ಯುನಿಟಿ ಅಥವಾ ಜಿನೋಮ್ ಶೆಲ್ ಬಳಸುವಾಗ ವಿಂಡೋಸ್‌ನಲ್ಲಿ ಬಳಸುವಂತೆ Window + D ಅಥವಾ ctrl+alt+d ಕೀಗಳನ್ನು ಬಳಸಲು ಸಾಧ್ಯವಾಗುತ್ತಿಲ್ಲವೇ. ಅದಕ್ಕೆಂದೇ ಇಲ್ಲಿದೆ ಒಂದು ಸಣ್ಣ ಟ್ವೀಕ್:
ನಿಮ್ಮ ಡೆಸ್ಕ್‌ಟಾಪ್ ಮೇಲೆ ಕಾಣುವ ನಿಮ್ಮ ಕಂಪ್ಯೂಟರ್ ಬಳಕೆದಾರನ ಹೆಸರ ಮೇಲೆ ಕ್ಲಿಕ್ ಮಾಡಿ, System Settings ಕ್ಲಿಕ್ ಮಾಡಿ.
Hardware ವಿಭಾಗದಲ್ಲಿ Keyboard ಮೇಲೆ ಕ್ಲಿಕ್ ಮಾಡಿ.
Shortcuts tab ಗೆ ಬದಲಾಗಿ, ಮತ್ತು Navigation ಮೇಲೆ ಕ್ಲಿಕ್ ಮಾಡಿ. ಸ್ಕ್ರಾಲ್ ಮಾಡಿ Hide all normal windows ಎಂಬ ಆಯ್ಕೆಯನ್ನು ಹುಡುಕಿ. ಸಾಮಾನ್ಯವಾಗಿ ಇದು ನಿಮಗೆ Disabled ಸ್ಥಿತಿಯಲ್ಲಿ ಸಿಗಬಹುದು.
ಇದನ್ನು ನಿಮಗೆ ಬೇಕಿರುವ ಕೀ ಕಾಂಬಿನೇಷನ್ (ನಾನು Windows Key + D ಅಂದರೆ Super + D ಬಳಸುತ್ತೇನೆ) ಆಯ್ಕೆ ಮಾಡಿಕೊಳ್ಳಬಹುದು.







ನಿಮ್ಮ ಪ್ರತಿಕ್ರಿಯೆಗಳು