ಲಿಬ್ರೆ ಆಫೀಸ್ ತಂತ್ರಾಂಶದಲ್ಲಿ ಕನ್ನಡವನ್ನು ಟೈಪಿಸುವ ಮುನ್ನ ಕೆಲ ಸಿದ್ದತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಭಾರತೀಯ ಭಾಷೆಗಳು ಸರಿಯಾಗಿ ಕಾಣಬೇಕಾದರೆ, ಯಾವುದೇ ತಂತ್ರಾಂಶದಲ್ಲಿ ಒಳ್ಳೆಯ ಅಕ್ಷರ ಶೈಲಿಯ ಜೊತೆಗೆ ಕಾಂಪ್ಲೆಕ್ಸ್ ಟೆಕ್ಸ್ಟ್ ಲೇಔಟ್ ಬೆಂಬಲವೂ ಅತ್ಯಗತ್ಯ. ಇದನ್ನು ಲಿಬ್ರೆ ಆಫೀಸ್‍ನಲ್ಲಿ ಪೂರ್ವನಿಯೋಜಿತವಾಗಿ ಸಕ್ರಿಯಗೊಳಿಸಲಾಗಿರುವುದಿಲ್ಲ, ಹಾಗಾಗಿ ಈ ಕೆಳಗಿನ ಸೂಚನೆಗಳನ್ನು ಪಾಲಿಸಿ –
ಲಿಬ್ರೆ ಆಫೀಸ್ ಮೆನುವಿನಲ್ಲಿ Tools->Options->Language Settings->Languages ಗೆ ಹೋಗಿ, Complex Text Layout ಅನ್ನು ಆಯ್ಕೆ ಮಾಡಿ. ನಂತರ ಅದರಲ್ಲಿ Kannada ವನ್ನು ಆರಿಸಿ, OK ಮೇಲೆ ಕ್ಲಿಕ್ ಮಾಡಿ.
ಮತ್ತೆ ಅದೇ Tools->Options ನಲ್ಲಿ LibreOffice Writer ಅಡಿಯಲ್ಲಿ Basic Fonts (CTL) ಮೇಲೆ ಕ್ಲಿಕ್ ಮಾಡಿ. ಎಲ್ಲಾ Fonts ಗಳಿಗೂ Noto Sans Kannada ಅಕ್ಷರ ಶೈಲಿಯನ್ನು ಆಯ್ಕೆಮಾಡಿ ಮತ್ತು OK ಮೇಲೆ ಕ್ಲಿಕ್ ಮಾಡಿ.
ಈವಾಗ ಲಿಬ್ರೆ ಆಫೀಸ್‍ನಲ್ಲಿ ಕನ್ನಡವನ್ನು ಟೈಪಸಲು ಬಳಸಬಹುದು.
ನಿಮ್ಮ ಪ್ರತಿಕ್ರಿಯೆಗಳು