ಗ್ನು/ಲಿನಕ್ಸ್ ಆಪರೇಟಿಂಗ್ ಸಿಸ್ಟಂಗಳ ಜೊತೆಗೆ Photoshop CS4, Pagemaker 7.0, Coral Draw 14 ಇನ್ಸ್ಟಾಲ್ ಮಾಡಿಕೊಳ್ಳಬಹುದೇ??
ಸಾಧ್ಯ, ಆದರೆ ಇದಕ್ಕೆ ಮೊದಲು WINE ಎಂಬ ಎಮ್ಯುಲೇಟರ್ ಇನ್ಸ್ಟಾಲ್ ಮಾಡಿಕೊಂಡು, ಲಿನಕ್ಸ್ ನಲ್ಲಿ ವಿಂಡೋಸ್ ಸಂಬಂಧಿತ ತಂತ್ರಾಂಶಗಳಿಗೆ ಬೇಕಿರುವ ಬೆಂಬಲ ಇರುವಂತೆ ಮಾಡಿಕೊಳ್ಳಬೇಕು. ಇದು ಸ್ವಲ್ಪ ಕಿರಿಕಿರಿಯ ವಿಷಯವಾಗಿದ್ದು ಗ್ನು/ಲಿನಕ್ಸ್ ನಲ್ಲಿ ಅದರದ್ದೇ ಆದ ತಂತ್ರಾಂಶಗಳನ್ನು ಬಳಸಲು ನಾವು...
ವಿಂಡೋಸ್ ಜೊತೆಗೆ ಲಿನಕ್ಸ್ ಕೂಡ ಇನ್ಸ್ಟಾಲ್ ಮಾಡಿ ಬಳಸಬಹುದೇ?
ಖಂಡಿತ, ವಿಂಡೋಸ್ ಜೊತೆಗೆ, ನಿಮ್ಮ ಕಂಪ್ಯೂಟರಿನಲ್ಲಿರುವ ಮತ್ತೊಂದು ಖಾಲಿ ಪಾರ್ಟೀಷನ್‌ನಲ್ಲಿ ಉಬುಂಟು ಇನ್ಸ್ಟಾಲ್ ಮಾಡಿಕೊಂಡು ಬಳಸಬಹುದು. ವಿಂಡೋಸ್‌ನಲ್ಲೇ ಉಬುಂಟು ಬಳಸುವುದೂ ಸಾಧ್ಯ WUBI ಬಳಸಿ, ನಿಮ್ಮ ವಿಂಡೋಸ್ ಇನ್ಸ್ಟಾಲೇಷನ್ ಜೊತೆಗೆ ಉಬುಂಟು ಇನ್ಸ್ಟಾಲ್...
ಉಬುಂಟು ಇನ್ಸ್ಟಾಲ್ ಮಾಡಿಕೊಳ್ಳುವುದು ಹೇಗೆ?
https://www.ubuntu.com/download/ubuntu/download – ಈ ಕೊಂಡಿಯ ೪ನೇ ಭಾಗದಲ್ಲಿ ನಿಮಗೆ ಉಬುಂಟು ಇನ್ಸ್ಟಾಲ್ ಬಗ್ಗೆ ಮಾರ್ಗಸೂಚಿ ಇದೆ.
ಉಬುಂಟು ಎಲ್ಲಿ ಸಿಗುತ್ತದೆ?
https://ubuntu.com ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು ಕಂಪ್ಯೂಟರ್ ಮ್ಯಾಗಝೀನಗಳ CD/DVD ಗಳಲ್ಲಿ ಕೂಡ ಆಗಾಗ ಗ್ನು/ಲಿನಕ್ಸ್ ವಿತರಣೆಗಳನ್ನು ನೀಡುತ್ತಿರುತ್ತಾರೆ. Linux For You ಗ್ನು/ಲಿನಕ್ಸ್ ಬಗ್ಗೆ ಅತಿ ಹೆಚ್ಚು ಮಾಹಿತಿ ನೀಡುವ ಮ್ಯಾಗಜೀನ್‌ಗಳಲ್ಲಿ ಒಂದು....
