ವಿಕಿಪೀಡಿಯ ಝೀರೋ: ಉಚಿತವಾಗಿ ಏರ್‌ಸೆಲ್ ಮೂಲಕ ಜ್ಞಾನವನ್ನು ಹಂಚಿಕೊಳ್ಳಿ

by | Jun 29, 2014 | ಸುದ್ದಿ | 0 comments

image
ಏರ್‌ಸೆಲ್ ಮೂಲಕ ವಿಕಿಪೀಡಿಯ ಬಳಸುವುದು ಉಚಿತ ಎಂಬ ಮಾಹಿತಿ ನಿಮಗೆ ನೆನಪಿದೆಯೇ? ಕಳೆದ ವರ್ಷ ವಿಕಿಮೀಡಿಯ ಫೌಂಡೇಶನ್ ಏರ್‌ಸೆಲ್ ಟೆಲಿಕಾಂ ಕಂಪೆನಿಯೊಂದಿಗೆ “ವಿಕಿಪೀಡಿಯ ಝೀರೋ” ಒಪ್ಪಂದಕ್ಕೆ ಸಹಿ ಹಾಕಿ, ಏರ್‌ಸೆಲ್ ಗ್ರಾಹಕರು ಉಚಿತವಾಗಿ ಜ್ಞಾನವನ್ನು ವಿಕಿಪೀಡಿಯ ಮೂಲಕ ಪಡೆಯುವುದಕ್ಕೆ ದಾರಿ ಮಾಡಿಕೊಟ್ಟಿತು.

ಶುಕ್ರವಾರ ಸಂಜೆ (ಜೂನ್ ೨೭,೨೦೧೪) ರಂದು ಏರ್‌ಸೆಲ್ ಬೆಂಗಳೂರಿನ ತನ್ನ ಆಫೀಸಿನಲ್ಲಿ ಏರ್ಪಡಿಸಿದ್ದ ಬೆಂಗಳೂರು ಬ್ಲಾಗಿಗರ ಸಮ್ಮಿಲನದಲ್ಲಿ ವಿಕಿಮೀಡಿಯದ ಕ್ಯಾರೋಲೀನ್ (Carolynne Schloeder) ಬ್ಲಾಗಿಗರಿಗೆ ವಿಕಿಮೀಡಿಯ ಫೌಂಡೇಷನ್ ಮತ್ತು ಏರ್‌ಸೆಲ್ ಒಪ್ಪಂದದ ಬಗ್ಗೆ, ಜ್ಞಾನವನ್ನು ಸುಲಭವಾಗಿ, ಅದರಲ್ಲೂ ಭಾರತೀಯ ಭಾಷೆಗಳಲ್ಲಿ ಹಂಚಿಕೊಳ್ಳುವತ್ತ ಹೇಗೆ ಈ ಯೋಜನೆ ಸಹಕರಿಸುತ್ತಿದೆ ಎಂದು ತಿಳಿಸಿದರು. ವಿಕಿಮೀಡಿಯ ಇತ್ತೀಚೆಗೆ ಲಭ್ಯವಾಗಿಸಿರುವ ಆಂಡ್ರಾಯ್ಡ್ ಆಫ್‌ನ ಬೀಟಾ ಆವೃತ್ತಿಯಲ್ಲಿ ವಿಕಿಪೀಡಿಯ ಸಂಪಾದನೆಗೂ ಅವಕಾಶವಿರುವುದನ್ನು, ಈ ಅಪ್ಲಿಕೇಷನ್ ಕೂಡ ‘ವಿಕಿಪೀಡಿಯ ಝೀರೋ’ ಯೋಜನೆ ಅಡಿಯಲ್ಲಿಯೇ ಡೇಟಾ ಉಪಯೋಗಿಸಿಕೊಳ್ಳುವುದನ್ನೂ ಅವರು ವಿವರಿಸಿದರು.
ಏರ್‌ಸೆಲ್‌ ಕರ್ನಾಟಕದ ವಾಣಿಜ್ಯ ವ್ಯವಹಾರಗಳ ಮುಖ್ಯಸ್ಥ ಕೆ.ಕಧಿರವನ್ ಏರ್‌ಟೆಲ್ ತನ್ನ ಡೇಟಾ ಪ್ಲಾನ್‌ಗಳ ಲಭ್ಯತೆ, ಏರ್‌ಟೆಲ್ ಹೇಗೆ ಇತರೆ ಟೆಲಿಕಾಂ ಕಂಪೆನಿಗಳಿಗಿಂತ ಭಿನ್ನ ಮತ್ತು ಅತ್ಯುತ್ತಮ ಸೇವೆಯನ್ನು (ಡೇಟಾ ಸಂಬಂಧಿತ) ನೀಡುತ್ತಿದೆ ಎಂದು ವಿವರಿಸಿದರು.ವಿಕಿಪೀಡಿಯನ್ ರಾಧಕೃಷ್ಣ, ಭಾರತೀಯ ವಿಕಿಪೀಡಿಯ ಭಾಷೆಗಳ ಲಭ್ಯತೆ ಮತ್ತು ಅದರ ಬಳಕೆಯ ಬಗ್ಗೆ ಬೆಳಕು ಚೆಲ್ಲಿದರೆ, ಬ್ಲಾಗಿಗರ ಪ್ರಶ್ನೆಗಳಿಗೆ ಕಾರ್ಯಕ್ರಮದಲ್ಲಿ ಲಭ್ಯವಿದ್ದ ಇತರೆ ವಿಕಿಪೀಡಿಯನ್ನರಾದ ಟೀನು ಚೆರಿಯನ್, ಸುಭಾಶಿಷ್, ಪವನಜ ಹಾಗೂ ಓಂಶಿವಪ್ರಕಾಶ್ ಉತ್ತರಿಸಿದರು.

