ಈ ವೃತ್ತಿಯನ್ನು ಬಯಸುವ ಅಭ್ಯರ್ಥಿಯು ಲಿನಕ್ಸ್ ವರ್ಕ್-ಸ್ಟೇಶನ್ಗಳನ್ನು ಮತ್ತು ಡೆಸ್ಕ್ಟಾಪ್ಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊರಬೇಕಿರುತ್ತದೆ. ಒಬ್ಬ ಟೆಕ್ನಿಶಿಯನ್ ಆದ ವ್ಯಕ್ತಿಯು ಹಾರ್ಡ್ ಡಿಸ್ಕ್ ವಿಭಾಗ ಮಾಡುವಿಕೆ (ಪಾರ್ಟಿಶನಿಂಗ್), ಅನುಸ್ಥಾಪನೆ (ಇನ್ ಸ್ಟಲೇಶನ್), ಸೇವೆಗಳನ್ನು (ಸರ್ವಿಸಸ್) ನಿರ್ವಹಿಸುವಿಕೆ, ಬಳಕೆದಾರರನ್ನು ನೋಡಿಕೊಳ್ಳುವಿಕೆ, ಜಾಲಬಂಧದಲ್ಲಿನ ತೊಂದರೆ ಸರಿಪಡಿಸುವಿಕೆ, ಸಣ್ಣಪುಟ್ಟ ಸ್ಕ್ರಿಪ್ಟ್ ಬರೆಯುವಿಕೆ ಮತ್ತು ಕಾರ್ಯಾಚರಣೆ ವ್ಯವಸ್ಥೆಯಲ್ಲಿ (ಆಪರೇಟಿಂಗ್ ಸಿಸ್ಟಂ) ತೊಂದರೆಗಳನ್ನು ಕೊನೆಗಾಣಿಸುವ ಜ್ಞಾನವನ್ನು ಹೊಂದಿರಬೇಕಿರುತ್ತದೆ. ಈ ಪರಿಣಿತಿಯನ್ನು ಹೊಂದಿರುವವರು ಲಿನಕ್ಸ್ ಬಳಸುವ ಕಂಪನಿಗಳಲ್ಲಿ, ಶಾಲೆ, ಕಾಲೇಜುಗಳಲ್ಲಿ, ಡೇಟಾಸೆಂಟರುಗಳಲ್ಲಿ, ಮಳಿಗೆ ಮುಂತಾದೆಡೆಗಳಲ್ಲಿ ಕೆಲಸ ಗಿಟ್ಟಿಸುವ ಅವಕಾಶವಿರುತ್ತದೆ. ಟೆಕ್ನಿಶಿಯನ್ ಆಗಿ ಹೆಚ್ಚಿನ ವರ್ಷಗಳ ಅನುಭವ ಹೊಂದಿದ ಮೇಲೆ ಸಿಸ್ಟಮ್ಸ್ ಅಡ್ಮಿನಿಸ್ಟ್ರೇಟರ್ ಆಗಿ ಬಡ್ತಿ ಹೊಂದಬಹುದು.
ಗುಣಮಟ್ಟ ಖಾತರಿ (ಕ್ವಾಲಿಟಿ ಅಶ್ಯುರೆನ್ಸ್)
ಯಾವುದೆ ಉತ್ಪನ್ನದ ಅಭಿವೃದ್ಧಿ ಮತ್ತು ತಯಾರಿಕೆಯಲ್ಲಿ ಗುಣಮಟ್ಟ ಪರಿಶೀಲನೆ ಮತ್ತು ಖಾತರಿ ಒಂದು ಅತ್ಯಂತ ಪ್ರಮುಖ ಹಂತವಾಗಿರುತ್ತದೆ. ತಂತ್ರಾಂಶ ಪರೀಕ್ಷಕರಿಗೆ (ಸಾಫ್ಟ್ವೇರ್ ಟೆಸ್ಟರ್) ಎಲ್ಲಾ ತಂತ್ರಾಂಶ ತಯಾರಕ...
ನಿಮ್ಮ ಪ್ರತಿಕ್ರಿಯೆಗಳು