ಬೆಂಬಲ (ಸಪೋರ್ಟ್) ಉದ್ಯೋಗ ಅವಕಾಶ

by | Mar 14, 2014 | ಉದ್ಯೋಗಾವಕಾಶಗಳು | 2 comments


ಹೆಚ್ಚಿನ ಸಂಖ್ಯೆಯ ಕಂಪನಿಗಳಲ್ಲಿ ತಮ್ಮ ಉದ್ಯೋಗಿಗಳಿಗೆ ಲಿನಕ್ಸ್ ಕುರಿತು ಸಹಾಯ ಮಾಡುವವರ ಅಥವ ಲಿನಕ್ಸಿನಲ್ಲಿ ಪರಿಣಿತಿ ಹೊಂದಿದವರ ಬೇಡಿಕೆ ಇದೆ. ಉದ್ದಿಮೆ ಮತ್ತು ಕಾರ್ಪೋರೇಟ್ ವಲಯಗಳಲ್ಲಿ ಲಿನಕ್ಸ್ ಬಳಕೆ ಹೆಚ್ಚುತ್ತಿರುವುದರಿಂದ ದೊಡ್ಡ ದೊಡ್ಡ ಸಂಸ್ಥೆಗಳು ಲೈಸೆನ್ಸಿಂಗ್‌ ಖರ್ಚುಗಳನ್ನು ಕಡಿಮೆ ಮಾಡಲು ಡೆಸ್ಕ್‌ಟಾಪ್‌ಗಳಲ್ಲಿ ಲಿನಕ್ಸ್ ಅನ್ನು ಅಳವಡಿಸಲು ಮುಂದಾಗುತ್ತಿದ್ದಾರೆ. ಈ ವಲಸೆಯಿಂದ ಉತ್ಪಾದಕತೆಯಲ್ಲಿ ಉಂಟಾಗುವ ಗೊಂದಲವನ್ನು ಪರಿಹರಿಸಲು ಈ ಬಗೆಯ ಬೆಂಬಲ ತಂತ್ರಜ್ಞನ ಅಗತ್ಯವಿರುತ್ತದೆ. ಇದಕ್ಕೆ ಸೇರಬಯಸುವ ಅಭ್ಯರ್ಥಿಯು ಆ ಸಂಸ್ಥೆಯ ಉದ್ಯೋಗಿಗಳಿಗೆ ಲಿನಕ್ಸ್ ಬಳಸುವ ಕುರಿತು ನೆರವು ನೀಡುವುದು ಪ್ರಮುಖ ಕಾರ್ಯವಾಗಿರುತ್ತದೆ. ಇದರ ಜೊತೆಗೆ, ಉದ್ಯೋಗಿಗಳ ಕೆಲಸ ಮಾಡುವ ರೀತಿ ಮತ್ತು ಬಳಸುವ ಕಾರ್ಯಾಚರಣೆ ವ್ಯವಸ್ಥೆ (ಓಎಸ್) ಮತ್ತು ಅನ್ವಯಗಳಲ್ಲಿಮಾಡಲಾದ ಬದಲಾವಣೆಗಳಿಂದಾಗಿ ಒಟ್ಟಾರೆ ಕಾರ್ಯಕ್ಷಮತೆಗೆ ಯಾವುದೆ ತೊಂದರೆ ಉಂಟಾಗದಂತೆ ನೋಡಿಕೊಳ್ಳುವುದೂ ಸಹ ಮುಖ್ಯವಾಗಿರುತ್ತದೆ.

ಬೆಂಬಲ ನೀಡುವ ತಂತ್ರಜ್ಞರ ಅಗತ್ಯವಿರುವ ಇನ್ನೊಂದು ಪ್ರಮುಖ ಸ್ಥಳವೆಂದರೆ ಎಂಟರ್ಪ್ರೈಸ್ ಲಿನಕ್ಸ್ ಅಭಿವೃದ್ದಿ ಪಡಿಸುವ ಸಂಸ್ಥೆಗಳು. Red Hat, Canonicle, Suse, ಮುಂತಾದ ಕಂಪನಿಗಳು ಎಂಟರ್ಪ್ರೈಸ್ ಮಟ್ಟದ ಲಿನಕ್ಸ್ ಅನ್ನು ಸಿದ್ಧಗೊಳಿಸುತ್ತವೆ. ಇದನ್ನು ತಮ್ಮ ಅಗತ್ಯಕ್ಕೆ ತಕ್ಕಂತೆ ಬಳಸಲು ಬಯಸುವವರು, ಬಳಸುವಾಗ ಉಂಟಾಗಬಹುದಾದ ಯಾವುದೆ ಬಗೆಯ ತೊಂದರೆಗಳನ್ನು ಪರಿಹರಿಸಿಕೊಳ್ಳಲು ಇದೇ ಎಂಟರ್ಪ್ರೈಸ್ ತಯಾರಕ ಕಂಪನಿಗಳ ಬೆಂಬಲ ಸೇವೆಗೆ ಚಂದಾದಾರರಾಗಿರುತ್ತಾರೆ. ಇಂತಹ ಒಂದು ಸೇವೆಯನ್ನು ಪೂರೈಸಲು ನುರಿತ ಲಿನಕ್ಸ್ ಕಂಪನಿಗಳಿಗೆ ತಂತ್ರಜ್ಞರ ದೊಡ್ಡ ತಂಡದ ಅಗತ್ಯವಿರುತ್ತದೆ. ಈ ತಂಡದಲ್ಲಿ ಒಬ್ಬರಾಗಿ ಕೆಲಸ ಮಾಡಲು ಹೆಚ್ಚು ಕಡಿಮೆ ಸಿಸ್ಟಮ್ ಅಡ್ಮಿನ್‌ಸ್ಟ್ರೇಟರಿನ ಅರ್ಹತೆಗಳು ಇರಬೇಕಾಗುತ್ತದೆ ಮತ್ತು ಇಲ್ಲಿ ಕೆಲಸ ಮಾಡಿದ ಅನುಭವ ಹೊಂದಿದವರಿಗೆ ಸಿಸ್ಟಮ್ ಅಡ್ಮಿನ್ ಕ್ಷೇತ್ರದಲ್ಲಿ ಬಹುವಾಗಿ ಬೇಡಿಕೆ ಇದೆ.

