ಐ-ಫೋನ್, ಐ-ಪ್ಯಾಡ್ ಚಾರ್ಜ್ ಮಾಡಿ

by | Sep 26, 2013 | ಇನ್ಸ್ಟಾಲೇಷನ್, ತಂತ್ರಾಂಶಗಳು | 0 comments

ಉಬುಂಟು/ಡೆಬಿಯನ್‌ನಲ್ಲಿ ಐ-ಫೋನ್, ಐ-ಪ್ಯಾಡ್ಗಳನ್ನು ಯು.ಎಸ್.ಬಿ ಮೂಲಕ ಕನೆಕ್ಟ್ ಮಾಡಿದಾಗ ಇತರೆ ಮೊಬೈಲ್‌ಗಳಂತೆ ಅವು ಚಾರ್ಜ್ ಆಗುವುದಿಲ್ಲ. ಇದಕ್ಕೆಂದೇ ipad_charge ಎಂಬ ತಂತ್ರಾಂಶ ಲಭ್ಯವಿದೆ. ಇದನ್ನು ಬಳಸಿ, ಈ ಕೆಳಗೆ ನೀಡಿರುವ ಆಪಲ್ ಹಾರ್ಡ್‌ವೇರ್‌ಗಳನ್ನು ಚಾರ್ಜ್ ಮಾಡಬಹುದು.

iPad
iPad2
iPad3
iPad mini
iPod Touch 2G
iPod Touch 3G
iPod Touch 4G
iPhone 3GS
iPhone 4
iPhone 4S

ipad_charge ಅನ್ನು ನಿಮ್ಮ ಸಿಸ್ಟಂ‌ನಲ್ಲಿ ಇನ್ಸ್ಟಾಲ್ ಮಾಡಲು, ಟರ್ಮಿನಲ್ ಓಪನ್ ಮಾಡಿ ಈ ಕೆಳಗೆ ನೀಡಿರುವ ಕಮ್ಯಾಂಡುಗಳನ್ನು ಟೈಪಿಸಿ

sudo apt-get install -y build-essential libusb-1.0-0 libusb-1.0-0-dev vim git-core git-doc

ನಂತರ ಗಿಟ್‌ಹಬ್‌ನಲ್ಲಿ mkorenkov ಅವರ ತಂತ್ರಾಂಶವನ್ನು ಗಿಟ್ ಇಳಿಸಿಕೊಂಡು, ಆ ನಂತರ ಕೊಟ್ಟಿರುವ ಕಮ್ಯಾಂಡುಗಳ ಮೂಲಕ ಇನ್ಸ್ಟಾಲ್ ಮಾಡಿ.

git clone https://github.com/mkorenkov/ipad_charge.git

cd ./ipad_charge

make

sudo make install

ಇದು ipad_charge ಬೈನರಿಯನ್ನು /usr/bin ಗೆ, ಮತ್ತು 95-ipad_charge.rules ಅನ್ನು /etc/udev/rules.d ನಲ್ಲಿ ಸೇರಿಸುತ್ತದೆ. udev ರೂಲು ಇದನ್ನು ಬಳಸಿಕೊಂಡು ಐ-ಪ್ಯಾಡ್ ಅಥವಾ ಐ-ಫೋನ್ ಅನ್ನು ಚಾರ್ಜ್ ಆಗುವಂತೆ ಮಾಡುತ್ತದೆ.

ಚಾರ್ಜ್ ಆಗುವುದು ಪ್ರಾರಂಭವಾಗದಿದ್ದಲ್ಲಿ,

ipad_charge

ಎಂದು ಟರ್ಮಿನಲ್‌ನಲ್ಲಿ ಟೈಪಿಸಿ.

ಚಾರ್ಜ್ ಮಾಡುವುದನ್ನು ನಿಲ್ಲಿಸಲು

ipad_charge –off ಬಳಸಿ

ಹೆಚ್ಚಿನ ಮಾಹಿತಿಗೆ https://github.com/mkorenkov/ipad_charge

ಜಾಹೀರಾತು Divi WordPress Theme

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಹಂಚಿಕೆಯ ಬಗ್ಗೆ

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

Share This