ಓಪನ್ ಹಾರ್ಡ್ವೇರ್ ಜರ್ನಲ್

  ತಂತ್ರಾಂಶದಂತೆ ಯಂತ್ರಾಂಶ ಅಂದರೆ, ಕಂಪ್ಯೂಟರ್ ಹಾರ್ಡ್ವೇರ್ ಕೂಡ ಮುಕ್ತ ಹಾಗೂ ಸ್ವತಂತ್ರವಾಗಿ ನಮಗೆ ಸಿಕ್ಕಲ್ಲಿ? ಹೌದು, ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ ನಂತರ ಈಗ ಮುಕ್ತ ತಂತ್ರಾಂಶಗಳ ಸರದಿ. ಇದನ್ನು ಬಿಂಬಿಸಲು ಮತ್ತು ಸಮುದಾಯದ ಮಂದಿಗೆ ಸುಲಭವಾಗಿ ತಲುಪಿಸಲು ‘ಓಪನ್ ಹಾರ್ಡ್ವೇರ್ ಜರ್ನಲ್’ ಈಗ ಬಂದಿದೆ. ಈ ಒಪನ್ ಜರ್ನಲ್ ಅಥವಾ ಮುಕ್ತ ಪತ್ರಿಕೆ ಕ್ರಿಯೇಟೀವ್ ಕಾಮನ್ಸ್ ಲೈಸೆನ್ಸಿನಡಿ ಲಭ್ಯವಿದೆ. ತನ್ನ ಮೊದಲ ಆವೃತ್ತಿಯಲ್ಲಿ ‘Producing Lenses With 3D Printers,’ ‘Teaching with Open...

ಡಿಜಿಟಲ್ ಲಿನಕ್ಸ್ ಜರ್ನಲ್

ಲಿನಕ್ಸ್ ಜರ್ನಲ್ (Linux Journal) ಲಿನಕ್ಸ್ ಆಸಕ್ತರಿಗೆ ಅತ್ಯಂತ ಪ್ರಿಯ ಮ್ಯಾಗಜೀನ್‌ಗಳಲ್ಲಿ ಒಂದು. ಇದುವರೆಗೆ ಪ್ರಿಂಟ್ ಆವೃತ್ತಿಯಲ್ಲಿ ಹೊರಬರುತ್ತಿದ್ದ ಈ ಮ್ಯಾಗಜೀನ್ ಇನ್ಮುಂದೆ ಓದುಗರಿಗೆ ಡಿಜಿಟಲ್ ಆವೃತ್ತಿಯಲ್ಲಿ ಮಾತ್ರ ಲಭ್ಯವಾಗಿದೆ. ತನ್ನ ಚಂದಾದಾರರಿಗೆ ಲಿನಕ್ಸ್ ಜರ್ನಲ್ ಕಳಿಸಿದ ಸಂದೇಶ ಇಂತಿದೆ: We understand that many readers still prefer hard-copy magazines. But, we also have seen many long-standing, excellent publications either come to an end or grow very...

ಅರಿವಿನ ಅಲೆಗಳು ಇ-ಪುಸ್ತಕ

ಈ ಮೊದಲು ‘ಅರಿವಿನ ಅಲೆಗಳು‘ ಸ್ವಾತಂತ್ರೋತ್ಸವದ ವಿಶಿಷ್ಟ ಆಚರಣೆಯ ಬಗ್ಗೆ ಲಿನಕ್ಸಾಯಣದಲ್ಲಿ ಬರೆದಿದ್ದೆವು. ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶದ ಬಗ್ಗೆ, ಅದರೊಡನೆ ಬಳಕೆದಾರನಿಗೆ ಸಿಗುವ ಸ್ವಾತಂತ್ರ್ಯದ ಬಗ್ಗೆ ಮಾಹಿತಿಯನ್ನು ಇತರ ಜನಸಾಮಾನ್ಯರೊಡನೆ ಹಂಚಿಕೊಳ್ಳುವ ಉದ್ದೇಶದೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮ ಆಗಸ್ಟ್ ೧ ರಿಂದ ಆಗಸ್ಟ್ ೧೪ ವರೆಗೆ ಲೇಖನಗಳು ಜ್ಞಾನದ ಅಲೆಗಳಾಗಿ ಹರಿದು ಬಂದವು. ಆಗಸ್ಟ್ ೧೫ರಂದು ಇವೆಲ್ಲವುಗಳನ್ನು ಇಡಿಯಾಗಿ ಇ-ಪುಸ್ತಕ ರೂಪದಲ್ಲಿ ಕನ್ನಡಿಗರ ಮುಂದೆ ಇಡಲಾಗಿದೆ. ಕನ್ನಡದಲ್ಲಿ...

