2010 ರ ಈಚೆಗೆ ಮೊಬೈಲ್ ಮತ್ತು ಟ್ಯಾಬ್ಲೆಟ್‌ಗಳ ಜಗತ್ತಿನಲ್ಲಿ ಬಿರುಗಾಳಿ ಎಬ್ಬಿಸಿರುವ ಆಂಡ್ರಾಯ್ಡ್ ಕಾರ್ಯಾಚರಣೆ ವ್ಯವಸ್ಥೆಯೂ ಸಹ ಲಿನಕ್ಸ್ ಕರ್ನಲ್ ಆಧರಿತವಾಗಿದೆ. ಇದರ ಕೋಡ್‌ನಲ್ಲಿನ ಮುಕ್ತತೆ ಕಾರಣದಿಂದಾಗಿಯೆ ಇದರ ಬಳಕೆ ಈ ಮಟ್ಟಿಗೆ ಬೆಳದಿರುವುದು. ಇಂತಹ ಆಂಡ್ರಾಯ್ಡಿನ ಅನ್ವಯಗಳನ್ನು (ಆಪ್) ಅಭಿವೃದ್ಧಿಪಡಿಸುವವರಿಗೆ ಈಗ ಎಲ್ಲಿಲ್ಲದ ಬೇಡಿಕೆ ಇದೆ. ಮೊಬೈಲ್ ಮುಖಾಂತರ ಜನರನ್ನು ತಲುಪಲು ಶತಾಯಗತಾಯ ಪ್ರಯತ್ನಿಸುತ್ತಿರುವ ಪ್ರತಿಯೊಂದು ಕಂಪನಿ, ಪ್ರತಿಯೊಬ್ಬ ವ್ಯಕ್ತಿಯೂ ಸಹ ತಮ್ಮದೆ ಆದ ಆಪ್ ಹೊಂದಿರಲು ಬಯಸುತ್ತಿದ್ದಾರೆ. ಇದಕ್ಕೆ ಪೂರಕವಾದ ಕೋರ್ಸುಗಳೂ ಸಹ ಎಲ್ಲೆಡೆ ದೊರೆಯುತ್ತಿದೆ. ಲಿನಕ್ಸ್ ಮತ್ತು ಆಂಡ್ರಾಯ್ಡ್ ಅನ್ವಯಗಳನ್ನು ಅಭಿವೃದ್ಧಿಪಡಿಸುವಿಕೆಯಲ್ಲಿನ ತರಬೇತಿಯು ಸಾಕಷ್ಟು ಅವಕಾಶಗಳು ಒದಗಿಬರುವುದರಲ್ಲಿ ಸಂಶಯೇ ಇಲ್ಲ.
ಗುಣಮಟ್ಟ ಖಾತರಿ (ಕ್ವಾಲಿಟಿ ಅಶ್ಯುರೆನ್ಸ್)
ಯಾವುದೆ ಉತ್ಪನ್ನದ ಅಭಿವೃದ್ಧಿ ಮತ್ತು ತಯಾರಿಕೆಯಲ್ಲಿ ಗುಣಮಟ್ಟ ಪರಿಶೀಲನೆ ಮತ್ತು ಖಾತರಿ ಒಂದು ಅತ್ಯಂತ ಪ್ರಮುಖ ಹಂತವಾಗಿರುತ್ತದೆ. ತಂತ್ರಾಂಶ ಪರೀಕ್ಷಕರಿಗೆ (ಸಾಫ್ಟ್‌ವೇರ್ ಟೆಸ್ಟರ್) ಎಲ್ಲಾ ತಂತ್ರಾಂಶ ತಯಾರಕ...
ನಿಮ್ಮ ಪ್ರತಿಕ್ರಿಯೆಗಳು