ಉಬುಂಟು ೯.೦೪ ಕೈಗೆ ಸಿಕ್ಕಾಯ್ತು ಅನ್ನಿಸುತ್ತೆ ಹಲವರಿಗೆ.. ಕೆನಾನಿಕಲ್ ಕಂಪನಿ ಅದರ ಒಂದು ಪ್ರತಿಯನ್ನ ನನಗೂ ಕಳಿಕೊಟ್ಟಿದೆ. ಸರಿ, ಕೈಗೆ ಸಿ.ಡಿ ಎನೋ ಸಿಕ್ಕಿದೆ. ಹಳೆಯ ಉಬುಂಟುವಿನಿಂದ ೯.೦೪ ಆವೃತ್ತಿಗೆ ಹೇಗೆ ಅಪ್ಡೇಟ್ ಮಾಡಿಕೊಳ್ಳೋದು ಅನ್ನೊ ಪ್ರಶ್ನೆ ಇರಬೇಕಲ್ಲ ನಿಮ್ಮ ಮನಸಿನಲ್ಲಿ? ಈ ಲೇಖನ ಆ ಪ್ರಶ್ನೆಗೆ ಉತ್ತರ ಕೊಡಲಿದೆ.
ನಿಮ್ಮ ಉಬುಂಟುವಿನ ಆವೃತ್ತಿ ಯಾವ್ದು ಅಂತ ಹೇಗೆ ಕಂಡು ಕೊಳ್ತೀರಾ?
System -> About Ubuntu ಈ ಮೆನು ಆಯ್ಕೆ ನಿಮಗೆ ಅದರ ಉತ್ತರ ಕೊಡುತ್ತೆ.
ನನ್ನ ಹತ್ರ ಉಬುಂಟು ೮.೦೪ ಇದೆ ಹ್ಯಾಗೆ ಇದನ್ನು ೯.೦೪ ಗೆ ಅಪ್ಡೇಟ್ ಮಾಡಿಕೊಳ್ಳೋದು? ಇದು ಸಾಧ್ಯಾನಾ?
ಖಂಡಿತ ಅಪ್ಡೇಟ್ ಮಾಡಿಕೊಳ್ಳಬಹುದು. ಉಬುಂಟು ಆವೃತ್ತಿಯನ್ನು ಆಗಾಗ ಅಪ್ಡೇಟ್ ಮಾಡಿಕೊಳ್ಳುತ್ತಿದ್ದರೆ ಈ ಕೆಲಸ ಸುಲಭವಾಗುತ್ತೆ.
ಉಬುಂಟುವನ್ನು ನೇರವಾಗಿ ೮.೦೪ ಇಂದ ೯.೦೪ ಗೆ ಅಪ್ಡೇಟ್ ಮಾಡಿಕೊಳ್ಳಲಿಕ್ಕೆ ಸಾಧ್ಯವಿಲ್ಲ. ಮೊದಲು ಅದನ್ನು ೮.೧೦ ಗೆ ಅಪ್ಡೇಟ್ ಮಾಡಿಕೊಂಡು ನಂತರ ಅದನ್ನು ೯.೦೪ ಗೆ ಅಪ್ಡೇಟ್ ಮಾಡಿಕೊಳ್ಳಬೇಕು.
ಸರಿ. ೮.೧೦ಗೆ ಅಪ್ಡೇಟ್ ಮಾಡಿಕೊಳ್ಳಲಿಕ್ಕೆ ಏನ್ಮಾಡ್ಬೇಕು?
ಮೊದಲು alt+f2 ಕೀಗಳನ್ನು ಪ್ರೆಸ್ ಮಾಡಿ ಅಥವಾ Applications -> Accessories -> Terminal ತೆಗೆದುಕೊಂಡು ಕೆಳಗಿನ ಕಮ್ಯಾಂಡ್ ಟೈಪ್ ಮಾಡಿ.
sudo update-manager -d
ಇದಾದ ನಂತರ ಮುಂಬರುವ ಅಪ್ಡೇಟ್ ಮ್ಯಾನೇಜರ್ ನಲ್ಲಿ ಸ್ವಲ್ಪ ಕಣ್ಣಾಡಿಸಿ.
