ಸೂಚನೆ: ಲಿನಕ್ಸಾಯಣದಲ್ಲಿ ಲೇಖನದ ಜೊತೆಗೆ ವಿಡಿಯೋ ನೆರವನ್ನು ನೀಡುವ ಒಂದು ಪ್ರಯತ್ನ ಇದಾಗಿದೆ.
ಉಬುಂಟುವಿನಲ್ಲಿ ಕನ್ನಡ ಟೈಪಿಸುವಂತಾಗಲು ನಿಮ್ಮ ಸಿಸ್ಟಂ ಸೆಟ್ಟಿಂಗ್ಸ್‌ನ Language Support ನಲ್ಲಿ ಕನ್ನಡವನ್ನು ಸಕ್ರಿಯಗೊಳಿಸಿ. ಇದು ಕನ್ನಡ ಫಾಂಟ್ಸ್ ಇತ್ಯಾದಿಗಳನ್ನು ಇನ್ಸ್ಟಾಲ್ ಮಾಡುತ್ತದೆ. ಇಲ್ಲಿಯೇ ನಿಮಗೆ ಇನ್‌ಪುಟ್ ವಿಧಾನ iBus ಎಂದು ಸೇರಿಸುವ ಅವಕಾಶ ಇದೆ.
ಇದಾದ ನಂತರ ಟರ್ಮಿನಲ್‌ನಲ್ಲಿ ibus-m17n ಮತ್ತು m17n-contrib ಎಂಬ ಎರಡು ಸಾಪ್ಟ್‌ವೇರ್‌ಗಳನ್ನು ಇನ್ಸ್ಟಾಲ್ ಮಾಡಿಕೊಳ್ಳಿ.
sudo apt-get ibus-m17n m17n-contrib
ನಂತರ ಲಾಗ್‌ಔಟ್ ಆಗಿ, ಲಾಗಿನ್ ಆಗಿ. ಮತ್ತೆ ಸಿಸ್ಟಂ ಸೆಟ್ಟಿಂಗ್ಸ್ ನಲ್ಲಿ Text Entry ಯಲ್ಲಿ ಕನ್ನಡದ ಕೀಬೋರ್ಡ್‌ಗಳನ್ನು ಸೇರಿಸಿಕೊಳ್ಳಿ. ಭಾಷಾ ಆಯ್ಕೆಗಳನ್ನು ಸ್ಟೇಟಸ್ ಬಾರ್‌ನಲ್ಲಿ ತೋರಿಸುವ ಆಯ್ಕೆ ಟಿಕ್ ಮಾಡಿ. ಜೊತೆಗೆ ಭಾಷೆಯ ಆಯ್ಕೆಗೆ ಮೀಸಲಿಟ್ಟಿರುವ ಕೀಬೋರ್ಡ್ ಶಾರ್ಟ್‌ಕಟ್‌ಗಳನ್ನು ಅಲ್ಲಿಯೇ ನೋಡಿಕೊಳ್ಳಿ. ಬೇಕಿದ್ದಲ್ಲಿ ಅದನ್ನು ಬದಲಿಸಬಹುದು ಕೂಡ. ಇದು ಸಾಮಾನ್ಯವಾಗಿ ವಿಂಡೋಸ್ ಕೀ + ಸ್ಪೇಸ್ ಬಾರ್ ಆಗಿರುತ್ತದೆ (Super + Space).
ಈಗ ಯಾವುದೇ ಟೆಕ್ಸ್ಟ್ ಎಡಿಟರ್ ತೆರೆದು ವಿಂಡೋಸ್ ಕೀ + ಸ್ಪೇಸ್ ಬಾರ್ ಕ್ಲಿಕ್ ಮಾಡಿ ಕನ್ನಡ ಟೈಪಿಸಲು ಆರಂಭಿಸಿ. ಬರಹ ಬರುವವರಿಗೆ – kn-itrans, ನುಡಿಗೆ Kagapa / KPRao ಜೊತೆಗೆ inscript ಕೀಬೋರ್ಡ್‌ಗಳನ್ನು ಜೋಡಿಸುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ.
ನಿಮ್ಮ ಪ್ರತಿಕ್ರಿಯೆಗಳು