ತಾಂತ್ರಿಕ ಪದಗಳ ಬಳಕೆ

by | Oct 10, 2010 | ಸಾಮಾನ್ಯ ಜ್ಞಾನ | 0 comments

ತಾಂತ್ರಿಕ ಪದಗಳ ಬಳಕೆ ತಂತ್ರಜ್ಞಾನಕ್ಕೆ ಸಂಭಂದ ಪಟ್ಟ ಲೇಖನಗಳಲ್ಲಿ ಪುಸ್ತಕಗಳಲ್ಲಿ ಸರ್ವೇಸಾಮಾನ್ಯ ಅಥವಾ ಅನಿವಾರ್ಯ. ತಂತ್ರಜ್ಞಾನದ ನಿಜ ಅರ್ಥ ತಿಳಿಯಲು ಏನೇನೆಲ್ಲಾ ಕಸರತ್ತು ಮಾಡಬೇಕಲ್ಲವೇ? ಇಲ್ಲಿದೆ ಅದಕ್ಕೊಂದು ಪಟ್ಟಿ. ಇದು ನಿಮಗೆ ಲಿನಕ್ಸ್ ಕಲಿಯುವಾಗ ಮಾರ್ಗದರ್ಶಿಯಾಗಬಲ್ಲದು.

  • ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳ ಸಮುದಾಯದೊಂದಿಗೆ ಬೆರೆಯಿರಿ
  • ತಂತ್ರಜ್ಞಾನ ಸಂಬಂದೀ ಲೇಖನಗಳನ್ನು, ಟಿಪ್ಪಣಿಗಳನ್ನು ಓದಿಕೊಳ್ಳಿ
  • ವಿಕಿಪೀಡಿಯಾ ಬಳಸಿ
  • ಟ್ವಿಟರ್, ಪೇಸ್ಬುಕ್ ಗೆಳೆಯರ ಜೊತೆ ಒಡನಾಡಿ
  • ಇಂಟರ್ನೆಟ್ ರಿಲೆ ಚಾಟ್ ನಲ್ಲಿ ತಂತ್ರಜ್ಞರ ನೆರವು ಪಡೆಯಿರಿ (IRC)
  • superuser.com, stackoverflow.com ನಂತಹ ವೇದಿಕೆಗಳಲ್ಲಿ ಪ್ರಶ್ನೆಗಳನ್ನು ಕೇಳಿ
  • ನಿಮ್ಮ ತಲೆಗೆ ಹೊಳೆದ ಪ್ರಶ್ನೆಗಳನ್ನು ಇತರರೊಡನೆ ಚರ್ಚಿಸುವುದನ್ನು ಹೆಚ್ಚು ಅಭ್ಯಾಸ ಮಾಡಿಕೊಳ್ಳಿ
  • ಎಲ್ಲಕ್ಕೂ ಮುಂಚೆ ಲಭ್ಯವಿರುವ ಎಲ್ಲ ಓದುವ ಸಾಮಗ್ರಿಗಳ ಮೇಲೆ ಒಂದು ಕಣ್ಣಾಡಿಸಿ.. ಉತ್ತರ ನಿಮಗೇ ಹೊಳೆಯ ಬಹುದು. ಇಲ್ಲವಾದಲ್ಲಿ ನೀವು ಇತರರಿಗೆ ಸುಮ್ಮನೇ ಸಮಯ ವ್ಯರ್ಥ ಮಾಡುತ್ತಿರಬಹುದು. ಇಲ್ಲವೆಂದರೆ ಮೇಲೆ ಹೇಳಿದ ಮಾರ್ಗಗಳ ಮೂಲಕ ಪ್ರಶೆಗಳನ್ನು ಕೇಳಿದರೂ ಕೂಡ ಅವರು ನಿಮಗೆ ನನ್ನ ಈ ಕೊನೆಯ ಸೂಚನೆಯನ್ನೇ ನೀಡಬಹುದು. (RTFM ಎಂಬ ಚಾಟ್ ಕಿರುಪದ (acronym) ಇದಕ್ಕೆಂದೇ ಪ್ರಸಿದ್ದಿಯಲ್ಲಿದೆ)

ಲಿನಕ್ಸಾಯಣದಲ್ಲಿ ಅನೇಕ ತಾಂತ್ರಿಕ ಪದಗಳನ್ನು ಇಂಗ್ಲೀಷ್ ನ ಮೂಲ ರೂಪದಲ್ಲಿಯೇ ಉಳಿಸಿಕೊಳ್ಳಲಾಗಿದೆ. ತಂತ್ರಜ್ಞಾನದ ಬಗ್ಗೆ ಓದುವಾಗ ಅಲ್ಲಿ ಕಂಡು ಬರುವ ತಾಂತ್ರಿಕ ಪದಗಳ ಬಗೆಗಿನ ಹೆಚ್ಚಿನ ಮಾಹಿತಿ ಇಂಟರ್ನೆಟ್ ನಲ್ಲಿ ಇತರ ಪುಸ್ತಕಗಳಲ್ಲಿ ಇಂಗ್ಲೀಷ್ ನಲ್ಲಿಯೇ ಇರುವುದರಿಂದ, ಅದರ ಬಗೆಗಿನ ಮುಂದಿನ ಸಂಶೋದನೆ ಇತ್ಯಾದಿಗಳಿಗೆ  ಭಾಷಾಂತರ ಗೊಳಿಸಿದ ಪದ ಓದುಗನ ತಿಳಿವಿನ ಪ್ರಪಂಚಕ್ಕೆ, ಕುತೂಹಲವನ್ನು ತಣಿಸುವ ಕಾರ್ಯಕ್ಕೆ ತೊಡಕುಂಟು ಮಾಡದಿರಲಿ. ಮತ್ತಷ್ಟು ಲೇಖನಗಳು ಅದೇ ಪದದ ಮೇಲೆ ಕನ್ನಡದಲ್ಲಿ ಬರಲಿ ಎಂಬುದೇ ಇದರ ಹಿಂದಿನ ಸದುದ್ದೇಶ.

ಜಾಹೀರಾತು Divi WordPress Theme

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಹಂಚಿಕೆಯ ಬಗ್ಗೆ

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಇವನ್ನೂ ಓದಿ

Related

ಸ್ಕೈಪ್(Skype)ಕಾಲ್ ರೆಕಾರ್ಡ್ ಮಾಡಿ

ಸ್ಕೈಪ್ ಅನ್ನು ಒಂದಲ್ಲಾ ಒಂದು ಕಾರಣದಿಂದ ನಮ್ಮಲ್ಲನೇಕರು ಗೆಳೆಯರೊಂದಿಗೆ, ವ್ಯವಹಾರಕ್ಕೆ, ಸಂಪರ್ಕದಲ್ಲಿರಲು,  ಕಚೇರಿಯ ಸಂವಾದ, ಸಂದರ್ಶನ ಇತ್ಯಾದಿಗಳಿಗೆ ಬಳಸುತ್ತಲೇ ಇರುತ್ತೇವೆ. ಕೆಲವೊಮ್ಮೆ ಸ್ಕೈಪ್ ಮೂಲಕ ನೆಡೆಯುವ ಆಡಿಯೋ ಮತ್ತು ವಿಡಿಯೋ ಸಂವಾದಗಳು ಉಳಿಸಿಕೊಳ್ಳಲು ಸಾಧ್ಯವಿದ್ದಿದ್ದರೇ ಎಂದು ಅನಿಸಿರಬೇಕಲ್ಲವೇ? ಇದು...

read more
Share This