ಕಡಿಮೆ ಬೆಲೆಗೆ ಸಿಗುವಂತಹ ಕಂಪ್ಯೂಟರ್ ಯಾವುದು?

ಇತ್ತೀಚೆಗೆ ನೆಟ್‌ಬುಕ್ ಅಂದರೆ ಲ್ಯಾಪ್‌ಟಾಪ್ ಗಿಂತಲೂ ಸ್ವಲ್ಪ ಚಿಕ್ಕದಿರುವ ಕಂಪ್ಯೂಟರ್ ಗಳು (೧೦.೧ ಇಂಚು ಸ್ಕ್ರೀನ್ ಇರುವಂತದ್ದು )  ಸಿಗ್ಗುತ್ತವೆ. ಕಡಿಮೆ ಬೆಲೆಗೆ ಸಿಗಲು ಇದರಲ್ಲಿ ಬಳಸಿರುವ ಆಟಮ್ (ATOM) ಪ್ರಾಸೆಸರ್‌ಗಳು ಕಾರಣ ಜೊತೆಗೆ ಇವು ೮ ಘಂಟೆ ಬ್ಯಾಟರಿಯಲ್ಲಿ ಕೆಲಸ ಮಾಡುವ ಕಾರ್ಯಕ್ಷಮತೆಯನ್ನು...

ಪೇಜ್ ಮೇಕರ್, ಕೋರಲ್ ಡ್ರಾ ಇತ್ಯಾದಿ ವಿಂಡೋಸ್ ತಂತ್ರಾಂಶಗಳಿಗೆ ಗ್ನು/ ಲಿನಕ್ಸ್ ಪರ್ಯಾಯ ಕಂಡುಕೊಳ್ಳುವುದು ಹೇಗೆ?

ಉಬುಂಟು ಸಾಫ್ಟ್ವೇರ್ ಸೆಂಟರಿನಲ್ಲಿ ನಿಮಗೆ ಬೇಕಾದ ಕೆಲಸಗಳಿಗೆ ತಂತ್ರಾಂಶಗಳನ್ನು ಆಯ್ಕೆ ಮಾಡುವ ಅವಕಾಶವಿದೆ. https://www.osalt.com ನಲ್ಲಿ ಕೂಡ ವಿಂಡೋಸ್ ಪರ್ಯಾಯ ತಂತ್ರಾಂಶಗಳ ಬಗ್ಗೆ...

ಗ್ನು/ಲಿನಕ್ಸ್ ಆಪರೇಟಿಂಗ್ ಸಿಸ್ಟಂ‌ಗಳ ಜೊತೆಗೆ Photoshop CS4, Pagemaker 7.0, Coral Draw 14 ಇನ್ಸ್ಟಾಲ್ ಮಾಡಿಕೊಳ್ಳಬಹುದೇ??

ಸಾಧ್ಯ, ಆದರೆ ಇದಕ್ಕೆ ಮೊದಲು WINE ಎಂಬ ಎಮ್ಯುಲೇಟರ್ ಇನ್ಸ್ಟಾಲ್ ಮಾಡಿಕೊಂಡು, ಲಿನಕ್ಸ್ ನಲ್ಲಿ ವಿಂಡೋಸ್ ಸಂಬಂಧಿತ ತಂತ್ರಾಂಶಗಳಿಗೆ ಬೇಕಿರುವ ಬೆಂಬಲ ಇರುವಂತೆ ಮಾಡಿಕೊಳ್ಳಬೇಕು. ಇದು ಸ್ವಲ್ಪ ಕಿರಿಕಿರಿಯ ವಿಷಯವಾಗಿದ್ದು ಗ್ನು/ಲಿನಕ್ಸ್ ನಲ್ಲಿ ಅದರದ್ದೇ ಆದ ತಂತ್ರಾಂಶಗಳನ್ನು ಬಳಸಲು ನಾವು ಸೂಚಿಸುತ್ತೇವೆ. ಉದಾಹರಣೆಗೆ ಫೋಟೋಶಾಪ್ ಬದಲು GIMP ಬಳಸಬಹುದು. ಫೋಟೋಶಾಪ್ ಬಳಸಿದವರಿಗೆ ಇದನ್ನು ಬಳಸುವುದು...

ವಿಂಡೋಸ್ ಜೊತೆಗೆ ಲಿನಕ್ಸ್ ಕೂಡ ಇನ್ಸ್ಟಾಲ್ ಮಾಡಿ ಬಳಸಬಹುದೇ?

ಖಂಡಿತ, ವಿಂಡೋಸ್ ಜೊತೆಗೆ, ನಿಮ್ಮ ಕಂಪ್ಯೂಟರಿನಲ್ಲಿರುವ ಮತ್ತೊಂದು ಖಾಲಿ ಪಾರ್ಟೀಷನ್‌ನಲ್ಲಿ ಉಬುಂಟು ಇನ್ಸ್ಟಾಲ್ ಮಾಡಿಕೊಂಡು ಬಳಸಬಹುದು. ವಿಂಡೋಸ್‌ನಲ್ಲೇ ಉಬುಂಟು ಬಳಸುವುದೂ ಸಾಧ್ಯ WUBI ಬಳಸಿ, ನಿಮ್ಮ ವಿಂಡೋಸ್ ಇನ್ಸ್ಟಾಲೇಷನ್ ಜೊತೆಗೆ ಉಬುಂಟು ಇನ್ಸ್ಟಾಲ್...

ಉಬುಂಟು ಇನ್ಸ್ಟಾಲ್ ಮಾಡಿಕೊಳ್ಳುವುದು ಹೇಗೆ?

https://www.ubuntu.com/download/ubuntu/download – ಈ ಕೊಂಡಿಯ ೪ನೇ ಭಾಗದಲ್ಲಿ ನಿಮಗೆ ಉಬುಂಟು ಇನ್ಸ್ಟಾಲ್ ಬಗ್ಗೆ ಮಾರ್ಗಸೂಚಿ ಇದೆ.

« Previous Entries Next Entries »

Powered by HostRobust | © 2006 - 2014 Linuxaayana