ನುರಿತ ಬಳಕೆದಾರರಿಗೆ

Written By Omshivaprakash H L

July 24, 2014

IPv6 ನಿಷ್ಕ್ರಿಯಗೊಳಿಸುವುದು ಹೇಗೆ?

ಉಬುಂಟು ೧೨.೦೪, ಲಿನಕ್ಸ್ ಮಿಂಟ್ ಇತ್ಯಾದಿಗಳಲ್ಲಿ IPv6 ನಿಂದಾಗಿ ಇಂಟರ್ನೆಟ್ ಸಂಪರ್ಕ ಬಹಳ ನಿಧಾನವಾಗಿ ಕೆಲಸ ಮಾಡುವುದು. ಇದು ಸಾಮಾನ್ಯವಾಗಿ ಕೇಳಿಬರುವ ತೊಂದರೆಯಾಗಿದೆ.

IPv6ನ ಬಳಕೆ ಇನ್ನೂ ದಿನಬಳಕೆಯಲ್ಲಿ ಇಲ್ಲದಿರುವುದರಿಂದ ಇದನ್ನು ನಿಷ್ಕ್ರಿಯಗೊಳಿಸುವುದರಿಂದ ಈ ತೊಂದರೆ ನಿವಾರಿಸಬಹುದು. ನಿಷ್ಕ್ರಿಯಗೊಳಿಸಲು ಈ ಕೆಳಗೆ ನೀಡಿರುವ ಹಂತಗಳನ್ನು ಹಂತ ಹಂತವಾಗಿ ನಿಮ್ಮ ಉಬುಂಟುವಿನಲ್ಲಿ ಬಳಸಿ:

೧. Ctrl+Alt+T ಪ್ರೆಸ್ ಮಾಡಿ ಟರ್ಮಿನಲ್ ತೆರೆಯಿರಿ.

೨. ಟರ್ಮಿನಲ್‌ನಲ್ಲಿ ಈ ಸಾಲನ್ನು ಟೈಪ್ ಮಾಡಿ:

sudo gedit /etc/sysctl.conf

೩. ನಿಮ್ಮ ಪರದೆಯ ಮೇಲೆ ತೆರೆದುಕೊಳ್ಳುವ gedit ನಲ್ಲಿ ಕೆಳಗಿನ ಸಾಲುಗಳನ್ನು ಸೇರಿಸಿ

# IPv6
net.ipv6.conf.all.disable_ipv6 = 1
net.ipv6.conf.default.disable_ipv6 = 1
net.ipv6.conf.lo.disable_ipv6 = 1

೪. sysctl.conf ಕಡತವನ್ನು ಉಳಿಸಿ

೫. ಈ ಕೆಳಗಿನ ಕಮ್ಯಾಂಡ್ ಬಳಸಿ sysctl ಮರು ಪ್ರಾರಂಭಿಸಿ:
sudo sysctl -p

ನಿಕಾನ್ ಹಾಗೂ ಕ್ಯಾನನ್ RAW ಫಾರ್ಮ್ಯಾಟ್ ಪಿಕ್ಚರುಗಳ thumbnail ಬರುವಂತೆ ಮಾಡುವುದು

ಎಸ್.ಎಲ್.‌ಆರ್ ಕ್ಯಾಮೆರಾಗಳ ಜೊತೆಗೆ ಒಡನಾಟ ಶುರು ಮಾಡಿದಾಗ ಸಾಮಾನ್ಯವಾಗಿ RAW ಫಾರ್ಮ್ಯಾಟ್‌ನಲ್ಲಿ ಚಿತ್ರಗಳನ್ನು ತೆಗೆಯುವುದು ಹಲವರಿಗೆ ಅಭ್ಯಾಸವಾಗುತ್ತಾ ಬರುತ್ತದೆ. ಆದರೆ, ಇಂತಹ ಚಿತ್ರಗಳನ್ನು ತೆಗೆದ ನಂತರ ಅವುಗಳನ್ನು ಗಿಂಪ್‌ ಅಥವಾ ಫೋಟೋ‌ಶಾಪ್‌ಗಳಲ್ಲಿ ತೆಗೆದು ನೋಡುವುದು ಕೆಲವೊಮ್ಮೆ ಕಷ್ಟ ಸಾಧ್ಯ. ಪ್ರತಿಯೊಂದು ಚಿತ್ರವನ್ನು ಅಪ್ಲಿಕೇಷನ್ ಬಳಸಿಯೇ ನೋಡಬೇಕು ಎಂದೇನಿಲ್ಲ ಅಲ್ಲವೇ? ಥಂಬ್‌ನೈಲ್ ಇರುತ್ತಲ್ಲಾ ಎಂದರೆ, ಉಬುಂಟುನಲ್ಲಿ ಅಥವಾ ಲಿನಕ್ಸ್‌ನಲ್ಲಿ ಕೆಲವೊಮ್ಮೆ ಅದು ನೇರವಾಗಿ ಕೆಲಸ ಮಾಡದೇ ಹೋಗಬಹುದು.

