ನಿರಂಜನರ ಕೃತಿಗಳು CC-BY-SA 4.0 ಪರವಾನಗಿಯೊಂದಿಗೆ ಮರುಪ್ರಕಟಗೊಳ್ಳಲಿವೆ

ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ನಿರಂಜನರ ಬಹುಪಾಲು ಕೃತಿಗಳು CC-BY-SA 4.0 ಪರವಾನಗಿಯೊಂದಿಗೆ ಮರುಪ್ರಕಟಗೊಳ್ಳಲಿವೆಯೆಂದು ಸಿಐಎಸ್-ಎ೨ಕೆಯ ಸಹಯೋಗದೊಂದಿಗೆ ಕನ್ನಡ ವಿಕಿಪೀಡಿಯ ಬಳಗವು ಹಂಚಿಕೊಳ್ಳಲು ಹರ್ಷಿಸುತ್ತದೆ.
ನಿರಂಜನ (೧೯೨೪-೧೯೯೨) ,  ಇದು ಕುಳಕುಂದ ಶಿವರಾವ್ ಅವರ ಲೇಖನಾಮ. ಇವರು ೨೦ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು. ಅವರ ಸುಮಾರು ಐದು ದಶಕಗಳ ಸಂಮೃದ್ಧವಾದ ಕೃತಿಗಳು ಕಾದಂಬರಿ, ಸಣ್ಣ ಕಥೆಗಳು, ನಾಟಕಗಳು, ಜೀವನ ಕಥನಗಳು, ರಾಜಕೀಯ ವ್ಯಾಖ್ಯಾನಗಳು ಮತ್ತು ಭಾಷಾಂತರಗಳನ್ನು ಒಳಗೊಂಡಿವೆ. ಅವರು ಕನ್ನಡ ವಾರ್ತಾಪತ್ರಿಕೆ ಮತ್ತು ನಿಯತಕಾಲಿಕಗಳಲ್ಲಿ ನಿಯತ ಅಂಕಣಕಾರರಾಗಿದ್ದರು. ಅವರ ಸಾಧನೆಯಲ್ಲಿ ಯುವಕರಿಗಾಗಿ ೭ ಸಂಪುಟಗಳ ಜ್ಞಾನ ಗಂಗೋತ್ರಿ ಮತ್ತು ೨೫ ಸಂಪುಟಗಳ ಪ್ರಪಂಚದ ಮಹತ್ತರವಾದ ಕಥೆಗಳ ಸಂಕಲನಗಳು ಸೇರಿವೆ.
ನಿರಂಜನರ ಒಟ್ಟು ೫೫ ಕೃತಿಗಳು ಮರುಪ್ರಕಟಗೊಳ್ಳಲಿವೆ. ಇದು CC-BY-SA 4.0 ಪರವಾನಗಿಯೊಂದಿಗೆ ಭಾರತೀಯ ಭಾಷೆಯಲ್ಲಿ ಪ್ರಕಟಗೊಳ್ಳುತ್ತಿರುವ ಒಬ್ಬನೇ ಲೇಖಕನ ಕೃತಿಗಳ ಅತಿ ದೊಡ್ಡ ಸಂಗ್ರಹವಾಗಿರಬಹುದು. ಇದನ್ನು ಆಚರಿಸಲು ಒಂದು ಔಪಚಾರಿಕ ಕಾರ್ಯಕ್ರಮವನ್ನು, ಕ್ರಿಯೇಟೀವ್ ಕಾಮನ್ಸ್ ಪಾಮುಖ್ಯತೆಯ ಬಗ್ಗೆ ಒಂದು ಅಭಿಶಿಕ್ಷಣದ ಜೊತೆಯಲ್ಲಿ ೨೦೧೪ನೇ ನವೆಂಬರ್ ತಿಂಗಳಿನ ಮೊದಲ ವಾರದಲ್ಲಿ ನೆಡೆಸಲು ಯೋಚಿಸುತ್ತಿದ್ದೇವೆ. ಕಾರ್ಯಕ್ರಮದ ಕರಾರುವಾಕ್ಕಾದ ವಿವರಗಳನ್ನು ಸಧ್ಯದಲ್ಲೇ ಹಚಿಕೊಳ್ಳಲಾಗುವುದು.ಕನ್ನಡ ವಿಕಿಪೀಡಿಯ ಬಳಗ ಮತ್ತು ಸಿಐಎಸ್-ಎ೨ಕೆಯು ನಿಮ್ಮನ್ನು ಸಮಾರಂಭದಲ್ಲಿ ನೋಡಲು ಸಂತಸಪಡುತ್ತದೆ. ಕೆಳಗಿನ ಪುಸ್ತಕಗಳು  CC-BY-SA 4.0 ಪರವಾನಗಿಯೊಂದಿಗೆ ಮರುಪ್ರಕಟಗೊಳ್ಳಲು ಸಿಐಎಸ್-ಎ೨ಕೆಯ ಸಲಹೆಗಾರರೂ ಆಗಿರುವ ತೇಜಸ್ವಿನಿ ನಿರಂಜನರ ಮಹತ್ತರವಾದ ಆರಂಭಿಕ ಕೆಲಸವನ್ನು ನಾವು ಸ್ಮರಿಸುತ್ತೇವೆ.
ಲೇಖನದ ಕನ್ನಡ ಅನುವಾದ: ತೇಜಸ್ ಜೈನ್
ಚಿತ್ರ, ಇನ್ಫೋಬಾಕ್ಸ್ ಮತ್ತು ಇತರೆ ಮಾಹಿತಿ ಮೂಲ: ಕನ್ನಡ ವಿಕಿಪೀಡಿಯ
ನಿರಂಜನ
Niranjana3.jpg

ಅರವತ್ತರ ದಶಕದಲ್ಲಿ ನಿರಂಜನ
ಹುಟ್ಟು ಕುಳಕುಂದ ಶಿವರಾಯ
15/06/1924
ಕುಳಕುಂದ
ರಾಷ್ಟ್ರೀಯತೆ ಭಾರತೀಯ
ವೃತ್ತಿ ಬರಹಗಾರ
Known for ಬರಹ, ಸ್ವಾತಂತ್ರ್ಯ ಹೋರಾಟ
ಚಳುವಳಿ ಭಾರತ ಸ್ವಾತಂತ್ರ್ಯ ಸಂಗ್ರಾಮ
ಸಂಗಾತಿ(ಗಳು) ಅನುಪಮಾ ನಿರಂಜನ
ಮಕ್ಕಳು ಸೀಮಂತಿನಿ ಮತ್ತು ತೇಜಸ್ವಿನಿ
ಹೆತ್ತವರು ತಾಯಿ ಚೆನ್ನಮ್ಮ
ಪ್ರಶಸ್ತಿಗಳು ಸೋವಿಯತ್‍ಲ್ಯಾಂಡ್ ನೆಹರೂ ಪ್ರಶಸ್ತಿ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This