GNOME3 ಬಳಸುತ್ತಿದ್ದೀರಾ? ಅದರಲ್ಲಿ ಶಾರ್ಟ್‌ಕಟ್‌ಗಳ ಜೊತೆಗೆ ಒಮ್ಮೊಮ್ಮೆ ಗುದ್ದಾಡಿದ್ದು ನೆನಪಿದ್ದಲ್ಲಿ, ಅದನ್ನು ಸರಿಪಡಿಸಿಕೊಳ್ಳಲು ಇಲ್ಲಿದೆ ಮಾರ್ಗಸೂಚಿ. ನಿಮ್ಮ ಜಿನೋಮ್ ಡೆಸ್ಕ್ಟಾಪ್‌ನಲ್ಲಿ ಕಾಣುವ ನಿಮ್ಮ ಯೂಸರ್ ನೇಮ್ ಮೇಲೆ ಕ್ಲಿಕ್ ಮಾಡಿ System Settings ಸೆಲೆಕ್ಟ್ ಮಾಡಿಕೊಳ್ಳಿ.
Hardware ವಿಭಾಗದ ಕೆಳಗೆ Keyboard ಮೇಲೆ ಕ್ಲಿಕ್ ಮಾಡಿ.
ಈಗ ಶಾರ್ಟ್‌ಕಟ್ಸ್ ಟ್ಯಾಬ್ ಕ್ಲಿಕ್ ಮಾಡಿ ನಂತರ ಎಡ ಆಯ್ಕೆಗಳಲ್ಲಿ Navigation ಕ್ಲಿಕ್ ಮಾಡಿ. ಕೆಳಗೆ ಸ್ಕ್ರಾಲ್ ಮಾಡಿದಾಗ ನಿಮಗೆ Hide all normal windows ಎಂಬ ಆಯ್ಕೆ ಸಿಗುತ್ತದೆ. ಇದು ಸಾಮಾನ್ಯವಾಗಿ Disable ಆಗಿದ್ದು, ಇದನ್ನು ನಿಮಗೆ ಬೇಕಾದ ಕೀಗಳ ಆಯ್ಕೆಯೊಂದಿಗೆ ಬದಲಿಸಿಕೊಳ್ಳಬಹುದು. ಇದೇ ರೀತಿ ಜಿನೋಮ್‌ನ ಇತರೆ ಶಾರ್ಟ್ಕಟ್‌ಗಳನ್ನೂ ಇಲ್ಲಿಯೇ ಬದಲಿಸಿಕೊಳ್ಳಬಹುದು.







ನಿಮ್ಮ ಪ್ರತಿಕ್ರಿಯೆಗಳು