ಉಚಿತ ಲಿನಕ್ಸ್ ತರಬೇತಿ – ಎಲ್ಲರಿಗಾಗಿ

by | Apr 26, 2014 | ನಿಮಗಿದು ತಿಳಿದಿದೆಯೇ?, ವಿಶೇಷ, ಸುದ್ದಿ | 2 comments

ಲಿನಕ್ಸ್ ಫೌಂಡೇಷನ್ ಹಾರ್ವರ್ಡ್ ಮತ್ತು ಎಂ.ಐ.ಟಿ ಜೊತೆಗೂಡಿ ನಿರ್ವಹಿಸುತ್ತಿರುವ edX ಆನ್ಲೈನ್ ಕಲಿಕಾ ಜಾಲತಾಣದ ಮೂಲಕ ೨೪೦೦$ ರಷ್ಟು ವೆಚ್ಚದ ‘Introduction to Linux‘ ಎಂಬ ಲಿನಕ್ಸ್ ಕೋರ್ಸ್ ಅನ್ನು ಈ ಬೇಸಿಗೆಯಲ್ಲಿ ಎಲ್ಲರಿಗಾಗಿ ಉಚಿತವಾಗಿ ನೀಡುತ್ತಿದೆ.

ಆಗಸ್ಟ್ ೧ ಪ್ರಾರಂಭವಾಗಲಿರುವ ಈ ಕೋರ್ಸ್‌ಗೆ ಈಗಾಗಲೇ ೨೫೦೦ಕ್ಕೂ ಹೆಚ್ಚು ಜನ ನೊಂದಾಯಿಸಿಕೊಂಡಿದ್ದಾರೆ. ೪೦ ರಿಂದ ೬೦ ಘಂಟೆಗಳ ಈ ಕೋರ್ಸ್ ಲಿನಕ್ಸ್ ಬಗ್ಗೆ ಯಾವ ವಿಷಯವನ್ನೂ ಅರಿಯದ, ಲಿನಕ್ಸ್ ಮತ್ತು ಮುಕ್ತ ತಂತ್ರಾಂಶದ ಬಳಕೆಯನ್ನು ಅರಿಯಲು ಇಚ್ಚಿಸುವ ಎಲ್ಲರಿಗೂ ಅತ್ಯುತ್ತಮ ಕಲಿಕಾ ವ್ಯವಸ್ಥೆ ಆಗಲಿದೆ.

ಲಿನಕ್ಸ್ ಫೌಂಡೇಷನ್‌ನ ಪತ್ರಿಕಾ ಪ್ರಕಟಣೆಯ ಪ್ರಕಾರ ಈ ರೀತಿಯ ಮತ್ತೂ ಅನೇಕ ಕೋರ್ಸ್‌ಗಳು ಲಿನಕ್ಸ್ ಆಸಕ್ತರಿಗೆ ಲಭ್ಯವಾಗಲಿವೆ. ಲಿನಕ್ಸ್ ಫೌಂಡೇಷನ್ ಎಕ್ಸಿಕ್ಯುಟೀವ್ ಡೈರೆಕ್ಟರ್ ಜಿಮ್ ಜೆಮ್ಲಿನ್ಸ್ ಈ ತರಬೇತಿ ಕಾರ್ಯಕ್ರಮದ ಬಗ್ಗೆ ಹೀಗೆ ಬರೆಯುತ್ತಾರೆ – ‘ಲಿನಕ್ಸ್ ಅನ್ನು ಉನ್ನತ ಮಟ್ಟಕ್ಕೇರಿಸುವ ಮತ್ತು ಲಿನಕ್ಸ್ ನಲ್ಲಿ ನುರಿತ ನಿಪುಣರನ್ನು ಲಭ್ಯವಾಗುವಂತೆ ಮಾಡುವ ಉದ್ದೇಶವಿದೆ. ಲಿನಕ್ಸ್ ಸಮುದಾಯ, ಐಟಿ ಉದ್ಯಮಗಳಲ್ಲಿರುವ ಅನೇಕ ಅವಕಾಶಗಳನ್ನು ಯಥೇಚ್ಛ ಮಂದಿಗೆ ತಲುಪುವಂತೆ ಮಾಡಲು, ಅದಕ್ಕೆ ಬೇಕಾಗಿರುವ ತಜ್ಞರನ್ನು ಸೃಷ್ಟಿ ಮಾಡಲು ತಾವು ಸಿದ್ದಪಡಿಸುತ್ತಿರುವ ತರಬೇತಿ ಕಾರ್ಯಕ್ರಮಗಳನ್ನು ವಿಶ್ವದ ಎಲ್ಲರಿಗೂ ಲಭ್ಯವಾಗಿಸುತ್ತಿದ್ದೇವೆ.

ಈ ಕೋರ್ಸ್‌ನಲ್ಲಿ ಭಾಗವಹಿಸಲು ಈ ಕೊಂಡಿ ಕ್ಲಿಕ್ಕಿಸಿ : ‘Introduction to Linux

ಚಿತ್ರ:edx.org

ಜಾಹೀರಾತು Divi WordPress Theme

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಹಂಚಿಕೆಯ ಬಗ್ಗೆ

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

Share This