ಏರ್‌ಟೆಲ್‌ನ ಕದಿರವನ್ ಮತ್ತು ಇತರರು ತಮ್ಮ ಸೇವೆಯ ಸಮಯದಲ್ಲಿ ಕೇಳಿಬರುವ ಫಾಂಟ್ ರೆಂಡರಿಂಗ್ ತೊಂದರೆ, ಭಾರತೀಯ ಭಾಷಾ ಕೀಬೋರ್ಡ್‌ಲಭ್ಯತೆ ಇತ್ಯಾದಿಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿ ತಮ್ಮ ಸಂದೇಹಗಳನ್ನು ನಿವಾರಿಸಿಕೊಂಡರು.

ಏರ್‌ಟೆಲ್ ಜೊತೆಗಿನ ಸಂಬಂಧವೃದ್ದಿ ಮತ್ತು ಇನ್ನೂ ಹೆಚ್ಚಿನ ಜನರಿಗೆ ಈ ಉಚಿತ ಸೇವೆಯ ಬಗ್ಗೆ ತಿಳಿಸುವ ಅವಶ್ಯಕತೆ, ವಿಕಿಪೀಡಿಯನ್ನರ ಜೊತೆಗೆ ಈ ಯೋಜನೆಯಲ್ಲಿ ಭಾಗವಹಿಸುವ ಅವಕಾಶಗಳ ಕುರಿತು ಅಧ್ಯಯನ ಮಾಡಲು ಹಾಗೂ ವಿಚಾರ ವಿನಿಮಯ ಮಾಡಿಕೊಳ್ಳಲು ವಿಕಿಮೀಡಿಯದ ಕ್ಯಾರೋಲಿನ್ ಇತ್ತೀಚೆಗೆ ಭಾರತದ ಪ್ರವಾಸದಲ್ಲಿದ್ದು, ಅವರ ಬೆಂಗಳೂರಿನ ಪ್ರವಾಸ ಮೊಬೈಲ್‌ ಮೂಲಕ ಮುಕ್ತ ಜ್ಞಾನದ ಹಂಚಿಕೆಯ ಮುಂದಿನ ದಿನಗಳ ಬಗ್ಗೆ ಆಶಾಕಿರಣ ಮೂಡಿಸಿತು.