gnome-raw-thumbnailer ಎಂಬ ಅಪ್ಲಿಕೇಷನ್ ಒಂದು ಇದಕ್ಕೆಂದೇ ಇದೆ. ಕೆಳಗಿನ ಕಮ್ಯಾಂಡ್ ಬಳಸಿ ಇದನ್ನು ಇನ್ಸ್ಟಾಲ್ ಮಾಡಿಕೊಳ್ಳಬಹುದು.

sudo apt-get install gnome-raw-thumbnailer

ಇದಾದ ನಂತರ gconf-editor ಬಳಸಿ Nikon ನ NEF ಮತ್ತು Canon ನ CRW ಇತ್ಯಾದಿ ಫಾರ್ಮ್ಯಾಟುಗಳನ್ನು ಎನೇಬಲ್ ಮಾಡಿಕೊಳ್ಳಬಹುದು.

gconf-editor ನಲ್ಲಿ /desktop/gnome/thumbnailers ಕೆಳಗೆ ಇವುಗಳಿಗೆ ಸಂಬಂಧಿಸಿದ ಸೆಟ್ಟಿಂಗ್‌ಗಳನ್ನು ನೀವು ನೋಡಬಹುದು.

ಇದೂ ಕೆಲಸ ಮಾಡದಿದ್ದರೆ futurecure.com ನಲ್ಲಿ ನಾನು ನೋಡಿದ ಈ ಸಲಹೆ ಕೂಡ ಚೆನ್ನಾಗಿ ಕೆಲಸ ಮಾಡುತ್ತದೆ.

sudo gedit /usr/share/thumbnailers/raw.thumbnailer

ಈ ಕಮ್ಯಾಂಡ್ ಅನ್ನು ಬಳಸಿ raw.thumbnailer ಎಂಬ ಹೊಸ ಫೈಲ್ ಸೃಷ್ಟಿಸಿ. ಇದರೊಳಗೆ ಈ ಕೆಳಕಾಣುವ ಸಾಲುಗಳನ್ನು ಸೇರಿಸಿ.
[Thumbnailer Entry]
Exec=/usr/bin/gnome-raw-thumbnailer -s %s %u %o
MimeType=image/x-3fr;image/x-adobe-dng;image/x-arw;image/x-bay;image/x-canon-cr2;image/x-canon-crw;image/x-cap;image/x-cr2;image/x-crw;image/x-dcr;image/x-dcraw;image/x-dcs;image/x-dng;image/x-drf;image/x-eip;image/x-erf;image/x-fff;image/x-fuji-raf;image/x-iiq;image/x-k25;image/x-kdc;image/x-mef;image/x-minolta-mrw;image/x-mos;image/x-mrw;image/x-nef;image/x-nikon-nef;image/x-nrw;image/x-olympus-orf;image/x-orf;image/x-panasonic-raw;image/x-pef;image/x-pentax-pef;image/x-ptx;image/x-pxn;image/x-r3d;image/x-raf;image/x-raw;image/x-rw2;image/x-rwl;image/x-rwz;image/x-sigma-x3f;image/x-sony-arw;image/x-sony-sr2;image/x-sony-srf;image/x-sr2;image/x-srf;image/x-x3f;

ಈ ಪುಟ ಸೇವ್ ಮಾಡಿ ನಂತರ ಚಿತ್ರಗಳಿರುವ ನಿಮ್ಮ ಫೋಲ್ಡರ್‌ಗೆ ಹೋಗಿ ನೋಡಿ. raw ಫಾರ್ಮ್ಯಾಟ್‌ನಲ್ಲಿರುವ ಚಿತ್ರಗಳ ಥಂಬ್‌ನೈಲ್‌ಗಳೂ ಕೂಡ ನಿಮಗೆ ಕಾಣಲಿಕ್ಕೆ ಶುರುವಾಗಿರುತ್ತವೆ.

