ಸ್ಟೇಟ್ ಆಫ್ ಮ್ಯಾಪ್ ಏಷ್ಯಾ ೨೦೧೮ – ಬೆಂಗಳೂರು, ಐ.ಐ.ಎಂ.ಬಿ ಕ್ಯಾಂಪಸ್ನಲ್ಲಿ ನವೆಂಬರ್ ೧೭-೧೮ರಂದು ನೆಡೆಯುತ್ತಿದೆ. ಇದು ಏಷ್ಯಾದ ಓಪನ್ ಸ್ಟ್ರೀಟ್ ಮ್ಯಾಪ್ ಸಮುದಾಯಗಳ ವಾರ್ಷಿಕ ಸಮ್ಮೇಳನವಾಗಿದ್ದು, ೨೦೧೫ರಲ್ಲಿ ಪ್ರಾರಂಭವಾಗಿತ್ತು. ಮೊದಲ ಸ್ಟೇಟ್ ಆಫ್ ಮ್ಯಾಪ್ ಏಷ್ಯಾ (SOTMA) ಅನ್ನು ಜಕಾರ್ತ, ಇಂಡೋನೇಷಿಯಾದಲ್ಲಿ ೨೦೧೫ರಲ್ಲಿ ಆಯೋಜಿಸಲಾಗಿತ್ತು ಮತ್ತು ಎರಡನೆಯದನ್ನು ಮನಿಲಾ, ಫಿಲಿಫೈನ್ಸ್ ನಲ್ಲಿ ೨೦೧೬ರಲ್ಲಿ ಆಯೋಜಿಸಲಾಗಿತ್ತು. ಈ ಸರಣಿಯ ಮೂರನೆಯ ಸಮ್ಮೇಳನವನ್ನು ಕಟ್ಮಂಡು ನೇಪಾಳದಲ್ಲಿ ೨೦೧೭ರಲ್ಲಿ ಅಯೋಜಿಸಲಾಗಿತ್ತು. ಈ ಸಮ್ಮೇಳನಗಳು ಸ್ಥಳೀಯ ಸಮುದಾಯಗಳನ್ನು ಒಟ್ಟುಗೂಡಿಸುವ, ತಾಂತ್ರಿಕ, ಸಾಂಸ್ಕೃತಿಕ, ಕಾರ್ಯನೀತಿ ಮತ್ತು ಆಡಳಿತದ ವಿಷಯಗಳಿಗೆ ಸಂಬಂಧಿಸಿದ ಅನೇಕ ಸವಾಲುಗಳನ್ನು ಹಂಚಿಕೊಳ್ಳುವ ಮತ್ತು ಕಲಿಯುವ ಸ್ಥಳಗಳಾಗಿದ್ದು, ಒ.ಎಸ್.ಎಮ್ ಚಳುವಳಿಯನ್ನು ಏಷ್ಯಾದಲ್ಲಿ ಮುನ್ನೆಡೆಸಲು ಸಹಾಯಕವಾಗಿವೆ.
ಈ ವರ್ಷದ ಸಮ್ಮೇಳನವನ್ನು ಸ್ಟೇಟ್ ಆಫ್ ಮ್ಯಾಪ್ ಏಷ್ಯಾ, ೨೦೧೮ ಸಮಿತಿ (SOTMAC), ಐ.ಐ.ಎಂ ಬೆಂಗಳೂರು, ಮತ್ತು ದ ಸೆಂಟರ್ ಫಾರ್ ಇಂಟರ್ನೆಟ್ & ಸೊಸೈಟಿ ಜಂಟಿಯಾಗಿ ಆಯೋಜಿಸುತ್ತಿವೆ. ಇದು ೨ ದಿನಗಳ ಸಮ್ಮೇಳನವಾಗಿರಲಿದ್ದು ೨೦೧೮ರ ವೆಂಬರ್ ೧೭ & ೧೮ ರಂದು ನೆಡೆಯಲಿದೆ. ಈ ಎರಡು ದಿನಗಳ ಕಾರ್ಯಕ್ರಮ, ಓಪನ್ ಸ್ಟ್ರೀಟ್ ಮ್ಯಾಪ್ನ ಪರಿಣಾಮ, ಪ್ರಸ್ತುತತೆ ಮತ್ತು ತಾಂತ್ರಿಕ ಅಂಶಗಳ ಬಗ್ಗೆ ಮಾತುಕತೆಗಳು ಮತ್ತು ಕಾರ್ಯಾಗಾರಗಳನ್ನು ಒಳಗೊಂಡಿರುತ್ತದೆ. ಈ ಸಮ್ಮೇಳನದ ಮುಖ್ಯ ಭಾಷಣಗಳನ್ನು ಪುಕಾರ್ ನ ಸಿ.ಇ.ಒ ಡಾ. ಅನಿತಾ ಪಾಟೀಲ್-ದೇಶ್ಮುಖ್ ಮತ್ತು ಕಬಿಡಿವಾಲಾ ಕನೆಕ್ಟ್ನ ಸಿ.ಇ.ಒ ಸಿದ್ದಾರ್ಥ್ ಹ್ಯಾಂಡೆಯ ಮಾಡಲಿದ್ದಾರೆ – ಭಾರತ ಮತ್ತು ವಿಶ್ವದ ಬೇರೆ ಬೇರೆ ಭಾಗಗಳಲ್ಲಿನ ವಿವಿಧ ನಗರ ಪರಿಸರದಲ್ಲಿ ಸಕ್ರಿಯ ಸಮುದಾಯ-ಚಾಲಿತ ಬದಲಾವಣೆಗಳನ್ನು ಎತ್ತಿ ತೋರಿಸುವುದು ಈ ಭಾಷಣಗಳ ಉದ್ದೇಶ. ಸಮ್ಮೇಳನ ಅನೇಕ ಮಾತುಕತೆಗಳು ಮತ್ತು ಕಾರ್ಯಾಗಾರಗಳ ಮೂಲಕ ಮ್ಯಾಪಿಂಗ್ ಬಗ್ಗೆ ತಿಳಿಯಲು ಉತ್ತಮ ಅವಕಾಶವಾಗಿದೆ.
