ಇಮೇಜ್‌ಮ್ಯಾಜಿಕ್ – ಚಿತ್ರಗಳ ಜೊತೆಗಿಷ್ಟು ಮೋಜು – ೧

ImageMagick ಎಂಬ ತಂತ್ರಾಂಶ ನಿಮ್ಮ ಲಿನಕ್ಸ್ ನಲ್ಲಿ ಇನ್ಸ್ಟಾಲ್ ಆಗಿದ್ರೆ, ಅದನ್ನು ಬಳಸಿ ನಿಮ್ಮ ಇಮೇಜ್ ಫೈಲುಗಳ ಬಗೆಯನ್ನು (File Format/Type) ಬದಲಿಸಬಹುದು. ಅಂದರೆ, ನೀವು ಕ್ಯಾಮೆರಾದಲ್ಲಿ ತೆಗೆದ ಫೋಟೋ .JPEG ಫಾರ್ಮ್ಯಾಟ್‌ನಲ್ಲಿದ್ದರೆ, ಅದನ್ನು ಪ್ರಿಂಟ್ ಮಾಡುವಾಗ ನಿಮಗೆ .eps ಅಥವಾ .svg ಗೊ ಅದನ್ನುಬದಲಿಸಬೇಕಾಗುವುದು. ಇಂಟರ್ನೆಟ್‌ನಲ್ಲಿ ಅದನ್ನು ಬಳಸುವಾಗ .png ಅಥವಾ .gif ಗೆ ಬದಲಿಸಬೇಕಾಗಬಹುದು. ಅದಕ್ಕೆ ಸುಲಭಮಾರ್ಗ ImageMagick. ನೀವು ಉಬುಂಟು/ಡೆಬಿಯನ್ ಬಳಸುತ್ತಿದ್ದಲ್ಲಿ ಉಬುಂಟು...

ಉಬುಂಟು ೧೧.೧೦ ನಲ್ಲಿ ಕ್ಯಾನನ್ ಪ್ರಿಂಟರ್

ಮೊದಲ ಬಾರಿಗೆ ಕ್ಯಾನನ್ ಪ್ರಿಂಟರ್‌ ಒಂದು ಯಾವುದೇ ಹೊರಗಿನ ಡ್ರೈವರ್‌ಗಳ ಸಹಾಯವಿಲ್ಲದೆ ಕೆಲಸ ಮಾಡಿದ್ದನ್ನು ಉಬುಂಟು ೧೧.೧೦ ನಲ್ಲಿ ಕಂಡೆ. ನನ್ನ ಕ್ಯಾನನ್ ಪಿಕ್ಸ್ಮಾ ಎಂ.ಪಿ.೪೮೦ ದ ಟೆಸ್ಟ್ ಪ್ರಿಂಟ್ ನಿಮಗಾಗಿ.   ಇಲ್ಲಿಯವರೆಗೂ ಬಹುತೇಕ ಕ್ಯಾನನ್ ಪ್ರಿಂಟರ್ಗಳಿಗೆ ಲಿನಕ್ಸ್ ಡ್ರೈವರ್ಗಳು ಲಭ್ಯವಿರಲಿಲ್ಲ. ಟರ್ಬೋಪ್ರಿಂಟ್ ಎಂಬ ಕಂಪೆನಿಯೊಂದು ಇಂತಹ  ಪ್ರಿಂಟರ್ಗಳಿಗೆ ಲಿನಕ್ಸ್ ಡ್ರೈವರ್‌ ಅನ್ನು ಒದಗಿಸುತ್ತಿತ್ತು. ಆದರೆ, ಅದನ್ನು ಕೊಂಡು ಉಪಯೋಗಿಸ ಬೇಕಾದಲ್ಲಿ  ಪ್ರಿಂಟರ್‌ನಷ್ಟೇ ದುಡ್ಡನ್ನು ಮತೆ...

ಸಿನಾಪ್ಟಿಕ್ ಬದಲಿಗೆ ಉಬುಂಟು ಸಾಫ್ಟ್‌ವೇರ್ ಸೆಂಟರ್

 ಉಬುಂಟು ಸಾಮಾನ್ಯ ಬಳಕೆದಾರರಿಗೆ ಪರಿಚಿತವಿದ್ದ ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಉಬುಂಟು ಸಾಫ್ಟ್‌ವೇರ್‌ಗೆ ತನ್ನ ಜಾಗವನ್ನು ಬಿಟ್ಟುಕೊಡಲಿದೆ. ಉಬುಂಟು ೧೧.೧೦ ಆವೃತ್ತಿ ಇನ್ನು ನಾಲ್ಕು ತಿಂಗಳುಗಳಲ್ಲಿ ನಮಗೆ ಉಪಲಬ್ದವಿರಲಿದ್ದು ಇದರಿಂದ ಸಿನಾಪ್ಟಿಕ್ ಅನ್ನು ಕೈಬಿಡಲು ಯೋಚಿಸಲಾಗಿದೆ. ಬಳಕೆದಾರನ ಬಳಕೆಗೆ ಅನುಗುಣವಾಗಿ ಉಬುಂಟುವಿಗೆ ಹೊಸ ರೂಪಕೊಡಲು ಹೊರಟಿರುವ ಕೆನಾನಿಕಲ್ ಸಂಸ್ಥೆ ಇತ್ತೀಚಿಗಿನ ತನ್ನ ಉಬುಂಟು ಆವೃತ್ತಿ ೧೧.೦೪ ನಲ್ಲಿ ಗ್ನೋಮ್ ಅನ್ನು ಕೈಬಿಟ್ಟು ಯುನಿಟಿ ಯೂಸರ್ ಇಂಟರ್ಫೇಸ್ ಬಳಸಿದ್ದನ್ನು ಇಲ್ಲಿ...