ಉಬುಂಟುವಿನಲ್ಲಿ ಗೆಸ್ಟ್ ಸೆಷನ್ ನಿರ್ಬಂಧಿಸುವುದು ಹೇಗೆ?

ಉಬುಂಟುವಿನಲ್ಲಿ ಲಾಗಿನ್ ಆಗುವಾಗ, ನಿಮ್ಮ ಹೆಸರಿನ ಕೆಳಗೆ ‌’Guest’ ಎಂಬ ಹೆಸರಿನ ಬಳಕೆದಾರನನ್ನೂ ಕಾಣುತ್ತೀರಲ್ಲವೇ? ಅದನ್ನು ಎಂದಾದರು ಕ್ಲಿಕ್ ಮಾಡಿ ನೋಡಿದ್ದೀರಾ? ಕ್ಲಿಕ್ ಮಾಡಿದ್ದೇ ಆದಲ್ಲಿ, ಪಾಸ್‌ವರ್ಡ್ ಇಲ್ಲದೆಯೇ ಯಾರು ಬೇಕಾದರೂ ನಿಮ್ಮ ಕಂಪ್ಯೂಟರಿನಲ್ಲಿ ಇದರ ಮೂಲಕ ಕೆಲಸ ಮಾಡಬಹುದು.

ಸುರಕ್ಷೆಯ ವಿಚಾರವಾಗಿ ನಾವು ಈ ‌Guest ಬಳಕೆದಾರನನ್ನು ನಿರ್ಬಂಧಿಸಬಹುದು.

ಮೊದಲಿಗೆ ಈ ಕೆಳಗಿನ ಕಮ್ಯಾಂಡ್ ಅನ್ನು ಟರ್ಮಿನಲ್ ‌ನಲ್ಲೋ ಅಥವಾ Alt+F2 ಪ್ರೆಸ್ ಮಾಡಿದಾಗ ಬರುವ ಪ್ರಾಮ್ಟ್ ನಲ್ಲೋ ಟೈಪಿಸಿ.

sudo gedit /etc/lightdm/lightdm.conf

ನಿಮ್ಮ ಮುಂದೆ ಬರುವ ಕಡತದಲ್ಲಿ ಈ ಕೆಳಗಿನ ಸಾಲುಗಳನ್ನು ಕಾಣುತ್ತೀರಿ

[SeatDefaults]

greeter-session=unity-greeter
user-session=ubuntu

ಈ ಸಾಲುಗಳಿಗೆ ಕೆಳಗಿನ ಸಾಲೊಂದನ್ನು ಸೇರಿಸಿ, ಸೇವ್ ಮಾಡಿದರೆ ಆಯ್ತು.

allow-guest=false

‌Guest ಬಳಕೆದಾರ ನಿಮ್ಮ ಕಂಪ್ಯೂಟರ್ ರೀಸ್ಟಾರ್ಟ್ ಆದ ನಂತರದಿಂದ ಲಾಗಿನ್ ಆಗಲು ಸಾಧ್ಯವಾಗುವುದಿಲ್ಲ.

ಸೂಚನೆ: ಡೆಸ್ಕ್‌ಟಾಪ್‌ನ ಬಲ ಮೂಲೆಯಲ್ಲಿ ಕಾಣುವ ನಿಮ್ಮ ಪ್ರೊಫೈಲ್ ಮೆನು ಕೂಡ ಇದರಿಂದ ಕಾಣೆಯಾಗುತ್ತದೆ

ಇದನ್ನು ಮತ್ತೆ ಎನೇಬಲ್ ಮಾಡಲು, ಮೇಲೆ ಸೇರಿಸಿದ ಸಾಲನ್ನು ತೆಗೆದರೆ ಆಯ್ತು.

