ಲಿನಕ್ಸ್ ವಾಯ್ಸ್ – ಹೊಸ ಲಿನಕ್ಸ್ ಮ್ಯಾಗಜೀನ್

ಲಿನಕ್ಸ್ ಬಳಕೆದಾರರಿಗೆ ಎಂದೇ ಮುದ್ರಿತವಾಗುತ್ತಿರುವ ಹೊಸ ಮ್ಯಾಗಜೀನ್ ಲಿನಕ್ಸ್ ವಾಯ್ಸ್, ಇನ್ನೇನು ಮುದ್ರಿತ ಪತ್ರಿಕೆಗಳೂ ಹೊರಬರುವುದು ಕಷ್ಟ ಎಂದು ಎಲ್ಲರೂ ಮಾತನಾಡುವ ಸಮಯದಲ್ಲಿ ಎಲ್ಲರ ಹುಬ್ಬೇರಿಸುವಂತೆ ಮಾಡಿರುವುದಂತೂ ನಿಜ. ಲಿನಕ್ಸ್ ವಾಯ್ಸ್ ಹಿಂದಿರುವ ನಾಲ್ಕು ಜನರಲ್ಲಿ ಒಬ್ಬರಾಗಿರುವ ಗ್ರಹಾಮ್ ಮ್ಯಾರಿಸನ್ ಅವರ ಇಂಟರ್ವ್ಯೂ ಈ ಮ್ಯಾಗಜೀನ್ ಬಗ್ಗೆ ಹೆಚ್ಚಿನ ಮಾಹಿತಿ ಒದಗಿಸುತ್ತದೆ.

ನೋವೆನಾ ಓಪನ್‌ಸೋರ್ಸ್ ಲ್ಯಾಪ್‌ಟಾಪ್

ನೋವೆನಾ ಓಪನ್‌ಸೋರ್ಸ್ ಲ್ಯಾಪ್‌ಟಾಪ್

ಬನ್ನೀ ಸ್ಟುಡಿಯೋಸ್‌ನ ಬನ್ನೀ ಮತ್ತು ಕ್ಸಾಬ್ಸ್ ಮುಕ್ತ ಲ್ಯಾಪ್‌ಟಾಪ್ ಒಂದನ್ನು ಪ್ರಸ್ತುತ ಪಡಿಸುತ್ತಿದ್ದಾರೆ.

ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳಂತೆಯೇ, ಹಾರ್ಡ್‌ವೇರ್ ಅನ್ನೂ ಕೂಡ ತಯಾರಿಸಲು ಯಾರಿಗಾದರೂ ಸಾಧ್ಯವಾಗಬೇಕು ಎಂಬ ಉದ್ದೇಶ ಹೊಂದಿರುವ ಮುಕ್ತ ಯಂತ್ರಾಂಶ (ಓಪನ್ ಹಾರ್ಡ್ವೇರ್/Open Hardware) ಪ್ರಾಜೆಕ್ಟ್‌ಗಳಲ್ಲಿ ನೋವೆನಾ ಕೂಡ ಒಂದು.

ಹವ್ಯಾಸಿ ಯೋಜನೆಯಾಗಿ ಪ್ರಾರಂಭವಾದ ನೋವೆನಾ, ತನ್ನದೇ ಗ್ರಾಹಕರನ್ನು ಕೂಡ ಕಂಡುಕೊಳ್ಳಲು ಕ್ರೌಡ್ ಸೋರ್ಸಿಂಗ್ ಪ್ರಚಾರವನ್ನು ಪ್ರಾರಂಭಿಸಿದೆ. ಈ ಯೋಜನೆಯನ್ನು ಬೆಂಬಲಿಸಲೂ, ನಿಮಗೆ ಬೇಕಾದಂತೆ ಕೆಲಸ ಮಾಡಬಲ್ಲ, ಎಲ್ಲ ವ್ಯವಸ್ಥೆಗಳನ್ನು ಹೊಂದಿರುವ ಲ್ಯಾಪ್‌ಟಾಪ್ ಮತ್ತು ಅದರ ಪೂರ್ಣ ರಚನೆಯನ್ನು ಪಡೆಯುವ ಅವಕಾಶವಿದೆ.

ಇಂತದ್ದೊಂದು ಲ್ಯಾಪ್‌ಟಾಪ್ ನೀವೇ ತಯಾರಿಸಿಕೊಳ್ಳುತ್ತೇವೆ ಎಂದರೆ, ನೋವೆನಾದ ಪೂರ್ಣ ಡಿಸೈನ್ ಮತ್ತು ಇತರೆ ಮಾಹಿತಿ ಈ ಕೊಂಡಿಯಲ್ಲಿ ಲಭ್ಯವಿದೆ. ಎಲೆಕ್ಟ್ರಾನಿಕ್ ಮತ್ತು ಕಂಪ್ಯೂಟರ್ ಎಂಜಿನಿಯರಿಂಗ್ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಇದೊಂದು ಅತ್ಯುತ್ತಮ ಮಾಹಿತಿ. ಈ ಹಿಂದೆ ಅನೇಕರು ಕೆಲಸ ಮಾಡಿರುವ ಯೋಜನೆಗಳಲ್ಲಿ ತೊಡಗಿಕೊಳ್ಳುವ ಬದಲು, ಕಡಿಮೆ ಬೆಲೆಯ, ಸುಲಭವಾಗಿ ತಯಾರಿಸಬಲ್ಲ ಹಾರ್ಡ್ವೇರ್‌ಗಳ ತಯಾರಿಕೆ ಕಲಿತು, ಅವನ್ನು ಉತ್ಪಾದಿಸುವವರೆಗೆ ಸ್ವಾವಲಂಬನೆ ಹೊಂದಲು ಮುಕ್ತ ಯಂತ್ರಾಂಶಗಳು ಸಹಕಾರಿ.

