ನಾಸಾದ ಹೊಸ ಓಪನ್‌ಸೋರ್ಸ್ ತಾಣ

ನಾಸಾ ಇತ್ತೀಚೆಗೆ code.nasa.gov ಎಂಬ ಹೊಸ ತಾಣವನ್ನು ತಂತ್ರಜ್ಞಾನ ಅಭಿವೃದ್ದಿಗೆ ತೆರೆದಿದೆ. ಇದು ಮುಂದೆ ನಾಸಾದ ಓಪನ್‌ಸೋರ್ಸ್ ತಾಣವಾಗಲಿದೆ. ತಂತ್ರಜ್ಞಾನದ ಅಭಿವೃದ್ದಿಯನ್ನು ಜನಸಮುದಾಯದ ಭಾಗವಹಿಸುವಿಕೆಯ ಮೂಲಕ ಅತಿ ಕಡಿಮೆ ಖರ್ಚಿನಲ್ಲೂ ಹಾಗು ಯಾವುದೇ ಸಂಸ್ಥೆಯ ಹೊರಗಿನ ಹೆಚ್ಚು ಬುದ್ದಿಮತ್ತೆಯ ಅನುಭವಿ ತಜ್ಞರಿಂದ ಪಡೆದುಕೊಳ್ಳುವುದಕ್ಕೆ ‘ಓಪನ್‌ಸೋರ್ಸ್‘ ಯೋಜನೆಗಳಲ್ಲಿ ಆಯಾ ಯೋಜನೆಯ ಸಂಪೂರ್ಣ ಸೋರ್ಸ್ ಅಥವ ಮಾಹಿತಿಯನ್ನು ಸ್ವತಂತ್ರವಾಗಿ ಲಭ್ಯವಾಗುವಂತೆ ಮಾಡಲಾಗುತ್ತದೆ. ಈ ಸೋರ್ಸ್‌ಕೋಡ್ ಉಪಯೋಗಿಸಿಕೊಂಡು...

ಫೆಡೋರ ೧೬ – ಡೆನಿಸ್ ರಿಚಿಗೆ ಅರ್ಪಿತ

ರೆಡ್‌ಹ್ಯಾಟ್ ಆಧಾರಿತ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ ಸಮುದಾಯದ ಗ್ನು/ಲಿನಕ್ಸ್ ಆವೃತ್ತಿ ಫೆಡೋರ ತನ್ನ ೧೬ನೇ ಅವತರಣಿಕೆಯನ್ನು ಬಿಡುಗಡೆ ಮಾಡಿದೆ. ವರ್ನೆ (Verne) ಎಂಬ ನಾಮಾಂಕಿತಗೊಂಡಿರುವ ಈ ಅವತರಣಿಕೆಯನ್ನು ಯುನಿಕ ಮತ್ತು C ಕಂಪ್ಯೂಟರ್ ಭಾಷೆಯ ಜನಕರಲ್ಲೊಬ್ಬರಾದ ಡೆನಿಸ್ ರಿಚಿ ಗೆ ಸಮರ್ಪಿಸಲಾಗಿದೆ. ಡೆಸ್ಕ್ಟಾಪ್ ಮತ್ತು ಲ್ಯಾಪ್ಟಾಪ್‌ಗಳಲ್ಲಿ ಬಳಸುವ ಗ್ನು/ಲಿನಕ್ಸ್ ಆವೃತ್ತಿಗಳಲ್ಲಿ ಉಬುಂಟು ಹಾಗೂ ಲಿನಕ್ಸ್ ಮಿಂಟ್‌ನ ನಂತರ ಅತ್ಯಂತ ಜನಪ್ರಿಯ ಗ್ನು/ಲಿನಕ್ಸ್ ಆವೃತ್ತಿ ಫೆಡೋರ. Fedora 16 ನಲ್ಲಿ...

ಡಿಜಿಟಲ್ ಲಿನಕ್ಸ್ ಜರ್ನಲ್

ಲಿನಕ್ಸ್ ಜರ್ನಲ್ (Linux Journal) ಲಿನಕ್ಸ್ ಆಸಕ್ತರಿಗೆ ಅತ್ಯಂತ ಪ್ರಿಯ ಮ್ಯಾಗಜೀನ್‌ಗಳಲ್ಲಿ ಒಂದು. ಇದುವರೆಗೆ ಪ್ರಿಂಟ್ ಆವೃತ್ತಿಯಲ್ಲಿ ಹೊರಬರುತ್ತಿದ್ದ ಈ ಮ್ಯಾಗಜೀನ್ ಇನ್ಮುಂದೆ ಓದುಗರಿಗೆ ಡಿಜಿಟಲ್ ಆವೃತ್ತಿಯಲ್ಲಿ ಮಾತ್ರ ಲಭ್ಯವಾಗಿದೆ. ತನ್ನ ಚಂದಾದಾರರಿಗೆ ಲಿನಕ್ಸ್ ಜರ್ನಲ್ ಕಳಿಸಿದ ಸಂದೇಶ ಇಂತಿದೆ: We understand that many readers still prefer hard-copy magazines. But, we also have seen many long-standing, excellent publications either come to an end or grow very...

