ಸ್ಕೈಪ್ ಅನ್ನು ಒಂದಲ್ಲಾ ಒಂದು ಕಾರಣದಿಂದ ನಮ್ಮಲ್ಲನೇಕರು ಗೆಳೆಯರೊಂದಿಗೆ, ವ್ಯವಹಾರಕ್ಕೆ, ಸಂಪರ್ಕದಲ್ಲಿರಲು,  ಕಚೇರಿಯ ಸಂವಾದ, ಸಂದರ್ಶನ ಇತ್ಯಾದಿಗಳಿಗೆ ಬಳಸುತ್ತಲೇ ಇರುತ್ತೇವೆ. ಕೆಲವೊಮ್ಮೆ ಸ್ಕೈಪ್ ಮೂಲಕ ನೆಡೆಯುವ ಆಡಿಯೋ ಮತ್ತು ವಿಡಿಯೋ ಸಂವಾದಗಳು ಉಳಿಸಿಕೊಳ್ಳಲು ಸಾಧ್ಯವಿದ್ದಿದ್ದರೇ ಎಂದು ಅನಿಸಿರಬೇಕಲ್ಲವೇ?

ಇದು ಸಾಧ್ಯವಿದೆ. Skype Call Recorder ಯಾವುದೇ ಲಿನಕ್ಸ್‌ ಬಳಸುವವರು “Skype Call Recorder” ಎನ್ನುವ ಸ್ವತಂತ್ರ  ತಂತ್ರಾಂಶವನ್ನು https://atdot.ch/scr/download/ ಮೂಲಕ ಡೌನ್ಲೋಡ್ ಮಾಡಿಕೊಳ್ಳುವುದರ ಮೂಲಕ ಇದನ್ನು ಸಾಧ್ಯವಾಗಿಸಬಹುದು.

ಇದರ ಮುಖ್ಯ ವೈಶಿಷ್ಟ್ಯಗಳು ಇಂತಿವೆ:

  • ಕರೆಗಳನ್ನು  MP3, Ogg Vorbis or WAV ಫೈಲುಗಳನ್ನಾಗಿ ಸೇವ್ ಮಾಡಿಕೊಳ್ಳಬಹುದು.
  • ಆಟೋಮ್ಯಾಟಿಕ್ ಅಥವಾ ಖುದ್ದಾಗಿ ರೆಕಾರ್ಡಿಂಗ್ ಮಾಡುವ ಸೌಲಭ್ಯ
  • ಪ್ರತಿಯೊಬ್ಬ ಕಾಲರ್‌ಗೆ ಸಂಬಂಧಿಸಿದಂತೆ ಆಟೋ‌ಮ್ಯಾಟಿಕ್ ರೆಕಾರ್ಡಿಂಗ್ ಅಳವಡಿಸಬಹುದು
  • ಸ್ಟೀರಿಯೋ ರೆಕಾರ್ಡಿಂಗ್ ಸೌಲಭ್ಯ
  • ಸಂಪೂರ್ಣ ಉಚಿತ, ಯಾವುದೇ ನಿರ್ಬಂಧಗಳಿಲ್ಲದ , ಸ್ವತಂತ್ರ ತಂತ್ರಾಂಶ, ಗ್ನು/ಜಿ.ಪಿ.ಎಲ್ ಪರವಾನಗಿಯಡಿ ಇದನ್ನು ಬಿಡುಗಡೆಕೊಳಿಸಲಾಗಿದೆ.
  • ನಿಮ್ಮ ಸಿಸ್ಟಂ‌ ಟ್ರೇ ನಲ್ಲಿ ಕೆಲಸ ಮಾಡಬಲ್ಲದು.

ನೇರವಾಗಿ ಡೌನ್‌ಲೋಡ್ ಮಾಡಿಕೊಳ್ಳಲು ನಿಮಗೆ ಸಾಧ್ಯವಿಲ್ಲದಿದ್ದಲ್ಲಿ, ಅಥವಾ ಕಷ್ಟ ಎನಿಸಿದಲ್ಲಿ: ಉಬುಂಟು ಪಿಪಿಯೆ ಬಳಸಿ, ಈ ಕೆಳಕಂಡಂತೆ ತಂತ್ರಾಂಶವನ್ನು ಸ್ಥಾಪಿಸಿಕೊಳ್ಳಬಹುದು.

https://launchpad.net/~dajhorn/+archive/skype-call-recorder

sudo add-apt-repository ppa:dajhorn/skype-call-recorder

sudo aptitude install skype-call-recorder

 

ಜಾಹೀರಾತು Divi WordPress Theme

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಹಂಚಿಕೆಯ ಬಗ್ಗೆ

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

Share This