ಅಗತ್ಯಕ್ಕೆ ಬೇಕಿರುವಷ್ಟೇ ಸಂಪನ್ಮೂಲವನ್ನು (ಯಂತ್ರಾಂಶ ಮತ್ತು ತಂತ್ರಾಂಶ) ಮಾತ್ರ ಬಾಡಿಗೆಗೆ ಪಡೆದುಕೊಳ್ಳುವುದು ಇಂದಿನ ತಂತ್ರಜ್ಞಾನದ ನಾಗಲೋಟದಲ್ಲಿ ಮುಂದಿನ ಮಜಲಾದಂತಹ ಕ್ಲೌಡ್ ತಂತ್ರಜ್ಞಾನದ ಸಾಧ್ಯವಿದೆ. ಆನ್‌ಲೈನ್ ವ್ಯಾಪಾರ ಮತ್ತು ಖರೀದಿ ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ಕ್ಲೌಡ್ ತಾಂತ್ರಿಕತೆಯು ಹೆಚ್ಚು ಹೆಚ್ಚು ಪ್ರಸ್ತುತವೆನಿಸುತ್ತಿದೆ. ಭಾರತದಂತಹ ದೇಶಕ್ಕೆ ಉಚಿತ ಮತ್ತು ಮುಕ್ತ ತಂತ್ರಾಂಶಗಳನ್ನು (ಉದಾ. ಲಿನಕ್ಸ್) ಒಳಗೊಂಡಿರುವ ಕ್ಲೌಡ್ ಸೇವೆಗಳು ಹೆಚ್ಚು ಮಿತವ್ಯಯಕಾರಿಯಾಗಿರಬಲ್ಲವು. ಇಂತಹ ಕ್ಲೌಡ್ ಸೇವೆಯನ್ನು ಒದಗಿಸುವ ಸಂಸ್ಥೆಗಳಿಂದ ಯಾವುದೆ ಕ್ಷೇತ್ರದವರು ಸೇವೆಯನ್ನು ಪಡೆಯಬಹುದು, ಉದಾ ಬ್ಯಾಕಿಂಗ್, ಆರೋಗ್ಯ, ವಿಮಾ ಇತ್ಯಾದಿ. ಇಂತಹ ಸಂದರ್ಭದಲ್ಲಿ ಕ್ಲೌಡ್ ಸೇವೆಯನ್ನು ಒದಗಿಸುವ ಸಂಸ್ಥೆಗಳಿಗೆ ವಿವಿಧ ಕ್ಷೇತ್ರಗಳಿಗೆ ಸೇವೆಯನ್ನು ಒದಗಿಸಲು ಲಿನಕ್ಸ್ ಅರಿವಿನ ಜೊತೆಗೆ ಆಯಾಯ ಕ್ಷೇತ್ರದ ಜ್ಞಾನವನ್ನು (ಡೊಮೇನ್ ನಾಲೆಜ್) ಹೊಂದಿರುವ ಅಭ್ಯರ್ಥಿಗಳು ಅತ್ಯಗತ್ಯವಾಗಿರುತ್ತಾರೆ.
ಒಂದು ದೊಡ್ಡ ಗಾತ್ರದ (ಮೆಮೊರಿ) ಹಾರ್ಡ್ ಡಿಸ್ಕಿನಲ್ಲಿ ಅಗತ್ಯಕ್ಕೆ ಅನುಗುಣವಾಗಿ ಸಣ್ಣ ಸಣ್ಣ ಗಣಕಯಂತ್ರಗಳಾಗಿ ಮಾಡಿಕೊಳ್ಳುವ ಒಟ್ಟಾರೆ ವ್ಯವಸ್ಥೆಯೆ ವರ್ಚುವಲೈಸೇಶನ್. ಕ್ಲೌಡ್ ಮತ್ತು ವರ್ಚುವಲೈಸೇಶನ್ ಅನ್ನು ಒಟ್ಟಿಗೆ ಬೆರೆಸಿದಲ್ಲಿ, ಒಂದು ವ್ಯವಸ್ಥಿತವಾದ ಕ್ಲೌಡ್ ಸೇವೆಯನ್ನು ಪಡೆಯಲು ಸಾಧ್ಯ. ಆದ್ದರಿಂದ ವರ್ಚುವಲೈಸೇಶನ್ ಕುರಿತಾದ ಜ್ಞಾನ ಮತ್ತು ಅನುಭವವು ಬಹುಬೇಡಿಕೆಯ ಕ್ಲೌಡ್ ಜಗತ್ತಿನಲ್ಲಿ ಉತ್ತಮ ಅವಕಾಶವನ್ನು ದೊರಕಿಸಿಕೊಡಬಲ್ಲವು.
ನಿಮ್ಮ ಪ್ರತಿಕ್ರಿಯೆಗಳು