Grub – ರಿಇನ್ಸ್ಟಾಲ್ ಮಾಡ್ಬೇಕಾದ್ರೆ…

ನಿಮ್ಮಲ್ಲನೇಕರು ಗ್ನು/ಲಿನಕ್ಸ್ ಜೊತೆಗೆ ವಿಂಡೋಸ್ ಬಳಸ್ತೀರ. ಕೆಲವೊಮ್ಮೆ ವಿಂಡೋಸ್ ರಿಇನ್ಸ್ಟಾಲ್ ಮಾಡ್ಬೇಕಾದಾಗ ನಿಮ್ಮ ಸಿಸ್ಟಂನಲ್ಲಿನ ಲಿನಕ್ಸ್ ಬೂಟ್ ಲೋಡರ್ (Grub) ಮತ್ತೆ ಬೂಟ್ ಸಮಯದಲ್ಲಿ ಬರದೆ ವಿಂಡೋಸ್ ಸೀದಾ ಬೂಟ್ ಆಗುವುದುಂಟು. ಇದಕ್ಕೆ ಕಾರಣ, ವಿಂಡೋಸ್ ನ ಇನ್ಸ್ಟಾಲರ್ ನಿಮ್ಮ ಕಂಪ್ಯೂಟರಿನ ಹಾರ್ಡಿಸ್ಕ್ ನಲ್ಲಿರುವ ಮೊದಲನೆ ಬೂಟ್ ಸೆಕ್ಟರ್ ಅಥವಾ ಹಾರ್ಡಿಸ್ಕ್ ನ ಟ್ರಾಕ್ ಶುರುವಾಗುವ ಮೊದಲನೆ ಮೆಮೊರಿ ಲೊಕೇಷನ್ ಎಂದು ಕರೆಸಿಕೊಳ್ಳುವ ಎಂ.ಬಿ.ಆರ್ ಅನ್ನು ಹೊಸದಾಗಿ ಬರೆಯುವುದೇ ಆಗಿದೆ. ಮತ್ತೆ ಮೊದಲಿನಂತೆ...

ಲಿನಕ್ಸ್ ಟೆಸ್ಟ್ ಡ್ರೈವ್

ಲಿನಕ್ಸ್ ಬಳಸೋದು ಸುಲಭ ಎಂದು ಬಹಳ ಸಾರಿ ಲಿನಕ್ಸಾಯಣದಲ್ಲಿ ಓದಿದ್ದೀರಿ. ಆದ್ರೂ ಅದನ್ನ ತಗೊಂಡು ಒಂದು ಟೆಸ್ಟ್ ಡ್ರೈವ್ ಮಾಡ್ಲಿಕ್ಕೆ ಕಷ್ಟ ಆಗ್ತಿರ್ಬೇಕಲ್ಲಾ? ಅದಕ್ಕೂ ನಾಲ್ಕು ಬೇರೆ ಹಾದಿಗಳಿವೆ ಗೊತ್ತೇ? ಲಿನಕ್ಸ್ ಇನ್ಸ್ಟಾಲ್ ಮಾಡದೇನೆ ಅದನ್ನು ಬಳಸಿ ನೋಡಬಹುದು. ಅದಕ್ಕೆ ಈ ಲೇಖನ. ಒಮ್ಮೆ ಓದಿ, ಲಿನಕ್ಸ್ ಬಳಸಿ ನೋಡಿ. ಲೈವ್ ಸಿ.ಡಿ ಸಾಮಾನ್ಯವಾಗಿ ಲಿನಕ್ಸ್ ಸಿ.ಡಿ ಕೈಗೆ ಸಿಕ್ಕ ತಕ್ಷಣ ಅದನ್ನು ಉಪಯೋಗಿಸಿ ನಿಮ್ಮ ಕಂಪ್ಯೂಟರ್ ಬೂಟ್ ಮಾಡಿ ಲಿನಕ್ಸ್ ನಲ್ಲಿ ಕೆಲಸ ಮಾಡಬಹುದು. ಹೌದು, ಇನ್ಸ್ಟಾಲ್ ಮಾಡದೆಯೇ ಲಿನಕ್ಸ್...

« Previous Entries

Powered by HostRobust | © 2006 - 2014 Linuxaayana