ಉಬುಂಟು ೧೬.೦೪ ಮತ್ತು ೧೮.೦೪ ನಲ್ಲಿ ಕನ್ನಡ ಟೈಪಿಸುವುದು ಹೇಗೆ?

by | Jun 26, 2018 | ಇನ್ಸ್ಟಾಲೇಷನ್ | 0 comments

ಉಬುಂಟುವಿನ ಇತ್ತೀಚಿನ ಆವೃತ್ತಿಗಳಾದ ೧೬.೦೪ ಮತ್ತು ೧೮.೦೪ನಲ್ಲಿ ಕನ್ನಡ ಮತ್ತು ಇತರೆ ಭಾರತೀಯ ಭಾಷೆಗಳು ಟೈಪಿಸುವುದಕ್ಕಾಗಿ ಕೆಳಗಿನ ಸೂಚನೆಗಳನ್ನು ಪಾಲಿಸಬಹುದು.

ಮೊದಲು ನಿಮ್ಮ ಸಿಸ್ಟಂ ಸೆಟ್ಟಿಂಗ್ಸ್‌ನ Language Support ನಲ್ಲಿ ಕನ್ನಡವನ್ನು ಸಕ್ರಿಯಗೊಳಿಸಿ. ಇದು ಕನ್ನಡ ಫಾಂಟ್ಸ್ ಇತ್ಯಾದಿಗಳನ್ನು ಇನ್ಸ್ಟಾಲ್ ಮಾಡುತ್ತದೆ. ಇಲ್ಲಿಯೇ ನಿಮಗೆ ಇನ್‌ಪುಟ್ ವಿಧಾನ iBus ಎಂದು ಸೇರಿಸುವ ಅವಕಾಶ ಇದೆ.

ಇದಾದ ನಂತರ ಟರ್ಮಿನಲ್‌ನಲ್ಲಿ ibus-m17n, m17n-contrib ಮತ್ತು fonts-noto ಸಾಪ್ಟ್‌ವೇರ್‌ಗಳನ್ನು ಇನ್ಸ್ಟಾಲ್ ಮಾಡಿಕೊಳ್ಳಿ.

sudo apt install ibus-m17n m17n-contrib fonts-noto

ನಂತರ ಲಾಗ್‌ಔಟ್ ಆಗಿ, ಲಾಗಿನ್ ಆಗಿ. ಮತ್ತೆ ಸಿಸ್ಟಂ ಸೆಟ್ಟಿಂಗ್ಸ್ ‌ನಲ್ಲಿ Text Entry ಯಲ್ಲಿ ಕನ್ನಡದ ಕೀಬೋರ್ಡ್‌ಗಳನ್ನು ಸೇರಿಸಿಕೊಳ್ಳಿ. ಭಾಷಾ ಆಯ್ಕೆಗಳನ್ನು ಸ್ಟೇಟಸ್ ಬಾರ್‌ನಲ್ಲಿ ತೋರಿಸುವ ಆಯ್ಕೆ ಟಿಕ್ ಮಾಡಿ. ಜೊತೆಗೆ ಭಾಷೆಯ ಆಯ್ಕೆಗೆ ಮೀಸಲಿಟ್ಟಿರುವ ಕೀಬೋರ್ಡ್ ಶಾರ್ಟ್‌ಕಟ್‌ಗಳನ್ನು ಅಲ್ಲಿಯೇ ನೋಡಿಕೊಳ್ಳಿ. ಬೇಕಿದ್ದಲ್ಲಿ ಅದನ್ನು ಬದಲಿಸಬಹುದು ಕೂಡ. ಇದು ಸಾಮಾನ್ಯವಾಗಿ ವಿಂಡೋಸ್ ಕೀ + ಸ್ಪೇಸ್ ಬಾರ್ ಆಗಿರುತ್ತದೆ (Super + Space).

