ಪುಸ್ತಕ: ಕಂಪ್ಯೂಟರ್ ಮತ್ತು ಕನ್ನಡ

Computer&Kannada

ಪದವಿ ವಿದ್ಯಾರ್ಥಿಗಳು ಮತ್ತು ಕಂಪ್ಯೂಟರಿನಲ್ಲಿ ಕನ್ನಡ ಬಳಸುವ ಆಸಕ್ತಿ ಇರುವವರಿಗಾಗಿ ಪರಿಚಯಾತ್ಮಕ ಪಠ್ಯಪುಸ್ತಕ “ಕಂಪ್ಯೂಟರ್ ಮತ್ತು ಕನ್ನಡ”ವನ್ನು ಮಿತ್ರಮಾಧ್ಯಮ ತಂಡ ನೆನ್ನೆ ಹೊರತಂದಿದೆ. ಸೆಪ್ಟೆಂಬರ್ ೨೯, ೨೦೧೪ರಂದು ಸುರಾನಾ ಕಾಲೇಜಿನಲ್ಲಿ ನೆಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಖ್ಯಾತ ಕನ್ನಡ ಗಾಯಕ ‘ರಘು ದೀಕ್ಷಿತ್’ ಪುಸ್ತಕವನ್ನು ಬಿಡುಗಡೆ ಮಾಡಿದರು. ಈ ಪುಸ್ತಕ ಕ್ರಿಯೇಟೀವ್ ಕಾಮನ್ಸ್ ಪರವಾನಗಿಯಡಿ ಲಭ್ಯವಿದ್ದು, ಬೇಳೂರು ಸುದರ್ಶನ, ಟಿ.ಜಿ ಶ್ರೀನಿಧಿ, ಡಾ. ಯು.ಬಿ ಪವನಜ, ಡಾ. ಎ. ಸತ್ಯನಾರಾಯಣ ಹಾಗೂ ನನ್ನ (ಓಂಶಿವಪ್ರಕಾಶ್) ಲೇಖನಗಳನ್ನು ಒಳಗೊಂಡಿದೆ.

ಈ ಪುಸ್ತಕದಲ್ಲಿನ ಮಾಹಿತಿಯನ್ನು ಪದವಿ ವಿದ್ಯಾರ್ಥಿಗಳಿಗೆ ಕಂಪ್ಯೂಟರಿನಲ್ಲಿ ಕನ್ನಡ ಬಳಸುವ ಮಾಹಿತಿಯನ್ನು ಕಲಿಸುವ ಪ್ರಾಯೋಗಿಕ ಯೋಜನೆಯಡಿ ಸಿದ್ದಪಡಿಸಲಾಗಿದೆ.  ಸುರಾನಾ ಕಾಲೇಜಿನಲ್ಲಿ ಕಳೆದ ಎರಡು- ಮೂರುವರ್ಷಗಳಿಂದ ನೆಡೆಯುತ್ತಿರುವ ಈ ಪ್ರಾಯೋಗಿಕ ತರಗತಿಗಳನ್ನು ನೆಡೆಸಿಕೊಟ್ಟ ತಂತ್ರಜ್ಞರೇ ಇವುಗಳನ್ನು ಬರೆದಿರುವುದು ಈ ಪುಸ್ತಕದ ವಿಶೇಷ.

ಈ ಪುಸ್ತಕದಲ್ಲಿನ ಲೇಖನಗಳು ಇಂತಿವೆ:
ಕಂಪ್ಯೂಟರಿನಲ್ಲಿ ಕನ್ನಡದ ಬಳಕೆ – ಡಾ. ಎ. ಸತ್ಯನಾರಾಯಣ
ಕನ್ನಡ ಮತ್ತು ಡಿಟಿಪಿ – ಬೇಳೂರು ಸುದರ್ಶನ
ಅಂತರಜಾಲ ಮತ್ತು ಕನ್ನಡ – ಟಿ.ಜಿ ಶ್ರೀನಿಧಿ
ಮುಕ್ತ/ಸ್ವತಂತ್ರ ತಂತ್ರಾಂಶ ಚಳುವಳಿ – ಓಂಶಿವಪ್ರಕಾಶ್
ಯುನಿಕೋಡ್ : ಏಕೆ? ಹೇಗೆ? – ಡಾ. ಯು.ಬಿ ಪವನಜ

 

IMG_8414

ಮಿತ್ರಮಾಧ್ಯಮದ ಉಚಿತ ಪುಸ್ತಕ ಸಂಸ್ಕೃತಿ ಅಭಿಯಾನದ ಅಂಗವಾಗಿ ಬಿಡುಗಡೆಯಾಗಿರುವ ಈ ಪುಸ್ತಕವನ್ನು ಆಸಕ್ತರು https://freebookculture.com ನಿಂದ *ಉಚಿತವಾಗಿ* ಪಡೆದುಕೊಳ್ಳಬಹುದು.

ಕಾರ್ಯಕ್ರಮದ ಮತ್ತಷ್ತು ಚಿತ್ರಗಳು ಇಲ್ಲಿವೆ.

 

ಮಿತ್ರಮಾಧ್ಯಮದ ಚಟುವಟಿಕೆಗಳನ್ನು ಬೆಂಬಲಿಸುವ ರಿವರ್‌ಥಾಟ್ಸ್‌ ಸಂಸ್ಥೆಯ ಕಚೇರಿಯಲ್ಲಿ ಈ ಪುಸ್ತಕದ ಮುದ್ರಿತ ಪ್ರತಿಗಳು ಸಿಗುತ್ತವೆ:

ರಿವರ್‌ಥಾಟ್ಸ್‌ ಮೀಡಿಯಾ ಪ್ರೈವೇಟ್‌ ಲಿಮಿಟೆಡ್‌
ನಂ ೭೨/೧, ಮೂರನೆಯ ಮಹಡಿ (ಲಿಫ್ಟ್‌ ಇಲ್ಲ!)
೧ನೇ ಕ್ರಾಸ್‌, ಶಂಕರಪಾರ್ಕ್‌, ಶಂಕರಪುರಂ
ಬೆಂಗಳೂರು ೫೬೦೦೦೪
ಕಚೇರಿ ದೂರವಾಣಿ: ೨೨೪೨೬೪೩೩
ನಕಾಶೆ ಇಲ್ಲಿದೆ (ಕೊಂಡಿ ಕ್ಲಿಕ್‌ ಮಾಡಿರಿ) https://goo.gl/maps/1tzlS

ಕಂಪ್ಯೂಟರ್/ಮೊಬೈಲ್/ಟ್ಯಾಬ್ಲೆಟ್ಟಿನಲ್ಲಿ ಓದಬಯಸುವವರಿಗೂ ಇದು ಇಲ್ಲಿ ಲಭ್ಯವಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This