ಈ ಪ್ರಯೋಗಕ್ಕೆ ಸತ್ಯೇಂದ್ರನಾಥ ಬೋಸ್ ಅವರ ‘ಸಾಪೇಕ್ಷ ಸಿದ್ದಾಂತ’ ಜೊತೆಗೆ ಇತರೆ ಭಾರತೀಯರ ಕೊಡುಗೆ ಬಗ್ಗೆ ಕೂಡ ನಿಮಗೆ ಈಗಾಗಲೇ ತಿಳಿದಿದೆ ಎಂದು ಭಾವಿಸುತ್ತ, ಲಿನಕ್ಸಾಯಣದಲ್ಲಿ ಇದರ ಬಗ್ಗೆ ಬರೆಯುತ್ತಿರುವ ವಿಷಯವನ್ನು ಪ್ರಸ್ತಾಪಿಸುತ್ತೇನೆ. ಈ ಚಿತ್ರವನ್ನು ನೋಡಿ :
I don’t see any CERN related things here, so I want to mention how Linux (specifically, Scientific Linux and Ubuntu) had a vital role in the discovery of the new boson at CERN. We use it every day in our analyses, together with hosts of open software, such as ROOT, and it plays a major role in the running of our networks of computers (in the grid etc.) used for the intensive work in our calculations.
Yesterday’s extremely important discovery has given us new information about how reality works at a very fundamental level and this is one physicist throwing Linux some love.
‘ಸೈಂಟಿಫಿಕ್ ಲಿನಕ್ಸ್’ ಅನ್ನು ದಿನನಿತ್ಯದ ವೈಜ್ಞಾನಿಕ ವಿಶ್ಲೇಷಣೆಗೆ ಸರ್ನ್ ಬಳಸಿಕೊಂಡಿದೆ. ಇದನ್ನು ಧೃಡಪಡಿಸುವುದಕ್ಕೆಂದೇ ಸರ್ನ್ ಲಿನಕ್ಸ್‌ಗೆಂದೇ ತೆರೆದಿರುವ ಬಳಕೆದಾರರ ಅಂತರ್ಜಾಲ ತಾಣ https://linux.web.cern.ch/linux/ ಇಲ್ಲಿ ಲಭ್ಯವಿದೆ.
ಗ್ನು/ಲಿನಕ್ಸ್‌ನ ಕಾರ್ಯಕ್ಷಮತೆ, ಸದೃಡತೆ, ಸುರಕ್ಷತೆ ಇತ್ಯಾದಿಗಳಿಂದ ಇಂತಹ ದೊಡ್ಡದೊಂದು ಕಾರ್ಯಕ್ರಮದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿರುವುದರಲ್ಲಿ ಆಶ್ಚರ್ಯವಿಲ್ಲ. ಇದೇ ರೀತಿ ಸರ್ನ್ ಬಳಸುತ್ತಿರುವ DRUPAL CMS, ಮತ್ತು ಇತರೆ ಫ್ರೀ & ಓಪನ್ ಸೋರ್ಸ್ (ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶ) ಗಳ ಪಟ್ಟಿಯನ್ನು ಇಲ್ಲಿ ನೋಡಿ – https://root.cern.ch/drupal .
ಉಬುಂಟುವನ್ನು ಕೂಡ ಇಲ್ಲಿ ಬಳಸಲಾಗಿದೆ. https://sourceforge.net/projects/cernrootdebs & https://github.com/ubuntu-cern ಕೊಂಡಿಗಳನ್ನು ಒಮ್ಮೆ ನೋಡಿ.
ಅಂತೂ ಗ್ನು/ಲಿನಕ್ಸ್‌ಗೆ ಇದರಿಂದ ತನ್ನ ಮುಡಿಗೆ ಮತ್ತೊಂದು ಗರಿಯನ್ನು ಏರಿಸಿಕೊಂಡಿದೆ.
ಚಿತ್ರಕೃಪೆ: ಸರ್ನ್
ನಿಮ್ಮ ಪ್ರತಿಕ್ರಿಯೆಗಳು