ಲಿನಕ್ಸಾಯಣ – ೩೧ – ಓಪನ್ ಆಫೀಸ್ ನಲ್ಲಿ ಕನ್ನಡ

by | Sep 19, 2010 | ಸಾಮಾನ್ಯ ಜ್ಞಾನ | 0 comments

ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ? ಅಂತ  ಹಿಂದೊಮ್ಮೆ ಪ್ರಶ್ನೆ ಕೇಳಿದ್ದೆ ಅದಾದ ನಂತರ ಅದರಲ್ಲಿ ನಿಮಗೆ ಕಂಡು ಬಂದಿರ ಬಹುದಾದ ಸಮಸ್ಯೆಗಳ ಮಳೆ ಹರಿಯ ಬಹುದೆಂದು ಭಾವಿಸಿದ್ದು ತಪ್ಪಾಯಿತು. ಆದ್ರೆ, ನಾನೇ ಓಪನ್ ಆಫೀಸ್ ಬಳಸೋವಾಗ ಸಾಮಾನ್ಯವಾಗಿ ಕಾಣಸಿಗುವ ಸಮಸ್ಯೆಯನ್ನ ನಿಮ್ಮ ಮುಂದೆ ಇಡೋಣ ಅಂತ ಕುಳಿತಿದ್ದೇನೆ.

ಓಪನ್ ಆಫೀಸ್ ನಲ್ಲಿ ಅರ್ಕಾ ಒತ್ತು ಇರುವ ಅಕ್ಷರಗಳನ ಟೈಪಿಸುವಾಗ ಅಕ್ಷರಗಳು ಗೋಜಲು ಗೋಜಲಾಗಿ, ಮಾಯವಾಗೋದನ್ನ ಕಾಣ ಬಹುದು. ಉದಾಹರಣೆಗೆ, “ಆಶ್ಚರ್ಯ” ಅನ್ನೋದನ್ನ ಟೈಪ್ ಮಾಡ್ಲಿಕ್ಕೆ ಆಗ್ತಿರಲಿಲ್ಲ.

ಇದನ್ನ  ಸರಿ ಪಡಿಸೋದು ತುಂಬಾ ಸುಲಭ. ಡಾಕ್ಯುಮೆಂಟ್ ಮೇಲೆ ರೈಟ್ ಕ್ಲಿಕ್ ಮಾಡಿ, ಲೈನ್ ಸ್ಪೇಸ್ ಅನ್ನು ಸೆಲೆಕ್ಟ್ ಮಾಡಿ ನಂತರ ಅಲ್ಲಿ “1.5 lines” ಆಯ್ಕೆ ಮಾಡಿಕೊಳ್ಳಿ. ಕೆಳಗೆ ಕೊಟ್ಟಿರುವ ಚಿತ್ರ ನಿಮಗೆ ಅದನ್ನ ಹೇಗೆ ಮಾಡಬಹುದು ಎನ್ನೋದನ್ನ ತಿಳಿಸುತ್ತದೆ. ಇದಾದ ನಂತರ ಮತ್ತೆ “ಆಶ್ಚರ್ಯ” ಅಂತ ಟೈಪ್ ಮಾಡಿ ನೋಡಿ. ನಿಮ್ಮ ಸಮಸ್ಯೆ ಬಗೆ ಹರಿದಿರುತ್ತದೆ.

(ಚಿತ್ರವನ್ನು ಹಿರಿದಾಗಿಸಲು ಅದರ ಮೇಲೆ ಕ್ಲಿಕ್ ಮಾಡಿ)

ನಿಮಗೆ ಈ ರೀತಿಯ ಸಮಸ್ಯೆಗಳು ಎದುರಾದಲ್ಲಿ ಸಂಪದದ [email protected] ಗೆ ಒಂದು ಮೈಲಾಯಿಸಿ. ನಮಗೆ ತಿಳಿದಿರುವ ಉತ್ತರಗಳನ್ನ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ ಇಲ್ಲವಾದಲ್ಲಿ ಬಿಡಿಸಲಾಗದ ಸಮಸ್ಯೆಗಳನ್ನ ಟೆಕಿಗಳ ಮುಂದಿಟ್ಟಂತಾಗುತ್ತದೆ. ಸಮಸ್ಯೆಗಳನ್ನ ಬಿಡಿಸಲಿಕ್ಕೆ ಕೈ ಮಿಲಾಯಿಸಿ ಕನ್ನಡವನ್ನ ಉತ್ತಮ ರೀತಿಯಲ್ಲಿ ಸ್ವತಂತ್ರ ತಂತ್ರಾಂಶದೊಡನೆ ಬಳಸಿ.

ಜಾಹೀರಾತು Divi WordPress Theme

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಹಂಚಿಕೆಯ ಬಗ್ಗೆ

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಇವನ್ನೂ ಓದಿ

Related

ಸ್ಕೈಪ್(Skype)ಕಾಲ್ ರೆಕಾರ್ಡ್ ಮಾಡಿ

ಸ್ಕೈಪ್ ಅನ್ನು ಒಂದಲ್ಲಾ ಒಂದು ಕಾರಣದಿಂದ ನಮ್ಮಲ್ಲನೇಕರು ಗೆಳೆಯರೊಂದಿಗೆ, ವ್ಯವಹಾರಕ್ಕೆ, ಸಂಪರ್ಕದಲ್ಲಿರಲು,  ಕಚೇರಿಯ ಸಂವಾದ, ಸಂದರ್ಶನ ಇತ್ಯಾದಿಗಳಿಗೆ ಬಳಸುತ್ತಲೇ ಇರುತ್ತೇವೆ. ಕೆಲವೊಮ್ಮೆ ಸ್ಕೈಪ್ ಮೂಲಕ ನೆಡೆಯುವ ಆಡಿಯೋ ಮತ್ತು ವಿಡಿಯೋ ಸಂವಾದಗಳು ಉಳಿಸಿಕೊಳ್ಳಲು ಸಾಧ್ಯವಿದ್ದಿದ್ದರೇ ಎಂದು ಅನಿಸಿರಬೇಕಲ್ಲವೇ? ಇದು...

read more
Share This