ಚಿತ್ರ ಮತ್ತು ವಿಡಿಯೋ: Andrew (bunnie) Huang, licensed under a Creative Commons Attribution-ShareAlike 3.0 Unported.

ವಿಡಿಯೋ: ಸ್ವತಂತ್ರ ತಂತ್ರಾಂಶದ ಹಾಡು

೧೯೯೧ರ ಬಾರ್ಡಿಕ್ ಸರ್ಕಲ್ (ಒಟ್ಟಿಗೆ ಸೇರಿ ಹಾಡುಗಳನ್ನು ರಚಿಸಿ ಹಾಡುವ ಒಂದು ಕೂಟ) ಒಂದರಲ್ಲಿ ರಿಚರ್ಡ್ ಸ್ಟಾಲ್ಮನ್ ಬಲ್ಗೇರಿಯನ್‌ನ ಸೋಡಿ ಮೊಮ ಜನಪದ ಗೀತೆಯ ತಾಳಕ್ಕೆ ಸರಿಹೊಂದುವಂತೆ ರಚಿಸಿದ ಸ್ವತಂತ್ರ ತಂತ್ರಾಂಶ ಗೀತೆಯನ್ನು ಅವರೇ ಹಾಡಿರುವ ಒಂದು ದೃಶ್ಯ ನಿಮಗಾಗಿ.

httpv://www.youtube.com/watch?v=9sJUDx7iEJw

ಈ ಹಾಡಿನ ಸಾಹಿತ್ಯ ಈ ಕೆಳಕಂಡಂತಿದೆ.

Join us now and share the software;
You’ll be free, hackers, you’ll be free.
Join us now and share the software;
You’ll be free, hackers, you’ll be free.

Hoarders can get piles of money,
That is true, hackers, that is true.
But they cannot help their neighbors;
That’s not good, hackers, that’s not good.

When we have enough free software
At our call, hackers, at our call,
We’ll kick out those dirty licenses
Ever more, hackers, ever more.

Join us now and share the software;
You’ll be free, hackers, you’ll be free.
Join us now and share the software;
You’ll be free, hackers, you’ll be free.

ಎಂಬೆಡೆಡ್ ಲಿನಕ್ಸ್‌ಗೆ ಒಂದು ಪರಿಚಯ

ಲಿನಕ್ಸ್ ಫೌಂಡೇಷನ್ ಲಿನಕ್ಸ್ ಕಲಿಕೆಯನ್ನು ಸುಲಭಗೊಳಿಸಲು ಅನೇಕ ವೆ‌ಬ್ಬಿನಾರ್ ‌(Webinar) ಅಂದರೆ ಆನ್ಲೈನ್ ವಿಡಿಯೋ ಸಮ್ಮಿಲನ/ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತದೆ. ಈ ವೆಬ್ಬಿನಾರ್‌ಗಳಲ್ಲಿ ಇತ್ತೀಚೆಗೆ ಎಂಬೆಡೆಡ್ ‌ಲಿನಕ್ಸ್ (Embedded Linux) ಬಗ್ಗೆ ಪರಿಚಯವನ್ನು ನೀಡಲಾಯಿತು. ನಮ್ಮ ದಿನನಿತ್ಯದ ಕೆಲಸಕಾರ್ಯಗಳಿಗೆ ಬಳಸುವ ಅದೆಷ್ಟೋ ಯಂತ್ರಗಳು ಈಗ ತಮ್ಮೊಳಗೇ ಪುಟ್ಟ ಕಂಪ್ಯೂಟರ್ ಚಿಪ್‌ಗಳನ್ನು ಹೊಂದಿದ್ದು ಲಿನಕ್ಸ್ ಆಪರೇಟಿಂಗ್ ಸಿಸ್ಟಂ ಅನ್ನು ಬಳಸುತ್ತವೆ. ನಾವು ನೆನಪಿನಲ್ಲಿಟ್ಟುಕೊಂಡು ಮಾಡಬೇಕಾದ ಅದೆಷ್ಟೋ ಕಾರ್ಯಗಳನ್ನು ಇವು ಮಾಡಬಲ್ಲವು. ಮೊಬೈಲ್, ವಾಚುಗಳು, ಕಾರಿನ ಆಟೋಮೊಬೈಲ್ ರಾಸೆಸರ್‌ಗಳು ಹೀಗೆ  ಹತ್ತಾರು ಯಂತ್ರಗಳನ್ನು ನಾವಿಲ್ಲಿ ಪಟ್ಟಿ ಮಾಡಬಹುದು.

೩೦ ನಿಮಿಷದ ಈ ವಿಡಿಯೋವನ್ನು ನೀವು ಈ ಕೊಂಡಿಯಲ್ಲಿ ಕಾಣಬಹುದು.  ಎಂಬೆಡೆಡ್ ‌ಲಿನಕ್ಸ್  ಏನು? ಕಲಿಯುವುದು ಹೇಗೆ? ಅದರ ಅಭಿವೃದ್ದಿಗೆ ಬೇಕಿರುವ ಅಗತ್ಯತೆಗಳು ಹೀಗೆ ಹತ್ತು ಹಲವು ವಿಷಯಗಳನ್ನು ೩೦ ನಿಮಿಷದ ಈ ವಿಡಿಯೋದಲ್ಲಿ ಲಿನಕ್ಸ್ ಫೌಂಡೇಷನ್ ಟ್ರೈನಿಂಗ್ ಮ್ಯಾನೇಜರ್ Jerry Cooperstein ನಿಮಗೆ ತಿಳಿಸಿಕೊಡುತ್ತಾರೆ.