ಸೂಕ್ತವಾದ ಸರ್ಟಿಫಿಕೇಶನ್ ಇದ್ದಲ್ಲಿ ಅಥವ ಲಿನಕ್ಸ್ ಕಲಿಸುವಿಕೆಯ ಅನುಭವವಿದ್ದಲ್ಲಿ, ಅನೇಕ ಶೈಕ್ಷಣಿಕ ಸಂಸ್ಥೆಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ, ಮತ್ತು ಕಾಲೇಜುಗಳಲ್ಲಿ ಶಿಕ್ಷಕರಾಗಿ ಕೆಲಸಕ್ಕೆ ಸೇರಬಹುದು. ಲಿನಕ್ಸ್ ಹಾಗೂ ಬರವಣಿಗೆಯ ಕುರಿತು ಆಸಕ್ತಿ ಮತ್ತು ಪ್ರಾವಿಣ್ಯತೆ ಇದ್ದಲ್ಲಿ, ಇದರಲ್ಲಿಯೂ ಸಹ ಬದುಕು ರೂಪಿಸಿಕೊಳ್ಳುವ ಅವಕಾಶಗಳಿವೆ. ಲಿನಕ್ಸ್ ಅಥವ ಮುಕ್ತ ತಂತ್ರಾಂಶಗಳಿಗೆ ಸಂಬಂಧಿಸಿದಂತೆ ಕೆಲಸ ಮಾಡುವ ದೊಡ್ಡ ದೊಡ್ಡ ಸಂಸ್ಥೆಗಳಲ್ಲಿನ ಮಾಹಿತಿ ದಸ್ತಾವೇಜುಗಳನ್ನು (ಡಾಕ್ಯುಮೆಂಟೇಶನ್) ಬರೆಯುವವರ ಜಾಗಕ್ಕೆ ಇಂತಹ ಅಭ್ಯರ್ಥಿಗಳ ಅಗತ್ಯವಿರುತ್ತದೆ. ಆದ್ದರಿಂದ ಇಂತಹ ಆಸಕ್ತಿಗಳನ್ನು ಹೊಂದಿರುವವರು ಸಮಯ ದೊರೆತಾಗ ಲಿನಕ್ಸ್ ಕುರಿತು ಬ್ಲಾಗ್‌ಗಳನ್ನು ಬರೆಯುವುದನ್ನು ಹವ್ಯಾಸ ಮಾಡಿಕೊಂಡಿರೆ ಒಳಿತು.
ಗುಣಮಟ್ಟ ಖಾತರಿ (ಕ್ವಾಲಿಟಿ ಅಶ್ಯುರೆನ್ಸ್)
ಯಾವುದೆ ಉತ್ಪನ್ನದ ಅಭಿವೃದ್ಧಿ ಮತ್ತು ತಯಾರಿಕೆಯಲ್ಲಿ ಗುಣಮಟ್ಟ ಪರಿಶೀಲನೆ ಮತ್ತು ಖಾತರಿ ಒಂದು ಅತ್ಯಂತ ಪ್ರಮುಖ ಹಂತವಾಗಿರುತ್ತದೆ. ತಂತ್ರಾಂಶ ಪರೀಕ್ಷಕರಿಗೆ (ಸಾಫ್ಟ್‌ವೇರ್ ಟೆಸ್ಟರ್) ಎಲ್ಲಾ ತಂತ್ರಾಂಶ ತಯಾರಕ...
ನಿಮ್ಮ ಪ್ರತಿಕ್ರಿಯೆಗಳು