ಈಗ ಯಾವುದೇ ಟೆಕ್ಸ್ಟ್ ಎಡಿಟರ್ ತೆರೆದು ವಿಂಡೋಸ್ ಕೀ + ಸ್ಪೇಸ್ ಬಾರ್ ಕ್ಲಿಕ್ ಮಾಡಿ ಕನ್ನಡ ಟೈಪಿಸಲು ಆರಂಭಿಸಿ. ಬರಹ ಬರುವವರಿಗೆ – kn-itrans, ನುಡಿಗೆ Kagapa / KPRao ಜೊತೆಗೆ inscript ಕೀಬೋರ್ಡ್‌ಗಳನ್ನು ಜೋಡಿಸುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ.

 

ಜಾಹೀರಾತು Divi WordPress Theme

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಹಂಚಿಕೆಯ ಬಗ್ಗೆ

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಇವನ್ನೂ ಓದಿ

Related

ಟೆಸರಾಕ್ಟ್ ಓಸಿಆರ್ ಅನ್ನು ವಿಂಡೋಸ್‌ನಲ್ಲಿ ಬಳಸುವುದು

ಟೆಸರಾಕ್ಟ್ ಓಸಿಆರ್ ಅನ್ನು ವಿಂಡೋಸ್‌ನಲ್ಲಿ ಬಳಸಲು ಈ ಕೆಳಗಿನ ಮಾಹಿತಿ ನಿಮಗೆ ಉಪಯುಕ್ತವಾಗಬಹುದು. ಟೆಸರಾಕ್ಟ್ ಬಳಸಲು ಈ ಕೆಳ‍ಗಿನ ತಂತ್ರಾಂಶಗಳನ್ನು ಮೊದಲು ಇನ್ಸ್ಟಾಲ್ ಮಾಡಿಕೊಳ್ಳಿ. ‍1. Java Version 13 - https://www.oracle.com/technetwork/java/javase/downloads/jdk13-downloads-5672538.html 2....

read more

Tesseract (ಟೆಸೆರಾಕ್ಟ್) ಮತ್ತು ಕನ್ನಡ ಓ.ಸಿ.‌ಆರ್

‍‍‍‍‍ಕಳೆದ ತಿಂಗಳಿನಿಂದ ಕನ್ನಡ ಓ.ಸಿ.‌ಆರ್ (ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್) ಗಾಗಿ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶವಾದ ಟೆಸೆ‍ರಾಕ್ಟ್‍ (https://github.com/tesseract-ocr/tesseract & https://en.wikipedia.org/wiki/Tesseract_(software)) ಬಳಸಿದ್ದು ಮತ್ತು ಅದು ಕನ್ನಡದ ಮಟ್ಟಿಗೆ...

read more

ಲಿಬ್ರೆ ಆಫೀಸ್‍ನಲ್ಲಿ ಕನ್ನಡ

ಲಿಬ್ರೆ ಆಫೀಸ್‍ ತಂತ್ರಾಂಶದಲ್ಲಿ ಕನ್ನಡವನ್ನು ಟೈಪಿಸುವ ಮುನ್ನ ಕೆಲ ಸಿದ್ದತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಭಾರತೀಯ ಭಾಷೆಗಳು ಸರಿಯಾಗಿ ಕಾಣಬೇಕಾದರೆ, ಯಾವುದೇ ತಂತ್ರಾಂಶದಲ್ಲಿ ಒಳ್ಳೆಯ ಅಕ್ಷರ ಶೈಲಿಯ ಜೊತೆಗೆ ಕಾಂಪ್ಲೆಕ್ಸ್ ಟೆಕ್ಸ್ಟ್ ಲೇಔಟ್ ಬೆಂಬಲವೂ ಅತ್ಯಗತ್ಯ. ಇದನ್ನು ಲಿಬ್ರೆ ಆಫೀಸ್‍ನಲ್ಲಿ ಪೂರ್ವನಿಯೋಜಿತವಾಗಿ...

read more
Share This