ಬೆಂಬಲ (ಸಪೋರ್ಟ್) ಉದ್ಯೋಗ ಅವಕಾಶ


ಹೆಚ್ಚಿನ ಸಂಖ್ಯೆಯ ಕಂಪನಿಗಳಲ್ಲಿ ತಮ್ಮ ಉದ್ಯೋಗಿಗಳಿಗೆ ಲಿನಕ್ಸ್ ಕುರಿತು ಸಹಾಯ ಮಾಡುವವರ ಅಥವ ಲಿನಕ್ಸಿನಲ್ಲಿ ಪರಿಣಿತಿ ಹೊಂದಿದವರ ಬೇಡಿಕೆ ಇದೆ. ಉದ್ದಿಮೆ ಮತ್ತು ಕಾರ್ಪೋರೇಟ್ ವಲಯಗಳಲ್ಲಿ ಲಿನಕ್ಸ್ ಬಳಕೆ ಹೆಚ್ಚುತ್ತಿರುವುದರಿಂದ ದೊಡ್ಡ ದೊಡ್ಡ ಸಂಸ್ಥೆಗಳು ಲೈಸೆನ್ಸಿಂಗ್‌ ಖರ್ಚುಗಳನ್ನು ಕಡಿಮೆ ಮಾಡಲು ಡೆಸ್ಕ್‌ಟಾಪ್‌ಗಳಲ್ಲಿ ಲಿನಕ್ಸ್ ಅನ್ನು ಅಳವಡಿಸಲು ಮುಂದಾಗುತ್ತಿದ್ದಾರೆ. ಈ ವಲಸೆಯಿಂದ ಉತ್ಪಾದಕತೆಯಲ್ಲಿ ಉಂಟಾಗುವ ಗೊಂದಲವನ್ನು ಪರಿಹರಿಸಲು ಈ ಬಗೆಯ ಬೆಂಬಲ ತಂತ್ರಜ್ಞನ ಅಗತ್ಯವಿರುತ್ತದೆ. ಇದಕ್ಕೆ ಸೇರಬಯಸುವ ಅಭ್ಯರ್ಥಿಯು ಆ ಸಂಸ್ಥೆಯ ಉದ್ಯೋಗಿಗಳಿಗೆ ಲಿನಕ್ಸ್ ಬಳಸುವ ಕುರಿತು ನೆರವು ನೀಡುವುದು ಪ್ರಮುಖ ಕಾರ್ಯವಾಗಿರುತ್ತದೆ. ಇದರ ಜೊತೆಗೆ, ಉದ್ಯೋಗಿಗಳ ಕೆಲಸ ಮಾಡುವ ರೀತಿ ಮತ್ತು ಬಳಸುವ ಕಾರ್ಯಾಚರಣೆ ವ್ಯವಸ್ಥೆ (ಓಎಸ್) ಮತ್ತು ಅನ್ವಯಗಳಲ್ಲಿಮಾಡಲಾದ ಬದಲಾವಣೆಗಳಿಂದಾಗಿ ಒಟ್ಟಾರೆ ಕಾರ್ಯಕ್ಷಮತೆಗೆ ಯಾವುದೆ ತೊಂದರೆ ಉಂಟಾಗದಂತೆ ನೋಡಿಕೊಳ್ಳುವುದೂ ಸಹ ಮುಖ್ಯವಾಗಿರುತ್ತದೆ.

ಬೆಂಬಲ ನೀಡುವ ತಂತ್ರಜ್ಞರ ಅಗತ್ಯವಿರುವ ಇನ್ನೊಂದು ಪ್ರಮುಖ ಸ್ಥಳವೆಂದರೆ ಎಂಟರ್ಪ್ರೈಸ್ ಲಿನಕ್ಸ್ ಅಭಿವೃದ್ದಿ ಪಡಿಸುವ ಸಂಸ್ಥೆಗಳು. Red Hat, Canonicle, Suse, ಮುಂತಾದ ಕಂಪನಿಗಳು ಎಂಟರ್ಪ್ರೈಸ್ ಮಟ್ಟದ ಲಿನಕ್ಸ್ ಅನ್ನು ಸಿದ್ಧಗೊಳಿಸುತ್ತವೆ. ಇದನ್ನು ತಮ್ಮ ಅಗತ್ಯಕ್ಕೆ ತಕ್ಕಂತೆ ಬಳಸಲು ಬಯಸುವವರು, ಬಳಸುವಾಗ ಉಂಟಾಗಬಹುದಾದ ಯಾವುದೆ ಬಗೆಯ ತೊಂದರೆಗಳನ್ನು ಪರಿಹರಿಸಿಕೊಳ್ಳಲು ಇದೇ ಎಂಟರ್ಪ್ರೈಸ್ ತಯಾರಕ ಕಂಪನಿಗಳ ಬೆಂಬಲ ಸೇವೆಗೆ ಚಂದಾದಾರರಾಗಿರುತ್ತಾರೆ. ಇಂತಹ ಒಂದು ಸೇವೆಯನ್ನು ಪೂರೈಸಲು ನುರಿತ ಲಿನಕ್ಸ್ ಕಂಪನಿಗಳಿಗೆ ತಂತ್ರಜ್ಞರ ದೊಡ್ಡ ತಂಡದ ಅಗತ್ಯವಿರುತ್ತದೆ. ಈ ತಂಡದಲ್ಲಿ ಒಬ್ಬರಾಗಿ ಕೆಲಸ ಮಾಡಲು ಹೆಚ್ಚು ಕಡಿಮೆ ಸಿಸ್ಟಮ್ ಅಡ್ಮಿನ್‌ಸ್ಟ್ರೇಟರಿನ ಅರ್ಹತೆಗಳು ಇರಬೇಕಾಗುತ್ತದೆ ಮತ್ತು ಇಲ್ಲಿ ಕೆಲಸ ಮಾಡಿದ ಅನುಭವ ಹೊಂದಿದವರಿಗೆ ಸಿಸ್ಟಮ್ ಅಡ್ಮಿನ್ ಕ್ಷೇತ್ರದಲ್ಲಿ ಬಹುವಾಗಿ ಬೇಡಿಕೆ ಇದೆ.

ಕನ್ನಡದಲ್ಲಿ ತಂತ್ರಾಂಶಗಳು – ಲೋಕಲೈಸೇಷನ್ ಸುತ್ತ ಕೆಲಸ ಮಾಡುತ್ತಿರುವ ಶಂಕರ್ ಪ್ರಸಾದ್ ರೆಡ್‌ಹ್ಯಾಟ್ ನಲ್ಲಿ ಕೆಲಸ ಮಾಡುತ್ತಿದ್ದು. ಸಂಚಯದ ಸಕ್ರಿಯ ಸದಸ್ಯರೂ ಹೌದು. ಫೈರ್‌ಫಾಕ್ಸ್ , ಜಿನೋಮ್, ಓಪನ್ ಅಫೀಸ್ ಇತ್ಯಾದಿ ತಂತ್ರಾಂಶಗಳ ಕನ್ನಡೀಕರಣ ಇವರ ಮುಖ್ಯ ಕೊಡುಗೆ.

2 Responses to “ಬೆಂಬಲ (ಸಪೋರ್ಟ್) ಉದ್ಯೋಗ ಅವಕಾಶ”

  1. Manoj says:

    Sir, tumba olleya vishaya, aadare ondu pada tappagirabahudu – ‘Carnonicle’ -> ‘Canonical’ 🙂

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This