ಉಬುಂಟು ನ್ಯಾಟಿ ನಾರ್ವಾಲ್ ೧೧.೦೪

ಜನಪ್ರಿಯ ಗ್ನು/ಲಿನಕ್ಸ್ ಡೆಸ್ಕ್ಟಾಪ್ ವಿತರಣೆ ಉಬುಂಟು ೧೧.೦೪ ಆವೃತ್ತಿಯ ಬಿಡುಗಡೆ ಕಂಡಿದೆ. ಇದನ್ನು ಉಬುಂಟು ಅಂತರ್ಜಾಲ ತಾಣದಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ಉಬುಂಟುವಿನ ಈ ಹೊಸ ಆವೃತ್ತಿಯ ಹೆಸರು ನ್ಯಾಟಿ ನಾರ್ವಾಲ್ (Natty Narwhal). ನ್ಯಾಟಿ ನಾರ್ವಾಲ್ ಉಬುಂಟುವಿನ ಬಳಕೆದಾರನಿಗೆ ಹೊಸ ಡೆಸ್ಕ್ಟಾಪ್ ಪರಿಸರದ ಅನುಭವವನ್ನು ಯುನಿಟಿ (Unity) ಯೂಸರ್ ಇಂಟರ್ಫೇಸ್ ಮೂಲಕ ಕೊಡಲು ಇಚ್ಚಿಸಿದೆ. ಇದುವರೆಗೆ ನೀವು ಉಬುಂಟುವಿನಲ್ಲಿ ಕಾಣುತ್ತಿದ್ದ GNOME shell ಅನ್ನು ಯುನಿಟಿ ಸ್ಥಳಾಂತರಿಸಿದೆ.  ಆದಾಗ್ಯೂ GNOME ಗೆ...

UEFI – ನಿಮ್ಮ ಪಿ.ಸಿ ಬೇಗ ಶುರುವಾಗುವಂತೆ ಮಾಡಬಲ್ಲದು..

೨೫ ವರ್ಷಗಳಿಂದ ಪ್ರತಿಯೊಂದು ಕಂಪ್ಯೂಟರ್ ಮತ್ತು ಅದರಲ್ಲಿನ ಆಪರೇಟಿಂಗ್ ಸಿಸ್ಟಂ ಶುರುವಾಗಲಿಕ್ಕೆ ಕಾರಣವಾಗಿರುವ ಸಣ್ಣದೊಂದು ತಂತ್ರಾಂಶ ಬಯೋಸ್ (BIOS – Basic Input Output System) ಇಷ್ಟು ದಿನ ಇದ್ದದ್ದೇ ಒಂದು ಅಚ್ಚರಿ. ಈ ತಂತ್ರಾಂಶದ ಆಯುಷ್ಯ ಇಷ್ಟು ದೊಡ್ಡದಿರಬಹುದೆಂದು ಯಾರೂ ಊಹಿಸಿರಲೂ ಇಲ್ಲ, ಜೊತೆಗೆ ಇಂದು ನಿಮ್ಮ ಹೊಸ ಕಂಪ್ಯೂಟರ್ ಬೂಟ್ ಆಗಲಿಕ್ಕೆ ಸ್ವಲ್ಪ ಸಮಯ ತೆಗೆದು ಕೊಳ್ಳುತ್ತಿದೆ ಎಂದರೆ.. ಅದಕ್ಕೆ ಈ ಬಯೋಸ್ ಕಾರಣ. ೨ ಜಿ.ಬಿ ರಾಂ ಇದ್ದರೂ ಸ್ವಲ್ಪ ಹೊತ್ತು ತೆಗೆದುಕೊಳ್ಳುತ್ತಿದೆಯಲ್ಲ ಹಳೆಯ...

« Previous Entries

Powered by HostRobust | © 2006 - 2014 Linuxaayana