ಲಿನಕ್ಸ್ ನ ಉದಯ

೧೯೯೧ರಲ್ಲಿ ಹೆಲ್ಸಿನ್ಕಿ (Helsinki) ಯಲ್ಲಿದ್ದ ಲಿನುಸ್ ಟೋರ್ವಾಲ್ಡ್ಸ್ ಶುರುಮಾಡಿದ ಒಂದು ಯೋಜನೆ ನಂತರ ಲಿನಕ್ಸ್ ಕರ್ನೆಲ್ ಆಗಿ ಪರವರ್ತನೆಗೊಂಡಿತು. ತನ್ನ ಯುನಿವರ್ಸಿಟಿಯ ದೊಡ್ಡ ಯುನಿಕ್ಸ್ ಸರ್ವರುಗಳಿಗೆ ಪ್ರವೇಶ ಪಡೆಯಲು ಉಪಯೋಗಿಸುತ್ತಿದ್ದ ಟರ್ಮಿನಲ್ ಎಮ್ಯುಲೇಟರ್ (terminal emulator) ಆ ಯೋಜನೆ ಆಗಿತ್ತು. ತನ್ನಲ್ಲಿದ್ದ ಕಂಪ್ಯೂಟರ್ ಹಾರ್ಡ್ವೇರ್ ಗೆ ಹೊಂದುವಂತಹ ಪ್ರೋಗ್ರಾಮ್ ಒಂದನ್ನು ಬರೆದ ಅವನು, ಅದು ಯಾವುದೇ ಆಪರೇಟಿಂಗ್ ಸಿಸ್ಟಂ ಜೊತೆ ಅದು ಕೆಲಸ ಮಾಡುವಂತೆ ನೋಡಿಕೊಂಡ (Interoperability) ಏಕೆಂದರೆ...

ಲಿನಕ್ಸ್ ಉದಯಕ್ಕೆ ಕಾರಣವಾದ ಘಟನೆಗಳು

* UNIX ಆಪರೇಟಿಂಗ್ ಸಿಸ್ಟಂ ೧೯೬೦ ರಿಂದ ಬೆಲ್ ಲ್ಯಾಬ್ಸ್ ನಲ್ಲಿ ರೂಪ ಪಡೆದು ಉಪಯೋಗಕ್ಕೆ ಅಣಿಯಾಯಿತು. ೧೯೭೦ರಲ್ಲಿ ಇದನ್ನು ಹೊರ ಪ್ರಪಂಚಕ್ಕೆ ಕೂಡ ಪರಿಚಯಿಸಲಾಯಿತು. ಇದರ ಲಭ್ಯತೆ ಮತ್ತು ಬಳಕೆಯ ಸುಲಭ ಸಾಧ್ಯತೆಯಿಂದಾಗಿ ಇದು ಯುನಿವರ್ಸಿಟಿಗಳು ಮತ್ತು ಉದ್ಯಮಗಳಲ್ಲಿ ಪ್ರಚುರವಾಗಿ, ಇದರ ಅಭಿವೃದಿ ಪಡಿಸಿದ ಆವೃತ್ತಿಗಳು ಎಲ್ಲೆಡೆ ಅಂಗೀಕೃತವಾಯಿತು. ಯುನಿಕ್ಸ್ ನ ರಚನೆಯ ವಿನ್ಯಾಸ ಇತರೆ ಆಪರೇಟಿಂಗ್ ಸಿಸ್ಟಂ ನಿರ್ಮಾತೃಗಳಿಗೆ ಪ್ರಭಾವ ಬೀರಿತು. * ೧೯೮೩ ರಲ್ಲಿ Richard Stallman (ರಿಚರ್ಡ್ ಸ್ಟಾಲ್ಮನ್ ) ಗ್ನು...

ಲಿನಕ್ಸ್ ಕನ್ಸೋಲಿಗೊಂದು ಕೈಪಿಡಿ

Nicholas Marsh ತನ್ನ ಬ್ಲಾಗ್ dontfearthecommandline.blogspot.com ನಲ್ಲಿ ಲಿನಕ್ಸ್ ಕನೋಲನ್ನು ಬಳಸಲಿಕ್ಕೆ ಬೇಕಾದ ವಿಷಯಗಳನ್ನು ಸುಲಭವಾಗಿ ತಿಳಿಸಿಕೊಡುವ ಕೈ-ಪಿಡಿಯೊಂದನ್ನು  ನಿಮ್ಮ ಮುಂದೆ ತಂದಿದ್ದಾನೆ. Introduction to the Command Line (Second Edition) ಎಂಬ ಈ ಪುಸ್ತಕ  ಲುಲು ಡಾಟ್ ಕಾಮ್ ನಲ್ಲಿ ಈಗ ಲಭ್ಯವಿದೆ. ಕೆಳಗಿನ ಕೊಂಡಿಯಿಂದ ನೀವೂ ಅದನ್ನು ಪಡೆದು ಕೊಳ್ಳಬಹುದು. free download in PDF format from Lulu.com ಓಹ್! ಕಮ್ಯಾಂಡ್ ಲೈನ್ ಎಂದೊಡನೆ ಭಯ ಪಟ್ಟುಕೊಂಡ್ರಾ? ಯೋಚಿಸ ಬೇಡಿ.....

