ನೇರ ಕಲಿಕೆಯ ಮೂಲಕ ಅಥವ ಟೆಕ್ನಿಶಿಯನ್ ಅನುಭವದ ಮೂಲಕ ಲಿನಕ್ಸ್ ಸಿಸ್ಟಮ್ ಅಡ್ಮಿನಿಸ್ಟ್ರೇಟರ್ ಆಗಿ ಕೆಲಸ ಮಾಡಬಹುದು. ಇದಕ್ಕಾಗಿಯೆ RHCE ನಂತಹ (Red Hat Certified Engineers) ಕೋರ್ಸುಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಲಿನಕ್ಸ್ ಬಳಕೆಯ ಒಂದು ಪರಿಪೂರ್ಣ ಜ್ಞಾನದ ಅಗತ್ಯವಿರುವ ಈ ಕೆಲಸದಲ್ಲಿ ಲಿನಕ್ಸ್ ಟೆಕ್ನಿಶಿಯನ್ ಗಿಂತಲೂ ಹೆಚ್ಚಿನ ಜವಾಬ್ದಾರಿಗಳನ್ನು ಹೊರಬೇಕಾಗುತ್ತದೆ. ಇವರು, ftp, http, dns ಮುಂತಾದ ಪ್ರಮುಖ ಸೇವೆಗಳು, ಕ್ರಾನ್ ಜಾಬ್ಸ್, ಬ್ಯಾಕ್ ಅಪ್ ಸಿದ್ಧಗೊಳಿಸುವಿಕೆ ಮತ್ತು ಇತರೆ ವ್ಯವಸ್ಥಾಪನಾ ಕಾರ್ಯಗಳನ್ನು ನಿರ್ವಹಿಸಲು ಸಮರ್ಥರಾಗಿರಬೇಕು. ಇದರ ಜೊತೆಗೆ, ಈ ಹುದ್ದೆಯು ವ್ಯವಸ್ಥೆಗಳು (ಸಿಸ್ಟಮ್) ಮತ್ತು ಪೂರೈಕೆಗಣಕಗಳನ್ನು (ಸರ್ವರ್) ಹೇಗೆ ಸುರಕ್ಷಿತವಾಗಿರಿಸುವುದು, ಫೈರ್ವಾಲ್ ಅನ್ನು ಹೇಗೆ ನೋಡಿಕೊಳ್ಳುವುದು, ತಂತ್ರಾಂಶ ಪ್ಯಾಕೇಜುಗಳನ್ನು ನಿರ್ವಹಿಸುವ ಬಗೆ ಮುಂತಾದ ಕೆಲಸಗಳ ಕುರಿತು ಜ್ಞಾನವನ್ನು ಅಪೇಕ್ಷಿಸುತ್ತದೆ. ಹೆಚ್ಚಿನ ಲಿನಕ್ಸ್ ಸಿಸ್ಟಮ್ ಅಡ್ಮಿನ್ ಗಳು Red hat Enterprise Linux, Debian ಮುಂತಾದ ಪೂರೈಕೆಗಣಕಕ್ಕೆಂದೇ ಅಭಿವೃದ್ಧಿಪಡಿಸಲಾದ ವಿತರಣೆಗಳೊಂದಿಗೆ (ಡಿಸ್ಟ್ರಿಬ್ಯೂಶನ್ಸ್) ಕೆಲಸಮಾಡುತ್ತಾರೆ. ಆದ್ದರಿಂದ ಈ ಕೆಲಸದಲ್ಲಿ ತೊಡಗಿಕೊಳ್ಳಲು ಬಯಸುವವರು ವ್ಯವಸ್ಥೆಗಳನ್ನು ನಿರ್ವಹಿಸುವ ಕುರಿತಾದ ಮೂಲಭೂತ ಅಗತ್ಯತೆಗಳನ್ನು ಅಭ್ಯಾಸ ಮಾಡಿ ನಂತರ ಯಾವುದಾದರೂ ಒಂದು ಲಿನಕ್ಸ್ ವಿತರಣೆಯ ಕಲಿಕೆಯತ್ತ ಗಮನಹರಿಸುವುದು ಒಳಿತು.
ಗುಣಮಟ್ಟ ಖಾತರಿ (ಕ್ವಾಲಿಟಿ ಅಶ್ಯುರೆನ್ಸ್)
ಯಾವುದೆ ಉತ್ಪನ್ನದ ಅಭಿವೃದ್ಧಿ ಮತ್ತು ತಯಾರಿಕೆಯಲ್ಲಿ ಗುಣಮಟ್ಟ ಪರಿಶೀಲನೆ ಮತ್ತು ಖಾತರಿ ಒಂದು ಅತ್ಯಂತ ಪ್ರಮುಖ ಹಂತವಾಗಿರುತ್ತದೆ. ತಂತ್ರಾಂಶ ಪರೀಕ್ಷಕರಿಗೆ (ಸಾಫ್ಟ್ವೇರ್ ಟೆಸ್ಟರ್) ಎಲ್ಲಾ ತಂತ್ರಾಂಶ ತಯಾರಕ...
ನಿಮ್ಮ ಪ್ರತಿಕ್ರಿಯೆಗಳು