ಮೈಕ್ರೋಕಂಟ್ರೋಲರ್ ಫೈಲುಗಳನ್ನೋ, ಅಥವಾ ತಂತ್ರಾಂಶ ಅಭಿವೃದ್ದಿಯ ಸಮಯದಲ್ಲಿ ಯಾವುದೇ ಕಡತದ ಹೆಕ್ಸ್ (hex) ಕೋಡ್/ಸಂಕೇತಗಳನ್ನು ತಿಳಿದುಕೊಳ್ಳಲು ಸಹಾಯವಾಗಲೆಂದು ಬಳಸುವ ಹೆಕ್ಸ್ ಎಡಿಟರ್‌ಗಳ ಬಗ್ಗೆ ನಿಮಗೆ ತಿಳಿದಿರಬೇಕು. ವಿಂಡೋಸ್‌ನಲ್ಲಿ ಬಳಸುವ ಇಂತಹ ಕೆಲವು ಎಡಿಟರ್‌ಗಳಿಗೆ ಹಣ ವ್ಯಯಿಸಬೇಕಾಗುತ್ತದೆ. ಇಂತದೇ ಎಡಿಟರ್ ನಿಮಗೆ ಲಿನಕ್ಸ್‌ನಲ್ಲಿ ಉಚಿತವಾಗಿ ಲಭ್ಯವಿದೆ. ಲಿನಕ್ಸ್‌ನಲ್ಲಿ ಬಳಸುವ ಸಾಮಾನ್ಯ VI ಎಡಿಟರ್ ಕೂಡ ಹೆಕ್ಸ್ ಎಡಿಟರ್ ಮಾದರಿಯಲ್ಲಿ ಕೆಲಸ ಮಾಡಬಲ್ಲದು. ಇದೇ ರೀತಿ ಗ್ರಾಫಿಕಲ್ ಎಡಿಟರ್‌ಗಳನ್ನು ಬಯಸುವವರಿಗೆ ಅನೇಕ ಆಯ್ಕೆಗಳು ಲಭ್ಯವಿವೆ. Ghex, Khexedit, Okteta, Wxhexeditor, lfhex, bless ಜೊತೆಗೆ emacs editor ಕೂಡ hexl-mode ಬೆಂಬಲಿಸುತ್ತದೆ.
Ghex ಎಡಿಟರ್ ಈ ಕೆಳಕಂಡತೆ ಕಾಣುತ್ತದೆ.
ಇದನ್ನು ಇನ್ಸ್ಟಾಲ್ ಮಾಡಿಕೊಳ್ಳುವುದೂ ಸುಲಭ. ಅದಕ್ಕೆ ಕೆಳಕಂಡ ಕಮ್ಯಾಂಡ್ ಬಳಸಿದರಾಯ್ತು.
$ sudo apt-get install ghex
ನಿಮ್ಮ ಪ್ರತಿಕ್ರಿಯೆಗಳು