Zorin-OS – ವಿಂಡೋಸ್ ಬಳಕೆದಾರರಿಗೆ ಲಿನಕ್ಸ್‌ನಲ್ಲೊಂದು ಪ್ರತಿರೂಪ
ಕಂಪ್ಯೂಟರ್ ಆಪರೇಟಿಂಗ್ ಸಿಸ್ಟಂ ಕೊಳ್ಳಲೂ ಹಣಕೊಡಬೇಕೆ ಎನ್ನುವವರಿಗೆ ಮತ್ತು ವಿಂಡೋಸ್ ಆಪರೇಟಿಂಗ್ ಸಿಸ್ಟಂ ಬಳಸುವಾಗ ಆಗಾಗ ತಲೆ ಕೆಡಿಸುವ ವೈರಸ್ , ಬ್ಲೂ ಸ್ಕ್ರೀನ್ ಇತ್ಯಾದಿಗಳಿಂದ ದೂರ ಉಳಿಯಲು ಆಸಕ್ತರಿರುವವರಿಗೆ ಗ್ನು/ಲಿನಕ್ಸ್ ತಂತ್ರಾಂಶಗಳು ಬಹಳ ಅಚ್ಚುಮೆಚ್ಚಾಗುತ್ತವೆ. ಲಿನಕ್ಸ್ ಎಂಬ ಪದ...
ಮೊಬೈಲ್‌ನಲ್ಲಿ ಕನ್ನಡ ವಿಕಿಪೀಡಿಯ
ವಿಕಿಪೀಡಿಯವನ್ನು ಇಂಟರ್ನೆಟ್ ಬ್ರೌಸರ್‌ನಲ್ಲಿ ನೋಡಿದವರಿಗೆ ತಮ್ಮ ಮೊಬೈಲ್ ನಲ್ಲೂ ಅದನ್ನು ಕಾಣಬೇಕು ಎಂದು ಬಹಳ ಬಾರಿ ಅನಿಸಿರಬಹುದು. ಸ್ವಲ್ಪ ದಿನಗಳ ಹಿಂದಿನವರೆಗೆ ಕನ್ನಡ ಅಕ್ಷರಗಳು ಮೂಡುವಂತಹ ಮೊಬೈಲ್ ಕೊರತೆಯಿಂದಾಗಿ ಇದು ಸಾಧ್ಯವಾಗದಿರಲಿಕ್ಕೂ ಸಾಕು. ಸ್ಯಾಮ್‌ಸಂಗ್‌ನ ಏಸ್ ಮತ್ತಿತರ ಆಡ್ರಾಂಯ್ಡ್...
ಕೊನೆಗೂ ಸಾಮಾನ್ಯನೆಡೆಗೆ – ಟೆಕ್ ಕನ್ನಡದ ಮೂಲಕ
ಲಿನಕ್ಸಾಯಣವನ್ನು ಬರೆಯುವ ಕನಸು ಕಟ್ಟಿದ್ದು ನನ್ನಲ್ಲಿನ ಜ್ಞಾನದ ಅರಿವನ್ನು ಸಾಮಾನ್ಯರಿಗೆ ಹರಿದು ಬಿಡಲು. ಅನೇಕ ಕಾರಣಗಳಿಂದ ಅದು ಲಿನಕ್ಸಾಯಣ.ನೆಟ್ ನಲ್ಲೇ ಬೀಡುಬಿಟ್ಟಿತ್ತು. ಇಂಟರ್ನೆಟ್ ತಲುಪಲಾರದ ಸಾಮಾನ್ಯರೂ ಇರುತ್ತಾರಲ್ಲವೇ? ಅವರನ್ನು ತಲುಪುವುದು ಹೇಗೆ? ಈ ಪ್ರಶ್ನೆಗಳಿಗೆ ಅನೇಕ ಉತ್ತರಗಳಿದ್ದರೂ,...
ಲಿನಕ್ಸ್ ಬಳಸುವ ಸಂಸ್ಥೆಗಳಿಗೆ ೧೦ ವರ್ಷದ ನಿಶ್ಚಿಂತೆ
ಇತ್ತೀಚೆಗೆ ರೆಡ್‌ಹ್ಯಾಟ್ ಲಿನಕ್ಸ್ ತನ್ನ ಎಂಟರ್‌ಪ್ರೈಸ್ ಲಿನಕ್ಸ್ ಆಪರೇಟಿಂಗ್ ಸಿಸ್ಟಂಗಳ ಸಪೋರ್ಟ್ ಅವಧಿಯನ್ನು ೧೦ ವರ್ಷಗಳಿಗೆ ಹೆಚ್ಚಿಸಿದೆ. ಸಾಮಾನ್ಯವಾಗಿ ೭ ವರ್ಷದ ವರೆಗೆ ಲಿನಕ್ಸ್ ಅನ್ನು ಅವಲಂಭಿಸಿ ಅದರ ಸೇವೆಗಳನ್ನು ರೆಡ್‌ಹ್ಯಾಟ್ ನಿಂದ ಪಡೆಯುತ್ತಿದ್ದ ಕಂಪೆನಿಗಳು ಅಪ್ದೇಟ್/ಸಹಾಯವನ್ನು ಇದುವರೆಗೆ...
