ಹೈಬರ್ನೇಟ್ ಬಳಸುವುದರಿಂದ ನಿಮ್ಮಲ್ಯಾಪ್‌ಟಾಪ್‌ನ ಬ್ಯಾಟರಿ ಮುಗಿಯುವ ಸಮಯದಲ್ಲೋ ಅಥವಾ ನೀವು ಅದರ ಲಿಡ್ ಮುಚ್ಚುವಾಗ, ಇದ್ದಕ್ಕಿದ್ದಂತೆ ಎಲ್ಲಿಯೋ ಹೊರಡಬೇಕಾದಾಗ, ಅದರಲ್ಲಿ ನೀವು ಮಾಡುತ್ತಿರುವ ಕೆಲಸವನ್ನು ಉಳಿಸಿಕೊಂಡು ಕಂಪ್ಯೂಟರ್ ಅನ್ನು ಸ್ಥಬ್ದವಾಗಿಸಬಹುದು. ಪವರ್ ಬಟನ್ ಮೇಲೆ ಕ್ಲಿಕ್ಕಿಸಿ ‘Power Settings’ ನಲ್ಲಿ ಇದನ್ನು ಎನೇಬಲ್ ಮಾಡಲು ಸಾಧ್ಯ. ಆದರೆ ಉಬುಂಟು ೧೨.೦೪ ನಲ್ಲಿ ಇದನ್ನು ಡಿಸೇಬಲ್ ಮಾಡಲಾಗಿದೆ. ಇದನ್ನು ಮತ್ತೆ ಎನೇಬಲ್ ಮಾಡಲು ಹಲವಾರು ವಿಧಾನಗಳಿಗೆ. hybernate ಎಂಬ ತಂತ್ರಾಂಶವನ್ನು ಇನ್ಸ್ಟಾಲ್ ಮಾಡಿಕೊಳ್ಳಬಹುದು ಅಥವಾ ಈ ಕೆಳಕಂಡಂತೆ ಉಬುಂಟುವಿನ ಮೂಲ ಹೈಬರ್ನೇಟ್ ಆಯ್ಕೆಯನ್ನು ಲಭ್ಯವಾಗಿಸಿಕೊಳ್ಳಬಹುದು. ನೀವು ನುರಿತ ಬಳಕೆದಾರರಾಗಿದ್ದಲ್ಲಿ ಮಾತ್ರ ಇದನ್ನು ಸಂಪೂರ್ಣವಾಗಿ ಓದಿಕೊಂಡು ಬಳಸತಕ್ಕದ್ದು.
ನಿಮ್ಮ ಕಂಪ್ಯೂಟರ್‌ನ ಟರ್ಮಿನಲ್‌ನಲ್ಲಿ ಈ ಕೆಳಕಂಡ ಕಮ್ಯಾಂಡ್ ಟೈಪ್ ಮಾಡಿ:
sudo gedit /var/lib/polkit-1/localauthority/10-vendor.d/com.ubuntu.desktop.pkla
ಪಾಸ್‌ವರ್ಡ್ ಕೇಳಿದಾಗ ಅದನ್ನು ಟೈಪಿಸಿ.
ಈ ಕೆಳಕಂಡ ಸಾಲುಗಳನ್ನು gedit ನಲ್ಲಿ ಹುಡುಕಿ
[Disable hibernate by default]
Identity=unix-user:*
Action=org.freedesktop.upower.hibernate
ResultActive=no
ಮತ್ತು ಅದನ್ನು ಈ ಕೆಳಕಂಡ ಸಾಲುಗಳಿಂದ ಬದಲಿಸಿ
[Re-enable hibernate]
Identity=unix-user:*
Action=org.freedesktop.upower.hibernate
ResultActive=yes
ನೀವು ಮುಂದೆ ನಿಮ್ಮ ಕಂಪ್ಯೂಟರ್ ರೀಸ್ಟಾರ್ಟ್ ಮಾಡಿದ ನಂತರ ‘ಹೈಬರ್ನೇಟ್’ ನಿಮ್ಮ ಪವರ್ ಮೆನುವಿನಲ್ಲಿ ಕಾಣಿಸಿಕೊಳ್ಳುತ್ತದೆ. ನಿಮ್ಮ ಕಂಪ್ಯೂಟರ್‌ನ ಹಾರ್ಡ್ವೇರ್ ಅದನ್ನು ಬೆಂಬಲಿಸಿದಲ್ಲಿ, ಅದು ಕಾರ್ಯನಿರ್ವಹಿಸುವುದನ್ನು ನೀವು ಕಾಣಬಹುದು.
ಇದನ್ನು ಪರೀಕ್ಷಿಸಲು ಈ ಕೆಳಕಂಡ ಕಮ್ಯಾಂಡ್ ಬಳಸಿ:
sudo pm-hibernate
ನಿಮ್ಮ ಪ್ರತಿಕ್ರಿಯೆಗಳು