ಲೈಟ್‌ವರ್ಕ್ಸ್ ಈಗ ಲಿನಕ್ಸ್‌ಗೆ ಕೂಡ ಲಭ್ಯವಿದೆ

೨೦ ವರ್ಷಗಳಿಂದ ಅದೆಷ್ಟೋ ಫಿಲಂಗಳನ್ನು ಲೈಟ್‌ವರ್ಕ್ಸ್ ತಂತ್ರಾಂಶದಿಂದ ತಂತ್ರಜ್ಞರು ವಿಡಿಯೋ ಹಾಗೂ ಆಡಿಯೋ ಎಡಿಟಿಂಗ್‌ಗಾಗಿ ಬಳಸಿದ್ದಾರೆ. ಅದೆಷ್ಟೋ ಮಂದಿ ಆಸ್ಕರ್ ಪ್ರಶಸ್ತಿ ಪುರಸ್ಕೃತರು ಈ ತಂತ್ರಾಂಶ ಬಳಸಿದ್ದಾರೆ.

ಅನೇಕ ವಿಡಿಯೋ, ಆಡಿಯೋ ಫಾರ್ಮ್ಯಾಟ್‌ಗಳಿಗೆ ಬೆಂಬಲ, ಚೆಂದದ ಟೈಮ್‌ಲೈನ್, ರೆಸೊಲ್ಯೂಷನ್, ಫಾರ್‌ಮ್ಯಾಟ್ ಮತ್ತು ಕೋಡೆಕ್ ಗಳಿಗೆಂದೇ ಬೇರೆಬೇರೆ ಟೈಮ್‌ಲೈನ್ ಹೊಂದಿರುವುದು, ಟ್ರಿಮ್ಮಿಂಗ್ ಸುಲಭವಾಗಿರುವುದು, ಒಂದಕ್ಕಿಂತ ಹೆಚ್ಚು ಕ್ಯಾಮೆರಾಗಳಿಂದ ಸಿಂಕ್ ಮಾಡುವ ಸೌಲಭ್ಯ, ಸ್ಟೀರಿಯೋಸ್ಕೋಪಿಕ್ ಸಪೋರ್ಟ್, ಹೆಚ್ಚುಮಂದಿ ಒಟ್ಟಿಗೆ ಕೆಲಸ ಮಾಡುವಂತಹ ಸೌಲಭ್ಯ, ಹೀಗೆ ಹತ್ತು ಹಲವು ವೈಶಿಷ್ಟ್ಯತೆಗಳನ್ನು ಹೊಂದಿರುವುದೇ ಈ ತಂತ್ರಾಂಶ ಇಷ್ಟು ಬಳಕೆಯಲ್ಲಿರುವುದಕ್ಕೆ ಕಾರಣ. ಇದರ ಬಗ್ಗೆ ಹೆಚ್ಚು ವಿವರ ಈ ಕೊಂಡಿಯಲ್ಲಿ ಲಭ್ಯವಿದೆ.

Lightworks

ಈ ತಂತ್ರಾಂಶ ಇದುವರೆಗೆ ವಿಂಡೋಸ್ ಹಾಗೂ ಮ್ಯಾಕ್‌ ಆವೃತ್ತಿಗಳಲ್ಲಿ ಮಾತ್ರ ಲಭ್ಯವಿತ್ತು. ಈಗ ಅದನ್ನು ಲಿನಕ್ಸ್ ಕಂಪ್ಯೂಟರ್‌ಗಳಲ್ಲೂ ಬಳಸಲು ಸಾಧ್ಯ. ಲಿನಕ್ಸ್ ಬೀಟಾ ಆವೃತ್ತಿ www.lwks.com ನಲ್ಲಿ ಈಗ ಲಭ್ಯ.

ಗಮನಿಸಿ: ಲಿನಕ್ಸ್ ಆವೃತ್ತಿ ಹೊರಬಿದ್ದ ತಕ್ಷಣ ಯಾವುದೇ ಒಂದು ಸಂಸ್ಥೆಯ ತಂತ್ರಾಂಶ ಮುಕ್ತ ಹಾಗೂ ಸ್ವತಂತ್ರ ಎಂದಲ್ಲ. ಲೈಟ್‌ವರ್ಕ್ಸ್ ಕೂಡ ಇದಕ್ಕೆ ಹೊರತಲ್ಲ. ಇದುವರೆಗೆ ಇದರ ಲಿನಕ್ಸ್ ಮೂಲ ಹೊರಬಿದ್ದಿಲ್ಲ ಹಾಗೂ ಲಿನಕ್ಸ್ ಬಳಕೆದಾರು ಇದರ ಕೆಲವೊಂದು ವ್ಯವಸ್ಥೆಗಳನ್ನು ಬಳಸಲು ಲೈಸೆನ್ಸ್ ಪಡೆಯಬೇಕಿದೆ.

ಇಂಟರ್ನೆಟ್‌ನಲ್ಲಿ ಇದರ ಸುತ್ತ ನೆಡೆಯುತ್ತಿರುವ ಅನೇಕ ಚರ್ಚೆಗಳನ್ನು ಈ ಕೆಳಗಿನ ಕೊಂಡಿಗಳಲ್ಲಿ ಕಾಣಬಹುದು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This