ಈಗಾಗಲೇ ನಿಮ್ಮ ಲಿನಕ್ಸ್ನಲ್ಲಿ ಇನ್ಸ್ಟಾಲ್ ಮಾಡಿರುವ ತಂತ್ರಾಂಶಗಳು ಒಂದಲ್ಲಾ ಒಂದು ತಂತ್ರಾಂಶಗಳ ಜೊತೆಗೆ ಅವಲಂಬಿತವಾಗಿರುತ್ತವೆ. ಯಾವುದೇ ಒಂದು ತಂತ್ರಾಂಶವನ್ನು ಅದರಲ್ಲೂ ಸಿಸ್ಟಂ ಲೈಬ್ರರಿಗಳೆಂದು ಕರೆಸಿಕೊಳ್ಳುವ ತಂತ್ರಾಂಶಗಳನ್ನು ಅನ್ಇನ್ಸ್ಟಾಲ್ ಮಾಡುವ ಮುನ್ನ, ಇನ್ಯಾವುದೇ ತಂತ್ರಾಂಶಗಳಿಗೆ ತೊಂದರೆ ಆಗುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಒಳಿತು. ಅದರಲ್ಲೂ ಸಿಸ್ಟಂ ಅಡ್ಮಿನಿಸ್ಟ್ರೇಟರ್ಗಳಿಗೆ ಇದರ ಅವಶ್ಯಕತೆ ತುಂಬಾ ಇರುತ್ತದೆ. ಈ ಕೆಳಗಿನ ಕಮ್ಯಾಂಡ್ ಬಳಸಿ ಯಾವುದೇ ತಂತ್ರಾಂಶಗಳ ಅವಲಂಬನೆಯ ಬಗ್ಗೆ ತಿಳಿಯಬಹುದು.
sudo apt-cache rdepends packagename
ನಿಮ್ಮ ಪ್ರತಿಕ್ರಿಯೆಗಳು