ಓಪನ್ ಸ್ಟ್ರೀಟ್ ಮ್ಯಾಪ್ (ಓ.ಎಸ್.ಎಂ) (OSM/OpenStreetMap) ವಿಶ್ವದ ನಕ್ಷೆಯನ್ನು ಸ್ವತಂತ್ರವಾಗಿ ಸಂಪಾದಿಸಬಲ್ಲ ಒಂದು ಸಮುದಾಯ ಯೋಜನೆ ಆಗಿದೆ. ಓ.ಎಸ್.ಎಂ ಅನ್ನು ಸ್ವಯಂಸೇವಕರ ಮೂಲಕ ಸಂಪಾದಿಸಿದ ಭೌಗೋಳಿಕ ಮಾಹಿತಿಯ ಒಂದು ಪ್ರಮುಖ ಉದಾಹರಣೆಯಾಗಿ ಪರಿಗಣಿಸಲಾಗುತ್ತದೆ. ಸಮುದಾಯದ ಪ್ರಾರಂಭದಿಂದ ಗಮನಿಸಿದಲ್ಲಿ, ಇದು ಸಮೀಕ್ಷೆಗಳು, ಜಿಪಿಎಸ್ ಸಾಧನಗಳು, ಏರಿಯಲ್ ಚಿತ್ರಗಳು ಮತ್ತು ಇತರೆ ಸ್ವತಂತ್ರ ಮೂಲಗಳಿಂದ ದತ್ತಾಂಶ ಸಂಗ್ರಹಿಸಬಲ್ಲ ೫ ಮಿಲಿಯನ್ಗಿಂತಲೂ ಹೆಚ್ಚು ಸ್ವಯಂಸೇವಕರನ್ನು ಹೊಂದಿದೆ.
ಈ ಸಮುದಾಯ ಸಹಭಾಗಿತ್ವದ ದತ್ತಾಂಶವನ್ನು ಓಪನ್ ಡೇಟಾಬೇಸ್ ಪರವಾನಗಿ ಅಡಿ ಲಭ್ಯವಾಗಿಸಲಾಗಿದೆ. ಈ ಯೋಜನೆ ಓಪನ್ ಸ್ಟ್ರೀಟ್ ಮ್ಯಾಪ್ ಫೌಂಡೇಷನ್ನಿಂದ ಬೆಂಬಲಿತವಾಗಿದೆ.
— ಈ ಮೇಲಿನ ಮಾಹಿತಿಯನ್ನು ಸ್ಟೇಟ್ ಆಫ್ ಮ್ಯಾಪ್ ಏಷ್ಯಾ ೨೦೧೮ದ ಮಾಹಿತಿ ಪುಸ್ತಕದಿಂದ ಪಡೆದುಕೊಳ್ಳಲಾಗಿದೆ.
ಸಮ್ಮೇಳನದ ಮಾಹಿತಿಯನ್ನು ಸಮುದಾಯದ ಸದಸ್ಯರು #SotMAsia18 ಟ್ಯಾಗ್ನಡಿ ಟ್ವಿಟರ್ ಮತ್ತು ಫೇಸ್ಬುಕ್ನಲ್ಲಿ ಹಂಚಿಕೊಳ್ಳುತ್ತಾರೆ. ಆಸಕ್ತರು ಗಮನಿಸಬಹುದು.
ನಿಮ್ಮ ಪ್ರತಿಕ್ರಿಯೆಗಳು