Quote:
New distribution release ’8.10′ is available [upgrade]
ಕಾಣಿಸ್ತಿರಬೇಕಲ್ವಾ? ಈಗ ಅಲ್ಲಿ [upgrade] ಮೇಲೆ ಕ್ಲಿಕ್ ಮಾಡಿ.
ಸೂಚನೆ ೧:- ಇದಕ್ಕೆಲ್ಲಾ ಇಂಟರ್ನೆಟ್ ಇರಲೇಬೇಕು ಮತ್ತೆ ಈ ಅಪ್ಗ್ರೇಡ್ ಗಳು ಎನಿಲ್ಲವೆಂದರೂ ೬೦೦ ಎಂ.ಬಿ ಇಂದ ೧ ಜಿ.ಬಿಯ ವರೆಗೆ ತಂತ್ರಾಂಶಗಳನ್ನು ಡೌನ್ಲೋಡ್ ಮಾಡಬಹುದು. ನಿಮ್ಮ ಸಿಸ್ಟಂನಲ್ಲಿ ಇನ್ಸ್ಟಾಲ್ ಆಗಿರುವ ತಂತ್ರಾಂಶಗಳು ಇದನ್ನು ನಿರ್ಧರಿಸುತ್ತವೆ.
ಸರಿ. ಅಪ್ರ್ಗೇಡ್ ಕೊಟ್ಟಾಯ್ತಲ್ಲ. ಅರಾಮಾಗಿ ಕೂರಿ ಅದು ಮುಗಿಯುವವರೆಗೆ .
ಸೂಚನೆ ೨:- ನಿಮ್ಮ ಸಿಸ್ಟಂ ನಲ್ಲಿ 3rd party ಸೋರ್ಸ್ ಗಳನ್ನು ಅಳವಡಿಸಿಕೊಂಡರೆ, ಈ ಅಪ್ಡೇಟ್ ಆಗದೇ ಹೋಗಬಹುದು. System -> Administration -> Software Sources ಇಲ್ಲಿ ಉಬುಂಟುವಿನ ಸೋರ್ಸ್ ಗಳನ್ನು ಮಾತ್ರ ಆಯ್ಕೆ ಮಾಡಿಕೊಂಡು ಬೇರೆಯವನ್ನು ಡಿಸೇಬಲ್ ಮಾಡಿ ನಂತರ ಅಪ್ಡೇಟ್ ಮಾಡಿದರೆ ಈ ತೊಂದರೆ ತಪ್ಪುತ್ತದೆ.
ಸೂಚನೆ ೩:- ಅಯ್ಯೋ ಕರೆಂಟ್ ಹೊರಟೋಯ್ತು ಮಧ್ಯದಲ್ಲಿ. ಈಗೇನು ಮಾಡೋದು? ಹೆದರಬೇಡಿ. ಇನ್ಸ್ಟಾಲೇಷನ್ ಸುರುವಾಗದ, ತಂತ್ರಾಂಶಗಳು ಇನ್ನೂ ಡೌನ್ಲೋಡ್ ಆಗ್ತಿತ್ತು ಅಂತಂದ್ರೆ ತೊಂದರೆ ಏನಿಲ್ಲ. ಮತ್ತೆ ಮೊದಲಿನಿಂದ ಅಪ್ಡೇಟ್ ಶುರುಮಾಡಿಕೊಳ್ಳಿ ಮೇಲೆ ಹೇಳಿದ ಹಾಗೆ. ಈಗಾಗಲೇ ಡೌನ್ಲೋಡ್ ಆಗಿರೋ ಪ್ಯಾಕೇಜ್ಗಳು ಮತ್ತೆ ಡೌನ್ಲೋಡ್ ಆಗಲ್ಲ. ಮಿಕ್ಕವನ್ನು ಮಾತ್ರ ಡೌನ್ಲೋಡ್ ಮಾಡಿಕೊಳ್ಳಲಾಗುತ್ತೆ.