ಡ್ರಾಗನ್‌ಫ್ಲೈ ಬಿ.ಎಸ್.ಡಿ ೩ ಬಿಡುಗಡೆಗೊಂಡಿದೆ
ಇದೇನಪ್ಪ ಏರೋಪ್ಲೇನ್ ಚಿಟ್ಟೆ ಅನ್ಕೊಂಡ್ರಾ? ಇದು ಬಿ.ಎಸ್.ಡಿ ಲಿನಕ್ಸ್ ಒಂದರ ಲೋಗೋ. ಹೆಸರು ಡ್ರಾಗನ್‌ಪ್ಲ್ಹೈ. ಇದರ ೩ ನೇ ಆವೃತ್ತಿ ಇತ್ತೀಚೆಗೆ ಬಿಡುಗಡೆಗೊಂಡಿದೆ. ವರ್ಚುಅಲೈಸೇಷನ್ (Virtualization) ಮತ್ತು ಕಲ್ಸ್ಟರಿಂಗ್ (Clustering) ಕಂಪ್ಯೂಟರ್ ಜಗತ್ತಿನಲ್ಲಿ ಇಂದು ಬಜ್‌ವರ್ಡ್ – ಕ್ಲೌಡ್...
ಲಿನಕ್ಸ್ – ಉದ್ಯೋಗಗಳಿಗಿಲ್ಲ ಕೊರತೆ
ಲಿನಕ್ಸ್ ಫೌಂಡೇಷನ್ ಇತ್ತೀಚಿಗೆ ನೆಡೆಸಿದ ಸಮೀಕ್ಷೆಯ ಪ್ರಕಾರ ಲಿನಕ್ಸ್ ಸಂಬಂಧಿತ ಉದ್ಯೋಗಾವಕಾಶಗಳಿಗೆ ಕೊರತೆ ಇಲ್ಲ. ಯಾವುದೇ ಆರ್ಥಿಕತೆಯ ಸಂದರ್ಭದಲ್ಲಿ ಮಾಹಿತಿ ತಂತ್ರಜ್ಞಾನಕ್ಕೆ ಬೇಕಿರುವ ಕೆಲಸಗಾರರ ಸಂಖ್ಯೆಯಲ್ಲಿ ಅಷ್ಟೇನೂ ಬದಲಾವಣೆಗಳಾಗುವುದಿಲ್ಲ. ಮುಖ್ಯವಾಗಿ ಸರ್ವರ್ ಅಡ್ಮಿನಿಸ್ಟ್ರೇಷನ್,...
ಫೈರ್‌ಫಾಕ್ಸ್ ೧೦ – ಡೆವೆಲಪರ್‌ಗಳಿಗೆ ಬಲು ಪ್ರಿಯ
HTML5 ನ ಹೊಸ ಅವತಾರಗಳನ್ನೆಲ್ಲಾ ತನ್ನಲ್ಲಿ ಹುದುಗಿಸಿಕೊಂಡು, ಇಂಟರ್ನೆಟ್ ತಂತ್ರಜ್ಞಾನಗಳ ಅಭಿವೃದ್ದಿಯಲ್ಲಿ ತೊಡಗಿರುವವರಿಗೆ ಫೈರ್‌ಫಾಕ್ಸ್ ಬ್ರೌಸರ್‌ನ ಹೊಸ ಆವೃತ್ತಿ – ೧೦ ಬಹಳ ಪ್ರಿಯವಾಗುತ್ತಿದೆ. ತನ್ನ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಅದರಲ್ಲಿ ಇನ್ನೇನಿದೆ ನೋಡಲು ಈ ಕೆಳಗಿನ...
Ruby ಕಲಿಯಲಿಕ್ಕೆ RubyMonk
Ruby ಒಂದು ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ – ಇಂಟರ್ನೆಟ್ ನಲ್ಲಿನ ತರಾವರಿ ವೆಬ್‌ಸೈಟ್‌ಗಳು ಇಂದು Ruby on Rails ಬೆಂಬಲದಿಂದ ಅಭಿವೃದ್ದಿ ಹೊಂದುತ್ತಿವೆ. ಈ ಭಾಷೆಯನ್ನು ನಿಮಗೆ ಕಲಿಸಲು ರೂಬಿ ಮಾಂಕ್ ಸುಲಭ ಆನ್ಲೈನ್ ವೆಬ್‌ಸೈಟ್‌ನಲ್ಲಿ ಲಭ್ಯ. https://rubymonk.com/ ಆನ್‌ಲೈನ್‌ನಲ್ಲಿ...