ಅರಿವಿನ ಅಲೆಗಳು ಇ-ಪುಸ್ತಕ

ಈ ಮೊದಲು ‘ಅರಿವಿನ ಅಲೆಗಳು‘ ಸ್ವಾತಂತ್ರೋತ್ಸವದ ವಿಶಿಷ್ಟ ಆಚರಣೆಯ ಬಗ್ಗೆ ಲಿನಕ್ಸಾಯಣದಲ್ಲಿ ಬರೆದಿದ್ದೆವು. ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶದ ಬಗ್ಗೆ, ಅದರೊಡನೆ ಬಳಕೆದಾರನಿಗೆ ಸಿಗುವ ಸ್ವಾತಂತ್ರ್ಯದ ಬಗ್ಗೆ ಮಾಹಿತಿಯನ್ನು ಇತರ ಜನಸಾಮಾನ್ಯರೊಡನೆ ಹಂಚಿಕೊಳ್ಳುವ ಉದ್ದೇಶದೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮ ಆಗಸ್ಟ್ ೧ ರಿಂದ ಆಗಸ್ಟ್ ೧೪ ವರೆಗೆ ಲೇಖನಗಳು ಜ್ಞಾನದ ಅಲೆಗಳಾಗಿ ಹರಿದು ಬಂದವು. ಆಗಸ್ಟ್ ೧೫ರಂದು ಇವೆಲ್ಲವುಗಳನ್ನು ಇಡಿಯಾಗಿ ಇ-ಪುಸ್ತಕ ರೂಪದಲ್ಲಿ ಕನ್ನಡಿಗರ ಮುಂದೆ ಇಡಲಾಗಿದೆ. ಕನ್ನಡದಲ್ಲಿ...

ಕಿಂದರಜೋಗಿಯೂ.. ನೋಡ್‌ಬಾಕ್ಸೂ

ಇತ್ತೀಚೆಗೆ ನಾವು ಕಿಂದರಜೋಗಿ‌.‌ಕಾಮ್ ನಲ್ಲಿ ಮಕ್ಕಳಿಗೆಂದೇ ಒಂದು ಚಿತ್ರಕಲಾ ಸ್ಪರ್ಧೆಯ ಬಗ್ಗೆ ಪ್ರಚಾರ ಶುರು ಮಾಡಿದೆವು. ಸ್ಪರ್ಧೆ ಅಂಚೆಕಚೇರಿಯ ಸುತ್ತ ಇದ್ದುದ್ದರಿಂದ ಆಹ್ವಾನ ಪತ್ರಿಕೆಯು ಕೂಡ ಅಂಚೆಕಾರ್ಡ್ ನಲ್ಲಿ ಇರಬೇಕೆಂದು ನಮ್ಮ ಒಕ್ಕೊರಲಿನ ತೀರ್ಮಾನವಾಗಿತ್ತು. ಸರಿ, ಒಂದು ಪೋಸ್ಟ್ ಕಾರ್ಡ್ ಸ್ಕ್ಯಾನ್ ಮಾಡಿ ತಂದದ್ದೂ ಆಯ್ತು. ಕೆಲಸದ ಕಾರಣ ಆಹ್ವಾನ ಪತ್ರಿಕೆಯ ನಿರ್ವಹಣಾ/ರಚನೆಯ ಜವಾಬ್ದಾರಿ ನಮ್ಮ ಹಳ್ಳಿಮನೆ ಅರವಿಂದನ ಕೈ‌ಸೇರಿತು. ಅರೆರೆ ಇದೇನು ಬರೆ ಪೋಸ್ಟ್ ಕಾರ್ಡ್ ನ ಸ್ಕ್ಯಾನ್ ಚಿತ್ರ. ಮೂಲ ಪ್ತ್ರತಿ...

« Previous Entries Next Entries »

Powered by HostRobust | © 2006 - 2014 Linuxaayana