ಸೂಚನೆ ೪:- ಸೂಚನೆ ೩ ರಲ್ಲಿ ಹೇಳಿದಂತೆ ಮಧ್ಯದಲ್ಲಿ ಅಪ್ಗ್ರೇಡ್ ಆಗದೇ ಉಳಿದ ಸಿಸ್ಟಂ ನಲ್ಲಿ ಜಿ.ಯು.ಐ ಬರದೆ ಬರಿ ಕನ್ಸೋಲ್ ಕಂಡರೆ ಮುಂದೇನು ಮಾಡೋದು?
ಇದಕ್ಕೆ ಅಪ್ಗ್ರೇಡ್ ಮುಂದುವರೆಸಿ ಬೇಕು. ಹೌದು ಕಮ್ಯಾಂಡ್ ಪ್ರಾಂಪ್ಟ್ ನಲ್ಲೇ. ಲಾಗಿನ್ ಆಗಿ ನಂತರ ಕೆಳಗಿನ ಕಮ್ಯಾಂಡ್ ಟೈಪ್ ಮಾಡಿ.
Quote:
sudo aptitude dist-upgrade
ಇದು ಮುಗಿದ ನಂತರ ಸಿಸ್ಟಂ ರೀಸ್ಟಾರ್ಟ್ ಮಾಡಿದರಾಯಿತು.
ಈಗ ಮತ್ತೆ ನಿಮ್ಮ ಉಬುಂಟುವಿನ ಆವೃತ್ತಿ ಯಾವುದೆಂದು ನೋಡಿ. ಇಷ್ಟರಲ್ಲೇ ಅದು ೮.೧೦ ಆಗಿರಬೇಕಲ್ಲವೇ? ಸಕತ್! ಸರಿ ಹಾಗಿದ್ರೆ ಇದನ್ನು ೯.೦೪ ಗೆ ಅಪ್ಡೇಟ್ ಮಾಡಿಕೊಂಡು ಬಿಡಿ.
೯.೦೪ ಗೆ ಹ್ಯಾಗೆ ಅಂದ್ರಾ?
ಮೇಲೆ ಹೇಳಿದ ಕಥೆಯನ್ನೇ ಮತ್ತೆ ಹೇಳ್ಬೇಕಾಗುತ್ತೆ ಗೊತ್ತಾಯ್ತಲ್ಲ?
ಈ ರೀತಿ ಅಪ್ಡೇಟ್ ಮಾಡಿಕೊಳ್ಳಬೇಕಾದಲ್ಲಿ ಕೆಲವೊಂದು 3rd party ತಂತ್ರಾಂಶಗಳು ಕೆಲಸ ಮಾಡದೇ ಹೋಗಬಹುದು. ಆ ತಂತ್ರಾಂಶದ ವೆಬ್ಸೈಟ್ ನಲ್ಲಿ ಹೊಸ ಉಬುಂಟು ಆವೃತ್ತಿಗೆ ಬೇಕಾದ Software Soures ನ ಮಾಹಿತಿ ಕೊಟ್ಟಿರುತ್ತಾರೆ. ಅದನ್ನು ಮತ್ತೆ ಸೇರಿಸಿಕೊಂಡರಾಯಿತು.
ಸೂಚನೆ ೫:- ನಿಮ್ಮ ಇಂಟರ್ನೆಟ್ ಕನೆಕ್ಷನ್ ಸೀಮಿತ ಡೌನ್ಲೋಡ್ ವ್ಯವಸ್ಥೆ ಹೊಂದಿದ್ದರೆ ಹುಷಾರು ಟೆಲಿಫೋನ್ ಬಿಲ್ ಮುಗಿಲು ಮುಟ್ಟೀತು..
ಇದು ಬೇಡ ಅಂದ್ರೆ, ಹೊಸ ಉಬುಂಟು ಆವೃತ್ತಿಯ ಸಿ.ಡಿಯನ್ನ https://ubuntu.com ನಿಂದ ತರಿಸಿಕೊಳ್ಳಿ ನಂತರ ಹೊಸದಾಗಿ ಉಬುಂಟು ಇನ್ಸ್ಟಾಲ್ ಅಥವಾ ಸಿ.ಡಿ ಇಂದಲೇ ಅಪ್ಗ್ರೇಡ್ ಮಾಡಿಕೊಳ್ಳಬಹುದು.