ಹೈಬರ್ನೇಟ್ ಆಯ್ಕೆ ಲಭ್ಯವಾಗಿಸುವುದು – ಉಬುಂಟು ೧೨.೦೪ ನಲ್ಲಿ

ಹೈಬರ್ನೇಟ್ ಬಳಸುವುದರಿಂದ ನಿಮ್ಮಲ್ಯಾಪ್‌ಟಾಪ್‌ನ ಬ್ಯಾಟರಿ ಮುಗಿಯುವ ಸಮಯದಲ್ಲೋ ಅಥವಾ ನೀವು ಅದರ ಲಿಡ್ ಮುಚ್ಚುವಾಗ, ಇದ್ದಕ್ಕಿದ್ದಂತೆ ಎಲ್ಲಿಯೋ ಹೊರಡಬೇಕಾದಾಗ, ಅದರಲ್ಲಿ ನೀವು ಮಾಡುತ್ತಿರುವ ಕೆಲಸವನ್ನು ಉಳಿಸಿಕೊಂಡು ಕಂಪ್ಯೂಟರ್ ಅನ್ನು ಸ್ಥಬ್ದವಾಗಿಸಬಹುದು. ಪವರ್‌ ಬಟನ್ ಮೇಲೆ ಕ್ಲಿಕ್ಕಿಸಿ ‘‌P‌ower Settings’ ನಲ್ಲಿ ಇದನ್ನು ಎನೇಬಲ್ ಮಾಡಲು ಸಾಧ್ಯ. ಆದರೆ ಉಬುಂಟು ೧೨.೦೪ ನಲ್ಲಿ ಇದನ್ನು ಡಿಸೇಬಲ್ ಮಾಡಲಾಗಿದೆ. ಇದನ್ನು ಮತ್ತೆ ಎನೇಬಲ್ ಮಾಡಲು ಹಲವಾರು ವಿಧಾನಗಳಿಗೆ. hybernate ಎಂಬ ತಂತ್ರಾಂಶವನ್ನು ಇನ್ಸ್ಟಾಲ್ ಮಾಡಿಕೊಳ್ಳಬಹುದು ಅಥವಾ ಈ ಕೆಳಕಂಡಂತೆ ಉಬುಂಟುವಿನ ಮೂಲ ಹೈಬರ್ನೇಟ್ ಆಯ್ಕೆಯನ್ನು ಲಭ್ಯವಾಗಿಸಿಕೊಳ್ಳಬಹುದು. ನೀವು ನುರಿತ ಬಳಕೆದಾರರಾಗಿದ್ದಲ್ಲಿ ಮಾತ್ರ ಇದನ್ನು ಸಂಪೂರ್ಣವಾಗಿ ಓದಿಕೊಂಡು ಬಳಸತಕ್ಕದ್ದು.

ನಿಮ್ಮ ಕಂಪ್ಯೂಟರ್‌ನ ಟರ್ಮಿನಲ್‌ನಲ್ಲಿ ಈ ಕೆಳಕಂಡ ಕಮ್ಯಾಂಡ್ ಟೈಪ್ ಮಾಡಿ:

sudo gedit /var/lib/polkit-1/localauthority/10-vendor.d/com.ubuntu.desktop.pkla

ಪಾಸ್‌ವರ್ಡ್ ಕೇಳಿದಾಗ ಅದನ್ನು ಟೈಪಿಸಿ.

ಈ ಕೆಳಕಂಡ ಸಾಲುಗಳನ್ನು ‌gedit ನಲ್ಲಿ ಹುಡುಕಿ

[Disable hibernate by default]
Identity=unix-user:*
Action=org.freedesktop.upower.hibernate
ResultActive=no

ಮತ್ತು ಅದನ್ನು ಈ ಕೆಳಕಂಡ ಸಾಲುಗಳಿಂದ ಬದಲಿಸಿ

[Re-enable hibernate]
Identity=unix-user:*
Action=org.freedesktop.upower.hibernate
ResultActive=yes

ನೀವು ಮುಂದೆ ನಿಮ್ಮ ಕಂಪ್ಯೂಟರ್ ರೀಸ್ಟಾರ್ಟ್ ಮಾಡಿದ ನಂತರ ‘ಹೈಬರ್ನೇಟ್’ ನಿಮ್ಮ ಪವರ್ ಮೆನುವಿನಲ್ಲಿ ಕಾಣಿಸಿಕೊಳ್ಳುತ್ತದೆ. ನಿಮ್ಮ ಕಂಪ್ಯೂಟರ್‌ನ ಹಾರ್ಡ್ವೇರ್ ಅದನ್ನು ಬೆಂಬಲಿಸಿದಲ್ಲಿ, ಅದು ಕಾರ್ಯನಿರ್ವಹಿಸುವುದನ್ನು ನೀವು ಕಾಣಬಹುದು.

