ಇಂದು ಐ.ಟಿ ಜಗತ್ತು ಕ್ಲೌಡ್ ಕಂಪ್ಯೂಟಿಂಗ್ ನತ್ತ ತಲೆಮಾಡಿದೆ. ಕ್ಲೌಡ್ ಮೂಲಭೂತ ಸೌಕರ್ಯಗಳು (Infrastructure) 2011 ರ ನೆಟ್ವರ್ಕಿಂಗ್ ಮಾತುಗತೆಗಳ ವಿಷಯಗಳ ಪಟ್ಟಿಯಲ್ಲಿ ಮುಂಚೂಣಿ ಸ್ಥಾನ ಪಡೆಯುತ್ತವೆ. ಇದರಲ್ಲಿ ಪ್ರಮುಖ ಪಾತ್ರವಹಿಸುವುದು ನೆಟ್ವರ್ಕಿಂಗ್ ಸಾಮ್ರಾಜ್ಯದ ದೈತ್ಯ ಸಿಸ್ಕೋ. ಕ್ಲೌಡ್ ಕಂಪ್ಯೂಟಿಂಗ್ ಗೆ ಬೇಕಿರುವ ಸರ್ವರ್, ರೂಟಿಂಗ್ ಮತ್ತು ಸ್ವಿಚಿಂಗ್ ಸೌಕರ್ಯಗಳು ಇತ್ಯಾದಿಯನ್ನು ಸಿಸ್ಕೋ ಪೂರೈಸುತ್ತದೆ.
ಈ ಕಾಲಗಟ್ಟದಲ್ಲಿ ಕ್ಲೌಡ್ ಅಭಿವೃದ್ದಿಯ ಮತ್ತು ನಿಯೋಜನೆ, ಮಾನದಂಡಗಳು ಇನ್ನೂ ಪ್ರಾಥಮಿಕ ಹಂತದಲ್ಲಿರುವುದರಿಂದ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳು ಅತಿಮುಖ್ಯವಾಗಿ ಸಹಾಯಕ್ಕೆ ಬರುತ್ತವೆ.
ಸಿಸ್ಕೋದ ಮುಖ್ಯ ತಾಂತ್ರಿಕ ನಿರ್ವಾಹಕ ಲ್ಯೂ ಟಕರ್ (Lew Tucker) ಕ್ಲೌಡ್ ಸಂಬಂದಿತ ಕೆಲಸಗಳು ನೆಡೆಯುತ್ತಿರುವ ಓಪನ್ ಸೋರ್ಸ್ ಸಮುದಾಯಗಳಲ್ಲಿ ತಮ್ಮ ಆಸ್ಥೆ ಇರುವುದನ್ನು ಇತ್ತೀಚೆಗೆ ತಿಳಿಸಿದ್ದಾರೆ. ಓಪನ್ ಸೋರ್ಸ್ ಕ್ಲೌಡ್ ಕಂಪ್ಯೂಟಿಂಗ್ ನ ವೇದಿಕೆಗೆ ಅನೇಕ ತಂತ್ರಜ್ಞಾನಗಳನ್ನು ಕೊಡುಗೆಯಾಗಿ ನೀಡಿರುವುದೇ ಇದಕ್ಕೆ ಕಾರಣ.
ಸಿಸ್ಕೋ ಅನೇಕ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳಲ್ಲಿ ಖುದ್ದಾಗಿ ಭಾಗಿಯಾಗುತ್ತಿರುವುದಾಗಿಯೂ ಲ್ಯೂಟಕರ್ ಹೇಳಿದ್ದಾರೆ. ಸಧ್ಯಕ್ಕೆ ಸಿಸ್ಕೋದ ಕಣ್ಣು ರಾಕ್‌ಸ್ಪೇಸ್ ಮತ್ತು ನಾಸದ ಸಹಭಾಗಿತ್ವದಲ್ಲಿ ನೆಡೆದಿರುವ ಓಪನ್ ಸ್ಟ್ಯಾಕ್ ತಂತ್ರಜ್ಞಾನ. ಓಪನ್ ಸ್ಟ್ಯಾಕ್ ೩೫ ಟೆಕ್ನಾಲಜಿ ವೆಂಡರುಗಳ ಸಹಭಾಗಿತ್ವದಲ್ಲಿ ಹೊರಬರುತ್ತಿರುವ ಓಪನ್ ಸೋರ್ಸ್ ಕ್ಲೌಡ್ ನ ಒಂದು ಪ್ರಥಮ ಹೆಜ್ಜೆ.
ಮುಕ್ತ ಹಾಗೂ ಸ್ವತಂತ್ರ ಗ್ನು/ಲಿನಕ್ಸ್ ಹಂಚಿಕೆಯ ಮುಂದಾಳು ರೆಡ್ ಹ್ಯಾಟ್ ಸಿಸ್ಕೋದ ವರ್ಚುಯಲೈಸೇಶನ್ ತಂತ್ರಜ್ಞಾನದ ಪಾಲುದಾರನಾಗಿದೆ. ರೆಡ್ ಹ್ಯಾಟ್ ನ ಕೆ.ವಿ.ಎಮ್ ತಂತ್ರಜ್ಞಾನ ಸಿಸ್ಕೋದ ಯುನಿಫೈಡ್ ಕಂಪ್ಯೂಟಿಂಗ್ ಸಿಸ್ಟಂ ನ ಮೂಲ ಭಾಗವಾಗಿದೆ. ರೆಡ್ ಹ್ಯಾಟ್ ಈ ಸಹಭಾಗಿತ್ವಕ್ಕೆ ೨೦೦೯ ರಲ್ಲಿ ಸಹಿಹಾಕಿತ್ತು. ಈಗ ಸಿಸ್ಕೋದೊಡನೆ ಡೇಲ್ಟಾ ಕ್ಲೌಡ್ ಯೋಜನೆಗೆ ರೆಡ್ ಹ್ಯಾಟ್ ಕೈಜೋಡಿಸಿದೆ.
ಓಪನ್ ಸೋಸ್ರ್ ಯೋಜನೆಗಳನ್ನು ತಳುಕು ಮಾಡುವುದರ ಬದಲು ಮೇಲ್‌ಸ್ತರದ ಯೋಜನೆಗಳಲ್ಲಿ ಭಾಗಿಯಾಗಿ ಅವುಗಳನ್ನೇ ಸಿಸ್ಕೋದ ಯೋಜನೆಗಳಲ್ಲಿ ಉಪಯೋಗಿಸಲು ಇಷ್ಟ ಪಡುವುದಾಗಿಯೂ ಟಕರ್ ಹೇಳಿದ್ದಾರೆ.
ನಿಮ್ಮ ಪ್ರತಿಕ್ರಿಯೆಗಳು