ಕೊನೆ ಮಾತು:- ನಮ್ಮ ಸಂಪದದ ಚಿಗುರು ಗ್ನು/ಲಿನಕ್ಸ್ ಅಪ್ಡೇಟ್ ಮಾಡೋದು ಕೂಡ ಹೀಗೆ ಗೊತ್ತಾ? ಆದ್ರೆ ಅದರಲ್ಲಿ ಉಬುಂಟುವಿನ ತರ ೬ ತಿಂಗಳಿಗೊಮ್ಮೆ ಹೊಸ ಆವೃತ್ತಿ ಬರೋದಿಲ್ಲ. ಇದರ ಬಗ್ಗೆ ಮೊದಲೊಮ್ಮೆ ಬರೆದಿದ್ದೆ. ಡೆಬಿಯನ್ ಆವೃತ್ತಿ ೫ ಹೊರಬಂದಾಗ ಅದನ್ನೊಮ್ಮೆ ಓದಿ.
ಈಗ ಉಬುಂಟು ೯.೦೪ ನೊಂದಿಗೆ ಮಜಾ ಮಾಡಿ.

Select rating
ಉತ್ತಮಪಡಿಸಲಾಗದ ಬರಹ
ಇನ್ನೂ ಉತ್ತಮವಾಗಬಹುದು
ಒಳ್ಳೆಯ ಬರಹ
ಚೆನ್ನಾಗಿದೆ!
ಉತ್ತಮ ಬರಹ!
Flat list – collapsed
Flat list – expanded
Threaded list – collapsed
Threaded list – expanded
ದಿನಾಂಕ – ಹೊಸತು ಮೊದಲು
ದಿನಾಂಕ – ಹಳೆಯವು ಮೊದಲು
10 comments per page
30 comments per page
50 comments per page
70 comments per page
90 comments per page
150 comments per page
200 comments per page
250 comments per page
300 comments per page
Select your preferred way to display the comments and click “Save settings” to activate your changes.
E drive ಖಾಲಿ ಇದ್ದರೆ ಇನ್ಸ್ಟಾಲ್ ಮಾಡಲು ಸಾಧ್ಯವಾಗಬೇಕು. ಖಾಲಿ ಇಲ್ಲದಿದ್ದರೆ gpartedmagic ಮುಖಾಂತರ ಖಾಲಿ ಮಾಡಿಕೊಳ್ಳಲು ಸಾಧ್ಯ. ಉಬುಂಟುಗೆ ಸುಮಾರು 20 GB, swap ಗೆ ಸುಮಾರು 2GB (ಅಥವಾ ram ನ ಎರಡರಷ್ಡು) ಇದ್ದರೆ ಸಾಕು.
ಹಾಗಾದರೆ ಖಾಲಿ ಡ್ರೈವನ್ನು ಡಿಲೀಟ್ ಮಾಡಿ ಇಲ್ಲವೇ ext3 ಗೆ ಫಾರ್ಮಾಟ್ ಮಾಡಿ. ಉಬುಂಟು ತಂತಾನೆ ಅಲ್ಲೇ ಸ್ಥಾಪಿಸಿಕೊಳ್ಳುತ್ತೆ. ಇಲ್ಲವೇ ಫೆಡೋರಾ ೧೧ ಪ್ರಯತ್ನಿಸಿ ನೋಡಿ. ಸ್ವಲ್ಪ ಪಾರ್ಟೀಶನ್ ಸುಲಭವಾಗಿದೆ. ವಿಂಡೊಸ್ ಪಾರ್ಟೀಶನ್ ಇರುವುದರಿಂದ ತೊಂದರೆ ಬರುತ್ತಿರಬಹುದು
Submitted by smurthygr on February 19, 2010 – 4:54pm.
