ಕನ್ನಡದಲ್ಲಿ ಡಿಟಿಪಿ ಮಾಡಲು ಇದುವರೆಗೆ ಮುಕ್ತ ಹಾಗೂ ಸ್ವತಂತ್ರ ತ್ರಂತ್ರಾಂಶದಲ್ಲಿ ( Free & Open Source Software) ಇದ್ದ ಕೊರತೆಯನ್ನು ಕೊನೆಗೂ ಸ್ಕ್ರೈಬಸ್ ತುಂಬಿದೆ. ಸ್ಕ್ರೈಬಸ್‌ನ ಡೆವೆಲಪ್‌ಮೆಂಟ್ ಆವೃತ್ತಿ ೧.೫.೩ರಲ್ಲಿ ಕನ್ನಡದ ಜೊತೆಗೆ ಇನ್ನೂ ಅನೇಕ ಕ್ಲಿಷ್ಟ ಪದಜೋಡಣೆ ಅವಶ್ಯವಿದ್ದ ಭಾರತೀಯ ಭಾಷೆಗಳಿಗೆ ಬೆಂಬಲವನ್ನು ಒದಗಿಸಲಾಗಿದೆ. ಈ ಕೆಳಗಿನ ಚಿತ್ರಗಳಲ್ಲಿ ಸ್ಕ್ರೈಬಸ್ ಜೊತೆ ಕನ್ನಡ ಮೂಡುವುದನ್ನು ಲಿನಕ್ಸ್, ವಿಂಡೋಸ್ ಜೊತೆಗೆ ಮ್ಯಾಕ್‌ನಲ್ಲೂ ಕಾಣಬಹುದು.
ಸ್ಕ್ರೈಬಸ್‌ನ ಈ ಆವೃತ್ತಿಯ ಬಗ್ಗೆ ಈ ಕೊಂಡಿಯಲ್ಲಿ ಮತ್ತಷ್ಟು ವಿಷಯ ತಿಳಿದುಕೊಳ್ಳಬಹುದು : https://wiki.scribus.net/canvas/1.5.3_Release
ಈ ಆವೃತ್ತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಲು ಈ ಕೊಂಡಿ ಬಳಸಿ: https://www.scribus.net/downloads/unstable-branch/
ಈ ತಂತ್ರಾಂಶವನ್ನು ಬಳಸಿ, ಇದರಲ್ಲಿರುವ ನ್ಯೂನ್ಯತೆಗಳನ್ನು ತಿಳಿಸಿ, ಸರಿಪಡಿಸೋಣ. ಆಡೋಬ್ ಫೋಟೋಶಾಪ್ ಇತ್ಯಾದಿಗಳ ಪೈರೇಟೆಡ್ ಖಾಸಗೀ ತಂತ್ರಾಂಶಗಳನ್ನು ಡಿಟಿಪಿ ಕೇಂದ್ರಗಳಲ್ಲಿ ಬಳಸುವುದನ್ನು ತಪ್ಪಿಸಲು ಇದು ಸಹಕಾರಿ.
ನಿಮ್ಮ ಪ್ರತಿಕ್ರಿಯೆಗಳು