ಇಂತಹ ಎಲ್ಲ ಮಾಹಿತಿಗಳನ್ನು ನೀಡಲೆಂದೇ ಇದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This