ಕನ್ನಡದಲ್ಲಿ ತಂತ್ರಾಂಶಗಳು – ಲೋಕಲೈಸೇಷನ್ ಸುತ್ತ ಕೆಲಸ ಮಾಡುತ್ತಿರುವ ಶಂಕರ್ ಪ್ರಸಾದ್ ರೆಡ್‌ಹ್ಯಾಟ್ ನಲ್ಲಿ ಕೆಲಸ ಮಾಡುತ್ತಿದ್ದು. ಸಂಚಯದ ಸಕ್ರಿಯ ಸದಸ್ಯರೂ ಹೌದು. ಫೈರ್‌ಫಾಕ್ಸ್ , ಜಿನೋಮ್, ಓಪನ್ ಅಫೀಸ್ ಇತ್ಯಾದಿ ತಂತ್ರಾಂಶಗಳ ಕನ್ನಡೀಕರಣ ಇವರ ಮುಖ್ಯ ಕೊಡುಗೆ.
ಜಾಹೀರಾತು Divi WordPress Theme

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಹಂಚಿಕೆಯ ಬಗ್ಗೆ

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಇವನ್ನೂ ಓದಿ

Related

ಗುಣಮಟ್ಟ ಖಾತರಿ (ಕ್ವಾಲಿಟಿ ಅಶ್ಯುರೆನ್ಸ್)

ಯಾವುದೆ ಉತ್ಪನ್ನದ ಅಭಿವೃದ್ಧಿ ಮತ್ತು ತಯಾರಿಕೆಯಲ್ಲಿ ಗುಣಮಟ್ಟ ಪರಿಶೀಲನೆ ಮತ್ತು ಖಾತರಿ ಒಂದು ಅತ್ಯಂತ ಪ್ರಮುಖ ಹಂತವಾಗಿರುತ್ತದೆ. ತಂತ್ರಾಂಶ ಪರೀಕ್ಷಕರಿಗೆ (ಸಾಫ್ಟ್‌ವೇರ್ ಟೆಸ್ಟರ್) ಎಲ್ಲಾ ತಂತ್ರಾಂಶ ತಯಾರಕ...

read more

ಕ್ಲೌಡ್‌ ಕಂಪ್ಯೂಟಿಂಗ್

ಅಗತ್ಯಕ್ಕೆ ಬೇಕಿರುವಷ್ಟೇ ಸಂಪನ್ಮೂಲವನ್ನು (ಯಂತ್ರಾಂಶ ಮತ್ತು ತಂತ್ರಾಂಶ) ಮಾತ್ರ ಬಾಡಿಗೆಗೆ ಪಡೆದುಕೊಳ್ಳುವುದು ಇಂದಿನ ತಂತ್ರಜ್ಞಾನದ ನಾಗಲೋಟದಲ್ಲಿ ಮುಂದಿನ ಮಜಲಾದಂತಹ ಕ್ಲೌಡ್‌ ತಂತ್ರಜ್ಞಾನದ ಸಾಧ್ಯವಿದೆ. ಆನ್‌ಲೈನ್...

read more

ಆಂಡ್ರಾಯ್ಡ್ ಅನ್ವಯ ಅಭಿವೃದ್ಧಿ

2010 ರ ಈಚೆಗೆ ಮೊಬೈಲ್ ಮತ್ತು ಟ್ಯಾಬ್ಲೆಟ್‌ಗಳ ಜಗತ್ತಿನಲ್ಲಿ ಬಿರುಗಾಳಿ ಎಬ್ಬಿಸಿರುವ ಆಂಡ್ರಾಯ್ಡ್ ಕಾರ್ಯಾಚರಣೆ ವ್ಯವಸ್ಥೆಯೂ ಸಹ ಲಿನಕ್ಸ್ ಕರ್ನಲ್‌ ಆಧರಿತವಾಗಿದೆ. ಇದರ ಕೋಡ್‌ನಲ್ಲಿನ ಮುಕ್ತತೆ ಕಾರಣದಿಂದಾಗಿಯೆ ಇದರ...

read more
Share This