ಟೆಸ್ಟ್ ಡಿಸ್ಕ್(testdisk) – ಗ್ನು ಪಾರ್ಟೀಷನ್ ರಿಕವರಿ ಟೂಲ್

ಒಮ್ಮೆ ಕಂಪ್ಯೂಟರ್ನಲ್ಲಿ ಆಟ ಆಡ್ಲಿಕ್ಕೆ ಶುರು ಮಾಡಿದ್ರೆ ,ಅದನ್ನ ಕೆಲಸ ಮಾಡದ ಹಾಗೆ ಮಾಡಿ ಮತ್ತೆ ಅದನ್ನ ಮೊದಲಿನ ಸ್ಥಿತಿಗೆ ತರೋವರೆಗೂ ಸಿಸ್ಟಂ ಅಡ್ಮಿನಿಸ್ಟ್ರೇಷನ್ ಕಡೆ ತಲೆ ಕೆಡಿಸಿ ಕೊಳ್ಳೊ ನನ್ನಂತಹವರಿಗೆ ಮತ್ತು, ಏನೋ ಮಾಡ್ಲಿಕ್ಕೋಗಿ ತಮ್ಮ ಕಂಪ್ಯೂಟರಿನ ಹಾರ್ಡಿಸ್ಕ್ ನ ಡಾಟಾ ಕಳೆದು ಕೊಂಡು ಪರದಾಡುತ್ತಿರುವವರಿಗೆ ಈ ಲೇಖನ. ಮೊನ್ನೆ ಹಾರ್ಡಿಸ್ಕ್ ಪಾರ್ಟೀಷನ್ ಮಾಡಿ ಲಿನಕ್ಸ್ ಇನ್ಸ್ಟಾಲ್ ಮಾಡಿಕೊಳ್ಲಿಕ್ಕೆ ಹೊರಟ ಗೆಳೆಯನೊಬ್ಬ ಮಾಡಿದ ಸಣ್ಣ ತಪ್ಪೊಂದು ಅವನ ಎಲ್ಲ ಪಾರ್ಟೀಷನ್ ಗಳನ್ನ “ಕಾಣದಂತೆ ಮಾಯ ಮಾಡಿತ್ತು”....

sudo ಏನಿದು?

sudo ಅಥವಾ  “su do” ಅಂತ ಕರೆಯಲ್ವಡುವ ಈ ಕಮ್ಯಾಂಡ್ ಯಾಕೆ? ನಾನು ಹಿಂದೆ ಬರೆದ ಕೆಲವು ಲೇಖನಗಳಲ್ಲಿ ಇದನ್ನ ಉಪಯೋಗಿಸಿದ್ದೇನೆ. ಏನ್ ಮಾಡುತ್ತೆ ಇದು? su (ಸೂಪರ್ ಯೂಸರ್/ಮುಖ ಕಾರ್ಯ ನಿರ್ವಾಹಕ) ಯಾವ ಕೆಲಸಗಳನ್ನ ಲಿನಕ್ಸ್ ನಲ್ಲಿ ಮಾಡ ಬಹುದೋ ಅದನ್ನ ಎಲ್ಲರೂ ಮಾಡ್ಲಿಕ್ಕೆ ಸಾಧ್ಯವಿಲ್ಲ. su ಅನ್ನೋ ಕಮ್ಯಾಂಡ್, ಲಿನಕ್ಸ್ ನಲ್ಲಿರೋ ಯಾವುದೇ ಯೂಸರ್/ಬಳಕೆದಾರನನ್ನ ಸೂಪರ್ ಯೂಸರ್ ಆಗಿ ಕೆಲಸ ಮಾಡ್ಲಿಕ್ಕೆ ಬೇಕಿರುವ ವಿಶೇಷ ಅಧಿಕಾರಗಳನ್ನ ಕೊಡಿಸುತ್ತೆ. ಆದ್ರೆ ಇದಕ್ಕೆ ರೂಟ್ ಅಥವಾ ಸೂಪರ್ ಯೂಸರ್ ಅಧಿಕಾರ ಅಥವಾ...

Next Entries »

Powered by HostRobust | © 2006 - 2014 Linuxaayana