ಇದನ್ನು ಪರೀಕ್ಷಿಸಲು ಈ ಕೆಳಕಂಡ ಕಮ್ಯಾಂಡ್ ಬಳಸಿ:

sudo pm-hibernate

ಲಿನಕ್ಸೂ – ತೊಂದರೆಗಳೂ – ಪರಿಹಾರಗಳು

ಮೊನ್ನೆ ಒಮ್ಮೆ ಹೀಗಾಯ್ತು…

itrans ನಲ್ಲಿ ‘ಅರ್ಹ’ ಟೈಪಿಸಲು ಪ್ರಯತ್ನಿ ಸೋತೆ.
kn-itrans.mim (/usr/share/m17n/kn-itrans.mim) ನಲ್ಲಿದ್ದ ಈ ಕೆಳಗಿನ ಸಂಕೇತ ಅರ್ಹ ಪದವನ್ನು ಟೈಪಿಸಲು ಬಿಡುತ್ತಿಲ್ಲ.
(“rh” “ಱ್”) ; not in ITRANS Kannada table
ಕಾಮೆಂಟ್ ಮಾಡಿ ಐ-ಬಸ್ ರೀಸ್ಟಾರ್ಟ್ ಮಾಡಿದ ನಂತರ ಸರಿಯಾಗಿ ಕೆಲಸ ಮಾಡುತ್ತಿದೆ.

ಹೀಗೆ ಯಾವಾಗಲೋ ಒಮ್ಮೆ ವರ್ಷಾನುವರ್ಷಗಳಿಂದ ಲಿನಕ್ಸ್ ಬಳಸುತ್ತಿರುವ ನಮಗೇ ಹೊಸ ತೊಂದರೆ ತಾಪತ್ರಯಗಳು ಕಾಡುತ್ತಲೇ ಇರುತ್ತವೆ. ಹಾಗೆಂದು ಎಲ್ಲವೂ ಕೆಲಸ ಮಾಡುವುದೇ ಇಲ್ಲ ಎಂದೇನಲ್ಲವಲ್ಲ. ಮೇಲಿನ ಸಾಲುಗಳನ್ನೇ ನೋಡಿ. ನನ್ನ ತಿಳಿವಿಗೆ ಬಂದಿದ್ದ ಒಂದೆರಡು ವಿಷಯಗಳನ್ನು ಜಾಲಾಡಿ ನೋಡಿ ತೊಂದರೆಯನ್ನೂ ದೂರ ಮಾಡಿಕೊಂಡದ್ದಾಗಿದೆ. ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶ ನನಗೆ ಇಂತದ್ದೊಂದು ಶಕ್ತಿಯನ್ನು ಕೊಟ್ಟಿದೆ. ನಾನು ಬಳಸುತ್ತಿರುವ ತಂತ್ರಾಂಶ ಮತ್ತ್ಯಾವುದೋ ಖಾಸಗಿ ಸಂಸ್ಥೆಯದ್ದಾಗಿದ್ದರೆ, ನಾವು ಅವರ ತಂತ್ರಜ್ಞರ ತಂಡ ಪರಿಹಾರ ಸೂಚಿಸುವವರೆಗೂ ಯೋಚಿಸುತ್ತಾ ಕುಳಿತಿರಬೇಕಿತ್ತೋ ಏನೋ ಅಲ್ವೇ? ಜೊತೆಗೆ ತಂತ್ರಾಂಶ ಕೆಲಸ ಮಾಡುವುದರ ಬಗ್ಗೆ ಹೆಚ್ಚಿನ ಅರಿವನ್ನು ನಾವೇ ಬೆಳೆಸಿಕೊಳ್ಳಲಿಕ್ಕೂ ಸಾಧ್ಯವಾಗುತ್ತಿರಲಿಲ್ಲ.

ಲಿನಕ್ಸ್ ನಲ್ಲಿ ಕನ್ನಡ ಮತ್ತು ಅದರ ಸುತ್ತಲಿನ ತೊಂದರೆ ನಿವಾರಣೆಗಳ ಬಗ್ಗೆ ನಮ್ಮ ಹಳ್ಳಿಮನೆ ಅರವಿಂದ ಬರೆದಿರುವ ಲೇಖನವನ್ನೂ ಓದಿ.