ಬಹುಶಃ ಮಾಮೂಲು ಸಿಡಿ ಯಿಂದ ಅಪ್‌ಗ್ರೇಡ್ ಮಾಡಲು ಸಾಧ್ಯವಿಲ್ಲ. ಸಿಡಿ ಬಳಸಬೇಕಾದರೆ ’alternate’ ಸಿಡಿ ಅಂತ ಬೇರೆ ಒಂದು ಆವೃತ್ತಿ ಬಳಸಬೇಕು ಅಂತ ಎಲ್ಲೋ ಓದಿದ ನೆನಪು. ಇದನ್ನೇ ಓಂ ಶಿವಪ್ರಕಾಶ್ ಅವರೂ ಹೇಳಿದ್ದಾರೆ, ಇಲ್ಲಿ ನೋಡಿ:
* ಡೌನ್ಲೋಡ್ ಮಾಡಿಕೊಂಡ ಐ.ಎಸ್.ಓ ಫೈಲ್ ಅನ್ನು ಸಿ.ಡಿಗೆ ಬರೆದು ಕೊಂಡ ನಂತರ ಅದನ್ನು ಅಪ್ಗ್ರೇಡ್ ಮಾಡಬೇಕಿರುವ ಕಂಪ್ಯೂಟರ್ ನ ಸಿ.ಡಿ ರೊಮ್ ಗೆ ಹಾಕಿ.
o ಅಪ್ಗ್ರೇಡ್ ಮಾಡುವ ಕಂಪ್ಯೂಟರ್ ನಲ್ಲೇ ಡೌನ್ಲೋಡ್ ಮಾಡಿಕೊಂಡ ಐ.ಎಸ್.ಓ ಫೈಲ್ ಇದ್ದರೆ, ಕೆಳಗಿನ ಕಮ್ಯಾಂಡ್ ಬಳಸಿ ಉಬುಂಟು ಅಪ್ಗ್ರೇಡ್ ಮಾಡಿಕೊಳ್ಳ ಬಹುದಾದ್ದರಿಂದ ನೀವು ಒಂದು ಸಿ.ಡಿ ಕೂಡ ಉಳಿಸಬಹುದು:
sudo mount -o loop ~/Desktop/ubuntu-9.10-alternate-i386.iso /media/cdrom0>>
(ubuntu-9.10-alternate-i386.iso ಇದನ್ನು ಗಮನಿಸಿ)
ಅಂತರ್ಜಾಲದಿಂದ ನೇರವಾಗಿ ಅಪ್‌ಗ್ರೇಡ್ ಮಾಡುವ ನಿಮ್ಮ ಯತ್ನ ಸಫಲವಾಗಿರಬಹುದು ಅಂದುಕೊಂಡಿದ್ದೇನೆ – ದಯವಿಟ್ಟು ತಿಳಿಸಿ..
ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.
ಹಂಚಿಕೆಯ ಬಗ್ಗೆ

ಸ್ಕೈಪ್ ಅನ್ನು ಒಂದಲ್ಲಾ ಒಂದು ಕಾರಣದಿಂದ ನಮ್ಮಲ್ಲನೇಕರು ಗೆಳೆಯರೊಂದಿಗೆ, ವ್ಯವಹಾರಕ್ಕೆ, ಸಂಪರ್ಕದಲ್ಲಿರಲು, ಕಚೇರಿಯ ಸಂವಾದ, ಸಂದರ್ಶನ ಇತ್ಯಾದಿಗಳಿಗೆ ಬಳಸುತ್ತಲೇ ಇರುತ್ತೇವೆ. ಕೆಲವೊಮ್ಮೆ ಸ್ಕೈಪ್ ಮೂಲಕ ನೆಡೆಯುವ ಆಡಿಯೋ ಮತ್ತು ವಿಡಿಯೋ ಸಂವಾದಗಳು ಉಳಿಸಿಕೊಳ್ಳಲು ಸಾಧ್ಯವಿದ್ದಿದ್ದರೇ ಎಂದು ಅನಿಸಿರಬೇಕಲ್ಲವೇ? ಇದು...
ನಿಮ್ಮ ಪ್ರತಿಕ್ರಿಯೆಗಳು