ವಿಡಿಯೋ: ಸ್ವತಂತ್ರ ತಂತ್ರಾಂಶದ ಹಾಡು

೧೯೯೧ರ ಬಾರ್ಡಿಕ್ ಸರ್ಕಲ್ (ಒಟ್ಟಿಗೆ ಸೇರಿ ಹಾಡುಗಳನ್ನು ರಚಿಸಿ ಹಾಡುವ ಒಂದು ಕೂಟ) ಒಂದರಲ್ಲಿ ರಿಚರ್ಡ್ ಸ್ಟಾಲ್ಮನ್ ಬಲ್ಗೇರಿಯನ್‌ನ ಸೋಡಿ ಮೊಮ ಜನಪದ ಗೀತೆಯ ತಾಳಕ್ಕೆ ಸರಿಹೊಂದುವಂತೆ ರಚಿಸಿದ ಸ್ವತಂತ್ರ ತಂತ್ರಾಂಶ ಗೀತೆಯನ್ನು ಅವರೇ ಹಾಡಿರುವ ಒಂದು ದೃಶ್ಯ ನಿಮಗಾಗಿ. httpv://www.youtube.com/watch?v=9sJUDx7iEJw ಈ ಹಾಡಿನ ಸಾಹಿತ್ಯ ಈ ಕೆಳಕಂಡಂತಿದೆ. Join us now and share the software; You’ll be free, hackers, you’ll be free. Join us now and share the software;...

ಪುಸ್ತಕ: ಸ್ವತಂತ್ರ ತಂತ್ರಾಂಶ, ಸ್ವತಂತ್ರ ಸಮಾಜ : ರಿಚರ್ಡ್ ಸ್ಟಾಲ್ಮನ್

ಸ್ವತಂತ್ರ ತಂತ್ರಾಂಶ, ಸ್ವತಂತ್ರ ಸಮಾಜದ ಬಗ್ಗೆ ತಿಳಿಯಲಿಚ್ಚಿಸುವವರು ಸ್ವತಂತ್ರ ತಂತ್ರಾಂಶದ ಹರಿಕಾರ ರಿಚರ್ಡ್ ಸ್ಟಾಲ್ಮನ್ ಬರೆದಿರುವ ಪ್ರಬಂಧಗಳನ್ನು ಓದಲೇಬೇಕು. ಗ್ನು ಯೋಜನೆ, ಸ್ವತಂತ್ರ ತಂತ್ರಾಂಶದ ವಿವರಣೆ, ಅದರ ತತ್ವಗಳು, ಪರವಾನಗಿಯಬಗ್ಗೆ, ತಂತ್ರಾಂಶಗಳನ್ನು ಸ್ವತಂತ್ರವಾಗಿ ಅಭಿವೃದ್ದಿಪಡಿಸಿ ಹಂಚುವುದರ ಬಗ್ಗೆ, ಕಂಪ್ಯೂಟರ್, ಗ್ಲೋಬಲೈಸೇಷನ್‌ಗಳ ಮಧ್ಯೆ ನಮ್ಮ ಗೋಪ್ಯತೆಗಳನ್ನು ಕಾಪಾಡುವುದರ ವಿಷಯವಾಗಿ ಸ್ಟಾಲ್ಮನ್ ತಮ್ಮ ಅರಿವನ್ನು ಇದರಲ್ಲಿ ಬಿಚ್ಚಿಟ್ಟಿದ್ದಾರೆ. ಅವರ ಎಲ್ಲ ಪ್ರಬಂಧಗಳನ್ನು ಲಾರೆನ್ಸ್...

UEFI ಬಗ್ಗೆ ರಿಚರ್ಡ್ ಸ್ಟಾಲ್‌ಮನ್ ಕಡೆಗೂ ಬಾಯ್ಬಿಟ್ಟಿದ್ದಾರೆ

UEFI ಬಗ್ಗೆ ಲಿನಕ್ಸಾಯಣದಲ್ಲಿ ಈಗಾಗಲೇ ಓದಿದ್ದೀರಿ. ಆದರೆ ಮೈಕ್ರೋಸಾಫ್ಟ್ ಕಂಪೆನಿ ಬಳಕೆದಾರರು ಈ ಹೊಸ ಬಯೋಸ್‌ನ ಕೀ ಅನ್ನು ವಿಂಡೋಸ್ ಆವೃತ್ತಿ ೮ ನ್ನು ಬಳಸುವ ARM ಪ್ರಾಸೆಸರ್‌ಗಳಲ್ಲಿ ಬದಲಿಸಲಾಗದಂತೆ ಮಾಡಲು, ಪ್ರಾಸೆಸರ್ ಉತ್ಪನ್ನ ಮಾಡುವ ಕಂಪೆನಿಗಳ ಮೇಲೆ ಒತ್ತಡ ಹೇರುತ್ತಿದೆ. ಲಿನಕ್ಸ್ ನಲ್ಲಿ ಸುರಕ್ಷಿತ ಬೂಟಿಂಗ್‌ಬಗ್ಗೆ  ಇನ್ನೂ ಗೊಂದಲಗಳಿದ್ದರೂ, ಉಬುಂಟು  ಮತ್ತು ಫೆಡೋರ UEFI ಅನ್ನು ಬಳಕೆದಾರರು ಬಳಸುವಂತೆ ಮಾಡಲು ಮುಂದಾಗಿವೆ. ಕಂಪ್ಯೂಟರ್ ತಂತ್ರಾಂಶಗಳು ಮುಕ್ತವಾಗಿ ಹಾಗು ಸ್ವತಂತ್ರವಾಗಿ ಸಿಗಬೇಕು ಎಂದು...

ಲಿನಕ್ಸ್ ಉದಯಕ್ಕೆ ಕಾರಣವಾದ ಘಟನೆಗಳು

* UNIX ಆಪರೇಟಿಂಗ್ ಸಿಸ್ಟಂ ೧೯೬೦ ರಿಂದ ಬೆಲ್ ಲ್ಯಾಬ್ಸ್ ನಲ್ಲಿ ರೂಪ ಪಡೆದು ಉಪಯೋಗಕ್ಕೆ ಅಣಿಯಾಯಿತು. ೧೯೭೦ರಲ್ಲಿ ಇದನ್ನು ಹೊರ ಪ್ರಪಂಚಕ್ಕೆ ಕೂಡ ಪರಿಚಯಿಸಲಾಯಿತು. ಇದರ ಲಭ್ಯತೆ ಮತ್ತು ಬಳಕೆಯ ಸುಲಭ ಸಾಧ್ಯತೆಯಿಂದಾಗಿ ಇದು ಯುನಿವರ್ಸಿಟಿಗಳು ಮತ್ತು ಉದ್ಯಮಗಳಲ್ಲಿ ಪ್ರಚುರವಾಗಿ, ಇದರ ಅಭಿವೃದಿ ಪಡಿಸಿದ ಆವೃತ್ತಿಗಳು ಎಲ್ಲೆಡೆ ಅಂಗೀಕೃತವಾಯಿತು. ಯುನಿಕ್ಸ್ ನ ರಚನೆಯ ವಿನ್ಯಾಸ ಇತರೆ ಆಪರೇಟಿಂಗ್ ಸಿಸ್ಟಂ ನಿರ್ಮಾತೃಗಳಿಗೆ ಪ್ರಭಾವ ಬೀರಿತು. * ೧೯೮೩ ರಲ್ಲಿ Richard Stallman (ರಿಚರ್ಡ್ ಸ್ಟಾಲ್ಮನ್ ) ಗ್ನು...

Powered by HostRobust | © 2006 - 2014 Linuxaayana