ನಾಗಲೋಟದಲ್ಲಿ ಓಡುತ್ತಿರುವ ಇಂದಿನ ತಂತ್ರಜ್ಞಾನ ಯುಗದಲ್ಲಿ ಲಿನಕ್ಸಿನ ಪಾಲಿನ ಕುರಿತು ನಿಮಗೆಲ್ಲಾ ಸಾಕಷ್ಟು ಅರಿವಿರಬಹುದು. ಇಂದಿನ ಕಾರ್ಪೋರೇಟ್ ಜಗತ್ತಿನಲ್ಲಿ ಅದರ ಬಳಕೆ ಹೆಚ್ಚಾದ ಕಾರಣ ಜಾಲ ಆಧರಿತವಾಗಿ ವಿಷಯವನ್ನು ಪ್ರಕಟಿಸುವಿಕೆ ಕಾರ್ಯವು ಬಹುಮಟ್ಟಿಗೆ ಲಿನಕ್ಸ್, PHP, MySQl ಮತ್ತು Apache ಮೇಲೆಯೆ ಅವಲಂಬಿತವಾಗಿದೆ. ಈ ಕಾರಣದಿಂದಾಗಿ, ಪ್ಲಗ್ ಇನ್ ಗಳು ಮತ್ತು ಆಡ್-ಆನ್ ಗಳನ್ನು ಅಭಿವೃದ್ಧಿಪಡಿಸುವ, ಅನೇಕ ಪ್ರೊಗ್ರಾಮಿಂಗ್ ಭಾಷೆಯಲ್ಲಿ ಕೋಡ್ ಬರೆಯುವ, ಡೇಟಾಬೇಸ್ ಗಳನ್ನು ಮತ್ತು ಅನ್ವಯಗಳನ್ನು ವಿನ್ಯಸಿಸುವ ಮತ್ತು ಗಣಕಸೇವೆಗಳನ್ನು ನಿರ್ವಹಿಸುವ ತಂತ್ರಜ್ಞರ ಬೇಡಿಕೆಯು ದಿನೇ ದಿನೇ ಹೆಚ್ಚುತ್ತಿದೆ. ಇಷ್ಟೆ ಅಲ್ಲದೆ, ಡೆಸ್ಕ್ ಟಾಪ್ ಕ್ಷೇತ್ರದಲ್ಲಿ ಲಿನಕ್ಸ್ ಬಳಕೆಯು ಹೆಚ್ಚುತ್ತಿರುವುದರಿಂದಲೂ ಸಹ ಹಲವು ತಂತ್ರಾಂಶ ತಯಾರಕರು ಮತ್ತು ಸಂಸ್ಥೆಗಳು ತಮ್ಮ ಅನ್ವಯಗಳು ಮತ್ತು ಆಟಗಳ ಲಿನಕ್ಸ್ ಆವೃತ್ತಿಗಳನ್ನು ಹೊರತರುತ್ತಿದ್ದಾರೆ. ಈ ಬಗೆಯ ಅನ್ವಯಗಳು ಹೆಚ್ಚಾಗಿ GTK+ ಮತ್ತು QT ಯಂತಹ ಮೇಲುಸ್ತರದ ಕೋಡ್ ಮಾಡುವ ಟೂಲ್‌ಕಿಟ್‌ಗಳನ್ನು ಅಥವ ಕೆಳಸ್ತರದ ಪ್ರೊಗ್ರಾಮಿಂಗ್ ಭಾಷೆಗಳಾದಂತಹ C++, C ಮತ್ತು ಅಸೆಂಬ್ಲರ್ ಬಳಸಿಕೊಳ್ಳಲಾಗಿರುತ್ತದೆ.
ಗುಣಮಟ್ಟ ಖಾತರಿ (ಕ್ವಾಲಿಟಿ ಅಶ್ಯುರೆನ್ಸ್)
ಯಾವುದೆ ಉತ್ಪನ್ನದ ಅಭಿವೃದ್ಧಿ ಮತ್ತು ತಯಾರಿಕೆಯಲ್ಲಿ ಗುಣಮಟ್ಟ ಪರಿಶೀಲನೆ ಮತ್ತು ಖಾತರಿ ಒಂದು ಅತ್ಯಂತ ಪ್ರಮುಖ ಹಂತವಾಗಿರುತ್ತದೆ. ತಂತ್ರಾಂಶ ಪರೀಕ್ಷಕರಿಗೆ (ಸಾಫ್ಟ್‌ವೇರ್ ಟೆಸ್ಟರ್) ಎಲ್ಲಾ ತಂತ್ರಾಂಶ ತಯಾರಕ...
ನಿಮ್ಮ ಪ್ರತಿಕ್ರಿಯೆಗಳು