ಹಂಚಿಕೆಯ ಬಗ್ಗೆ

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಇತಿಹಾಸದ ಪುಟಗಳಿಂದ

Related Articles

Related

IPv6 ನಿಷ್ಕ್ರಿಯಗೊಳಿಸುವುದು ಹೇಗೆ?

ಉಬುಂಟು ೧೨.೦೪, ಲಿನಕ್ಸ್ ಮಿಂಟ್ ಇತ್ಯಾದಿಗಳಲ್ಲಿ IPv6 ನಿಂದಾಗಿ ಇಂಟರ್ನೆಟ್ ಸಂಪರ್ಕ ಬಹಳ ನಿಧಾನವಾಗಿ ಕೆಲಸ ಮಾಡುವುದು. ಇದು ಸಾಮಾನ್ಯವಾಗಿ ಕೇಳಿಬರುವ ತೊಂದರೆಯಾಗಿದೆ. IPv6ನ ಬಳಕೆ ಇನ್ನೂ ದಿನಬಳಕೆಯಲ್ಲಿ ಇಲ್ಲದಿರುವುದರಿಂದ ಇದನ್ನು ನಿಷ್ಕ್ರಿಯಗೊಳಿಸುವುದರಿಂದ ಈ ತೊಂದರೆ ನಿವಾರಿಸಬಹುದು. ನಿಷ್ಕ್ರಿಯಗೊಳಿಸಲು ಈ ಕೆಳಗೆ...

read more

ನಿಕಾನ್ ಹಾಗೂ ಕ್ಯಾನನ್ RAW ಫಾರ್ಮ್ಯಾಟ್ ಪಿಕ್ಚರುಗಳ thumbnail ಬರುವಂತೆ ಮಾಡುವುದು

ಎಸ್.ಎಲ್.‌ಆರ್ ಕ್ಯಾಮೆರಾಗಳ ಜೊತೆಗೆ ಒಡನಾಟ ಶುರು ಮಾಡಿದಾಗ ಸಾಮಾನ್ಯವಾಗಿ RAW ಫಾರ್ಮ್ಯಾಟ್‌ನಲ್ಲಿ ಚಿತ್ರಗಳನ್ನು ತೆಗೆಯುವುದು ಹಲವರಿಗೆ ಅಭ್ಯಾಸವಾಗುತ್ತಾ ಬರುತ್ತದೆ. ಆದರೆ, ಇಂತಹ ಚಿತ್ರಗಳನ್ನು ತೆಗೆದ ನಂತರ ಅವುಗಳನ್ನು ಗಿಂಪ್‌ ಅಥವಾ ಫೋಟೋ‌ಶಾಪ್‌ಗಳಲ್ಲಿ ತೆಗೆದು ನೋಡುವುದು ಕೆಲವೊಮ್ಮೆ ಕಷ್ಟ ಸಾಧ್ಯ. ಪ್ರತಿಯೊಂದು...

read more

ಉಬುಂಟುವಿನಲ್ಲಿ ಗೆಸ್ಟ್ ಸೆಷನ್ ನಿರ್ಬಂಧಿಸುವುದು ಹೇಗೆ?

ಉಬುಂಟುವಿನಲ್ಲಿ ಲಾಗಿನ್ ಆಗುವಾಗ, ನಿಮ್ಮ ಹೆಸರಿನ ಕೆಳಗೆ ‌'Guest' ಎಂಬ ಹೆಸರಿನ ಬಳಕೆದಾರನನ್ನೂ ಕಾಣುತ್ತೀರಲ್ಲವೇ? ಅದನ್ನು ಎಂದಾದರು ಕ್ಲಿಕ್ ಮಾಡಿ ನೋಡಿದ್ದೀರಾ? ಕ್ಲಿಕ್ ಮಾಡಿದ್ದೇ ಆದಲ್ಲಿ, ಪಾಸ್‌ವರ್ಡ್ ಇಲ್ಲದೆಯೇ ಯಾರು ಬೇಕಾದರೂ ನಿಮ್ಮ ಕಂಪ್ಯೂಟರಿನಲ್ಲಿ ಇದರ ಮೂಲಕ ಕೆಲಸ ಮಾಡಬಹುದು. ಸುರಕ್ಷೆಯ ವಿಚಾರವಾಗಿ ನಾವು...

read more