ಜಾಹೀರಾತು Divi WordPress Theme

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಹಂಚಿಕೆಯ ಬಗ್ಗೆ

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಇವನ್ನೂ ಓದಿ

Related

ಕನ್ನಡ ವಿಕಿಪೀಡಿಯದಲ್ಲೀಗ ವಿಷಯ ಅನುವಾದಕ (ContentTranslator) ಲಭ್ಯ

ಕನ್ನಡ ವಿಕಿಪೀಡಿಯಕ್ಕೆ (https://kn.wikipedia.org) ಲೇಖನಗಳನ್ನು ಸೇರಿಸಿ ಎಂದಾಗ ತಕ್ಷಣ ಯಾವ ವಿಷಯ ಸೇರಿಸಬಹುದು ಜೊತೆಗೆ ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಸಾಮಾನ್ಯ. ಈಗಾಗಲೇ ಕನ್ನಡಲ್ಲೇ ಲಭ್ಯವಾಗಿಸಿರುವ ವಿಕಿ ಸಂಪಾದನೆಯ ಮಾಹಿತಿ, ವಿಡಿಯೋ ಇತ್ಯಾದಿಗಳನ್ನು ತೋರಿಸಿದಾಗ ಕೂಡ ನಮ್ಮಿಂದ ಇದು ಸಾಧವೇ ಎನ್ನುವ ಪ್ರಶ್ನೆಯೊಂದಿಗೆ...

read more

ಕನ್ನಡ ಪುಸ್ತಕಗಳ ಹುಡುಕಿ ಬನ್ನಿ – ಸಮೂಹ ಸಂಚಯ

ಕನ್ನಡ ಪುಸ್ತಕಗಳನ್ನು ಸುಲಭವಾಗಿ ಇಂಟರ್ನೆಟ್‌ನಲ್ಲಿ ಮತ್ತು ವಿಕಿಪೀಡಿಯದಲ್ಲಿ ಹುಡುಕುವಂತೆ ಮಾಡಲು ಹೊರಟಿರುವ ಸಮೂಹ ಸಂಚಯ - ಓಸ್ಮಾನಿಯ ಯುನಿವರ್ಸಿಟಿಯ ಡಿಜಿಟಲ್ ಲೈಬ್ರರಿಯಲ್ಲಿರುವ ಕನ್ನಡ ಪುಸ್ತಕಗಳ ಹೆಸರು, ಲೇಖಕರು ಹಾಗೂ ಪ್ರಕಾಶಕರ ಹೆಸರನ್ನು ಕಂಗ್ಲೀಷ್‌ನಿಂದ ಕನ್ನಡೀಕರಿಸುತ್ತಿದೆ. ೫೦೦೦ದಷ್ಟು ಪುಟಗಳನ್ನು...

read more

ನಿರಂಜನರ ಕೃತಿಗಳು CC-BY-SA 4.0 ಪರವಾನಗಿಯೊಂದಿಗೆ ಮರುಪ್ರಕಟಗೊಳ್ಳಲಿವೆ

ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ನಿರಂಜನರ ಬಹುಪಾಲು ಕೃತಿಗಳು CC-BY-SA 4.0 ಪರವಾನಗಿಯೊಂದಿಗೆ ಮರುಪ್ರಕಟಗೊಳ್ಳಲಿವೆಯೆಂದು ಸಿಐಎಸ್-ಎ೨ಕೆಯ ಸಹಯೋಗದೊಂದಿಗೆ ಕನ್ನಡ ವಿಕಿಪೀಡಿಯ ಬಳಗವು ಹಂಚಿಕೊಳ್ಳಲು ಹರ್ಷಿಸುತ್ತದೆ. ನಿರಂಜನ (೧೯೨೪-೧೯೯೨) ,  ಇದು ಕುಳಕುಂದ ಶಿವರಾವ್ ಅವರ ಲೇಖನಾಮ. ಇವರು ೨೦ನೇ ಶತಮಾನದ ಪ್ರಮುಖ ಲೇಖಕ ಮತ್ತು...

read more
Share This